ಸ್ವಯಂಪ್ರೇರಿತವಾಗಿ ರಕ್ತದಾನ ಕಾರ್ಯದಲ್ಲಿ ಪಾಲ್ಗೊಳ್ಳಿ: ಡಿಎಫ್‌ಓ ಗಣಪತಿ ಕೆ
ಉಡುಪಿ:ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರದೇಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ದೃಷ್ಠಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಸ್ವಯಂಪ್ರೇರಿತವಾಗಿಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಮಾದರಿ ಆಗಬೇಕು ಎಂದು ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ ಹೇಳಿದರು. ಅವರು ಬುಧವಾರ ನಗರದ ಪುರಭವನ (ಟೌನ್‌ಹಾಲ್)ನಲ್ಲಿ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ (ರಿ), ಗಸ್ತು ಅರಣ್ಯಪಾಲಕರ ಮತ್ತು ವೀಕ್ಷಕರ ಸಂಘ (ರಿ) ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾ […]
ಎಂ ಐ ಟಿ ಕುಂದಾಪುರದಲ್ಲಿ 17ನೇ ಗ್ರಾಜುಯೇಷನ್ ಡೇ
ಕುಂದಾಪುರ: ಎಂ ಐ ಟಿ ಕುಂದಾಪುರದಲ್ಲಿ ವ 17ನೇ ಬ್ಯಾಚ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದೇ ಸೆಪ್ಟೆಂಬರ್ 9 ರಂದು ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಮಿರಾಪ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಹಾರ್ಡ್‌ವೇರ್ ಇಂಜಿನಿಯರಿಂಗ್ ಉಪಾಧ್ಯಕ್ಷರಾದ ಶ್ರೀ ವಿನೋದ್ ಜಾನ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ವಿನೋದ್ ಜಾನ್ ಅವರು ತಮ್ಮ ಪದವಿ ಪ್ರಧಾನ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಗುರಿಗಳನ್ನು ಹೊಂದಲು ಸಲಹೆ ನೀಡಿದರು ಮತ್ತು ಪ್ರಾಮಾಣಿಕತೆ, ವಿನಮ್ರತೆ ಮತ್ತು ಕಠಿಣ ಪರಿಶ್ರಮವು […]
ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ: 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ‘ಉಚಿತ ಆರೋಗ್ಯ ವಿಮೆ’
ನವದೆಹಲಿ: 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರನ್ನು ಈಗ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ವಿಮಾ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಪ್ರಮುಖ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕ್ರಮವು ಆರು ಕೋಟಿ ಹಿರಿಯ ನಾಗರಿಕರನ್ನು ಹೊಂದಿರುವ ಸುಮಾರು 4.5 ಕೋಟಿ ಕುಟುಂಬಗಳಿಗೆ ಕುಟುಂಬ ಆಧಾರದ ಮೇಲೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ. 70 ವರ್ಷ […]
ಕ್ರಿಯೇಟಿವ್ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ವಿರೋಧಿ ದಿನಾಚರಣೆಯ ಪ್ರಯುಕ್ತ ಮಾಹಿತಿ ಕಾರ್ಯಗಾರ.
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ 10 ಸೆಪ್ಟೆಂಬರ್ 2024ರಂದು ವಿಶ್ವ ಆತ್ಮಹತ್ಯೆ ವಿರೋಧಿ ದಿನಾಚರಣೆಯ ಕುರಿತು ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಮತಿ ಕ್ಯಾಥರೀನ್ ಜೆನ್ನಿಫರ್, ಕ್ಲಿನಿಕಲ್ ಸೈಕಾಲಜಿಸ್ಟ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಉಡುಪಿ ಇವರು ಮಾತನಾಡಿ ‘ ಈ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಸಾಮರ್ಥ್ಯವೇನು ಎಂಬುದನ್ನು ಅರಿತು ಅದರಂತೆ ಜೀವಿಸಬೇಕು. ಬೇರೆಯವರ ಜೀವನಶೈಲಿ ನಮ್ಮದಾಗದಿರಲಿ. ಸಕಾರಾತ್ಮಕ ಮನೋಭಾವ, ಚಿಂತನೆಗಳನ್ನು ಅನುಸರಿಸಬೇಕು’ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ […]
ಕುಂದಾಪುರ: ಕುಸಿದು ಬಿದ್ದು ವ್ಯಕ್ತಿ ಮೃತ್ಯು.
ಗಂಗೊಳ್ಳಿ: ನಾವುಂದ ಗ್ರಾಮದ ಚಂದ್ರ (43) ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಮರವಂತೆ ಬಂದರಿನಿಂದ ದೋಣಿಯಲ್ಲಿ ಸಂಗಡಿಗರೊಂದಿಗೆ ಮೀನುಗಾರಿಕೆಗೆ ತೆರಳಿದ್ದಾಗ ಕುಸಿದು ಬಿದ್ದು ಬಳಿಕ ಮೃತಪಟ್ಟಿದ್ದಾರೆ. ಗಾಳಿ ಮಳೆ ಒಮ್ಮೆಲೆ ಬೀಸಿದಾಗ ಕುಸಿದು ದೋಣಿಯಲ್ಲಿ ಬಿದ್ದು ಎದೆ ನೋವು ಎಂದು ಹೇಳಿ ಮೂರ್ಛೆ ಹೋದರು. ದೋಣಿಯಲ್ಲಿ ದಡಕ್ಕೆ ತಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆಯಲ್ಲಿರುವಾಗ ಮೃತಪಟ್ಟಿದ್ದಾರೆ.