ಕಾರ್ಕಳ: ಹಿರಿಯ ರಂಗಭೂಮಿ ಕಲಾವಿದ ಕೆ.ಪಿ.ಶಾಂಭವ ನಿಧನ

ಕಾರ್ಕಳ: ಹಿರಿಯ ರಂಗಭೂಮಿ ಕಲಾವಿದ, ಗಾಯಕ, ನಾಟಕ ರಚನೆಕಾರ‌, ನಿರ್ದೇಶಕ ಕೆ.ಪಿ.ಶಾಂಭವ ಕಾರ್ಕಳ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತನ್ನ ಬಾಲ್ಯದಿಂದಲೇ ರಂಗಭೂಮಿಯಲ್ಲಿ ತನ್ನನ್ನು ತೊಡಗಿಕೊಂಡ ಇವರು ಕರಾವಳಿ ಸಂಗೀತ ಒಕ್ಕೂಟದ ಸದಸ್ಯ ರಾಗಿದ್ದು, ದೇವೆರ್ ತುಳು ಚಿತ್ರದಲ್ಲಿ ಇವರ ಮನೋಜ್ಞ ನಟನೆ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಕುಂದಾಪುರ:ನನ್ನ ಸಂಗೀತ ಸಂಯೋಜನೆ ನಿರ್ದೇಶನಕ್ಕೆ ಬಳ್ಕೂರೇ ಮೂಲ- ಪ್ರಸಿದ್ಧ ಸಂಗೀತ ನಿರ್ದೇಶಕ ರವಿ ಬಸ್ರೂರು.

ಕುಂದಾಪುರ:ಮಕ್ಕಳು ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಬಳ್ಕೂರಿನ ಜನ ಒಳ್ಳೆಯ ಮನಸ್ಸಿನವರು ಒಳ್ಳೆಯ ಕಾರ್ಯಗಳಿಗೆ ಹೆಗಲು ಕೊಡುತ್ತಾರೆ ದೇವತಾ ಕಾರ್ಯಗಳು ಮನಸ್ಸುಗಳನ್ನು ಒಂದು ಮಾಡುತ್ತವೆ. ನನ್ನ ಮೊದಲ ನಿರ್ದೇಶನದ ಸಂಗೀತ ಸಂಯೋಜನೆಯಾಗಿದ್ದು ಬಳ್ಕೂರಿನ ಫ್ರೆಂಡ್ಸ್ ಯುವಕ ಮಂಡಲ ತಂಡದವರು ಅಭಿನಯಿಸಿದ ನಾಟಕ ಪ್ರದರ್ಶನಕ್ಕೆ ಸಂಗೀತ ಸಂಯೋಜನೆ ಮಾಡಿದ್ದೇನೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ಬಳ್ಕೂರಿನಿಂದಲೇ ನನ್ನ ಸಂಗೀತ ಸಂಯೋಜನೆ ಆರಂಭಗೊಂಡು ಹಲವು ಸಿನಿಮಾಗಳಲ್ಲಿ ಇಂದು ನಿರ್ದೇಶನ ಮಾಡುತ್ತಿದ್ದೇನೆ. ಬಹಳಷ್ಟು ಮಂದಿ ಕಲಾವಿದರು ಈ ಊರಿನಲ್ಲಿದ್ದಾರೆ. […]

ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದ ಜಗತ್ತಿನ ಮೊದಲ ರಾಜತಾಂತ್ರಿಕ ಕೃಷ್ಣ: ಉಜಿರೆ ಅಶೋಕ ಭಟ್ಟ

ಮೂಡುಬಿದಿರೆ: ಕೃಷ್ಣ ಬರಿಯ ನಾಯಕತ್ವ ಗುಣ ಹೊಂದಿದವನಲ್ಲ ಆತ ನಾಯಕತ್ವದ ನಿರ್ಮಾತೃ ಎಂದು ಯಕ್ಷಗಾನ ಸಂಘಟಕ ಹಾಗೂ ಪ್ರವಚನಕಾರ ಉಜಿರೆ ಅಶೋಕ ಭಟ್ಟ ನುಡಿದರು. ಅವರು ಮಂಗಳವಾರ ಆಳ್ವಾಸ್ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಪ್ರಜ್ಞಾ ಜಿಜ್ಞಾಸ ವೇದಿಕೆ, ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ನಾಯಕತ್ವದ ನಿರ್ಮಾಣದಲ್ಲಿ ಕೃಷ್ಣನ ಕೊಡುಗೆ’ ವಿಷಯದ ಕುರಿತು ಮಾತನಾಡಿದರು. ರಾಮ, ಕೃಷ್ಣ ದೇವರಲ್ಲ, ಬದಲಾಗಿ ಅವರು ಯುಗಧರ್ಮದ ನಾಯಕರು. ಕೇವಲ ಭಾವುಕ ಭಕ್ತಿಯಿಂದ ಅವರನ್ನು ದೇವರು ಅಂತ ನೋಡಬೇಕಿಲ್ಲ, ಪ್ರಾಯೋಗಿಕವಾಗಿ ನೋಡಬೇಕು. ರಾಮ […]

ಕುಂದಾಪುರ:ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ.

ಕುಂದಾಪುರ: ಕುಂದಾಪುರದ ಸೈಂಟ್ ಜೋಸೆಫ್ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಯುಕ್ತಾ ಹೊಳ್ಳ ಸಂಸ್ಕೃತ ಭಾಷಣದಲ್ಲಿ ಪ್ರಥಮ, ಶುಕ್ತಿಜಾ ಸತೀಶ್ ಭರತನಾಟ್ಯದಲ್ಲಿ ಪ್ರಥಮ, ಸುಮಂತ್ ಭಟ್ ಮತ್ತು ತರುಣ್ ಪ್ರಭು ರಸಪ್ರಶ್ನೆಯಲ್ಲಿ ಪ್ರಥಮ, ಕೆ. ಶ್ರೀನಿತಾ. ಎಸ್. ಕಾಮತ್ ರಂಗೋಲಿ ಯಲ್ಲಿ ದ್ವಿತೀಯ, ದಿವ್ಯಶ್ರೀ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಅಪೂರ್ವ ಸಾಧನೆಗೆ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ , […]

ಉಡುಪಿ: ಸೆ.13ರಿಂದ 20ರ ವರೆಗೆ “ಯಕ್ಷ ಪಂಚಮಿ-2024”

ಉಡುಪಿ: ಉಡುಪಿ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಉಡುಪಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಇದರ ಸಹಕಾರದೊಂದಿಗೆ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಇವರ ವತಿಯಿಂದ “ಯಕ್ಷ ಪಂಚಮಿ-2024” ಕಾರ್ಯಕ್ರಮ ಇದೇ ಸೆ.13ರಿಂದ 20ರ ವರೆಗೆ ಉಡುಪಿ ರಾಜಾಂಗಣದಲ್ಲಿ ನಡೆಯಲಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ […]