ಉಡುಪಿ: ಗ್ಯಾಸ್ ಸಿಲಿಂಡರ್ ಡೆಲಿವರಿ ಸಂದರ್ಭದಲ್ಲಿ ಓಟಿಪಿ ನೀಡುವುದು ಕಡ್ಡಾಯ.

ಉಡುಪಿ: ಹೆಚ್ಚಿನ ಪಾರದರ್ಶಕತೆಗಾಗಿ ಗ್ಯಾಸ್ ಸಿಲಿಂಡರ್ ಸಿಬ್ಬಂದಿಗೆ ಡೆಲಿವರಿ ಸಂದರ್ಭದಲ್ಲಿ ಓಟಿಪಿ(OTP) ನೀಡುವುದು ಕಡ್ಡಾಯ ಎಂದು ಹೆಚ್.ಪಿ ಡೀಲರ್ ಆಗಿರುವ ಬಾಲಾಜಿ ರಾಘವೇಂದ್ರ ಆಚಾರ್ಯ ಉಡುಪಿ ಇವರು ತಿಳಿಸಿರುತ್ತಾರೆ. ಮೊಬೈಲ್ ನಂಬರ್ ಬದಲಿಸ ಬೇಕಾದಲ್ಲಿ ಕಚೇರಿಗೆ ಗ್ಯಾಸ್ ಡಾಕ್ಯುಮೆಂಟ್ ನೊಂದಿಗೆ ಬರಬೇಕು ಅಥವಾ ಡೆಲಿವರಿ ಸಿಬ್ಬಂದಿಯ ಮೂಲಕ ಬದಲಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ: ರಂಗಭೂಮಿ ಉಡುಪಿಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆ.

ಉಡುಪಿ: ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಡುಪಿಯ ಡಯನ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಂಸ್ಥೆಯ 59ನೇ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನ ಪದಾಧಿಕಾರಿಗಳು ಆಯ್ಕೆ ನಡೆಯಿತು. ಮಾರ್ಗದರ್ಶಕರಾಗಿ ಡಾ. ಹೆಚ್. ಶಾಂತಾರಾಮ್, ಗೌರವಾಧ್ಯಕ್ಷರಾಗಿ ಡಾ. ಹೆಚ್. ಎಸ್. ಬಲ್ಲಾಳ್, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು, ಹಾಗೂ ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್‌ ಚಂದ್ರ ಕುತ್ಪಾಡಿ ಆಯ್ಕೆಯಾದರು. […]

ತಕ್ಷಣ ಬೇಕಾಗಿದ್ದಾರೆ

ಉಡುಪಿ: ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. https://docs.google.com/forms/d/e/1FAIpQLSd0RJe9MRm70Khqh1Ryx-EN8VJODcuqhwWa-ATvjcLuIaXZaA/viewform?usp=sf_link

ಉಡುಪಿ: ಕಡಿಯಾಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವ್ಯಕ್ತಿ ನಾಪತ್ತೆ.

ಉಡುಪಿ, ಸೆಪ್ಟೆಂಬರ್ 12: ನಗರದ ಕಡಿಯಾಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವಿಜಯ ಶೆಟ್ಟಿ(57) ಎಂಬ ವ್ಯಕ್ತಿಯು ಸೆಪ್ಟಂಬರ್ 6 ರಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ. 157 ಸೆ.ಮೀ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.