ಉಡುಪಿ: ತವರೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗವಹಿಸಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿ: ಖ್ಯಾತ ನಟ ರಕ್ಷಿತ್ ಶೆಟ್ಟಿ, ತನ್ನ ತವರೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ. ಉಡುಪಿಯ ಕುಕ್ಕಿಕಟ್ಟೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ, ತನ್ನ ಮೂಲ ಗ್ರಾಮವಾಗಿರುವ ಅಲೆವೂರಿನ ಕಟ್ಟೆ ಗಣಪತಿ ದೇವರಿಗೆ ಕೈ ಮುಗಿಯಲು ಹೋದಾಗ ನೂರಾರು ಜನ ಅಭಿಮಾನಿಗಳು ಮುಗಿಬಿದ್ದರು. ತನ್ನ ಊರಿನ ಜನರಿಗೆ ಸೆಲ್ಫಿಗೆ ಪೋಸು ಕೊಟ್ಟ ನಟ ರಕ್ಷಿತ್ ಶೆಟ್ಟಿ, ಬಳಿಕ ಕಟ್ಟೆ ಗಣಪತಿಗೆ ವಿಶೇಷ ಪೂಜೆ ನಡೆಸಿದರು. ಈ ವೇಳೆ ಅರ್ಚಕರು ಪ್ರಾರ್ಥನೆ ನಡೆಸಿ ರಕ್ಷಿತ್ ಶೆಟ್ಟಿ ಭವಿಷ್ಯಕ್ಕೆ ಶುಭ ಕೋರಿದರು. ತವರಿನ […]

ಉಡುಪಿ: ಸರಕಾರಿ ಬಸ್ಸಿನಲ್ಲಿ ಕಳೆದು ಹೋದ ಬ್ಯಾಗ್ ಪತ್ತೆಹಚ್ಚಿ ಕರ್ತವ್ಯ ಪ್ರಜ್ಞೆ ಮೆರೆದ ಕಂಟ್ರೋಲ್ ರೂಮ್ ಸಿಬ್ಬಂದಿ

ಉಡುಪಿ: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕಳೆದು ಹೋದ ಅರ್ಚಕರೊಬ್ಬರ ನಗದು ಸಹಿತ ಬ್ಯಾಗ್ ಅನ್ನು ಪತ್ತೆ ಮಾಡುವ ಮೂಲಕ ಉಡುಪಿ ಎಸ್ಪಿ ಕಚೇರಿಯ ಕಂಟ್ರೋಲ್ ರೂಮ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕರಾದ ಶ್ರೀಧರ ತಂತ್ರಿ ಕಳತ್ತೂರು ಅವರು ಸೋಮವಾರ ರಾತ್ರಿ 11ಗಂಟೆಗೆ ಮಂಗಳೂರಿನಿಂದ ಶಿರಸಿಗೆ ಹೋಗುವ ಸರಕಾರಿ ಬಸ್ ಹತ್ತಿದ್ದಾರೆ. 12 ಗಂಟೆಗೆ ಸುಮಾರಿಗೆ ಕಾಪುವಿನಲ್ಲಿ ಇಳಿದಿದ್ದಾರೆ. ಬಸ್ ಇಳಿಯುವ ಸಂದರ್ಭದಲ್ಲಿ 18 ಸಾವಿರ ನಗದು, […]

ಶಂಕರನಾರಾಯಣ: ವಾರಾಹಿ ಕಾಲುವೆಗೆ ಹಾರಿ ಗೃಹಿಣಿ ಆತ್ಮಹತ್ಯೆ.

ಶಂಕರನಾರಾಯಣ: ಉಳ್ಳೂರು-74 ಗ್ರಾಮದ ದೊಡ್ಮನೆ ಸುನಿತಾ(42) ಅವರು ಮಾನಸಿಕ ಖಾಯಿಲೆಯಿಂದ ಬಳುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.9ರಂದು ವಾರಾಹಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಸೆ. 8ರ ರಾತ್ರಿ ಊಟ ಮಾಡಿ ಮಲಗಿದ್ದ ಸುನಿತಾ ಅವರು ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಹುಡುಕಾಡಿದ್ದಾಗ, ವಾರಾಹಿ ಕಾಲುವೆಯ ಸಿಮೆಂಟ್‌ ದಂಡೆಯ ಮೇಲೆ ಸುನಿತಾ ಅವರ ಮೃತ ಪತ್ತೆಯಾಗಿದೆ. ಹಿಂದೆಯೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪುತ್ರ ಸುಮಂತ್‌(20) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ […]

ಮಣಿಪಾಲ: ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಲಾಭಾಂಶಕ್ಕಾಗಿ ವ್ಯಕ್ತಿಯೊಬ್ಬರು ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ವಂಚನೆಗೆ ಒಳಗಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸಂತೋಷನಗರದ ಮಹಮ್ಮದ್ ಶರೀಫ್(28) ಎಂಬವರು ಹೆಚ್ಚಿನ ಲಾಭಾಂಶ ನೀಡುವ ಮೊಬೈಲ್ ಸಂದೇಶವನ್ನು ನಂಬಿ ಹಣ ಹೂಡಿಕೆ ಮಾಡಿದ್ದರು. ಇವರು ಬೇರೆ ಬೇರೆ ಅವಧಿಯಲ್ಲಿ ಒಟ್ಟು 8,46,583ರೂ. ಹಣವನ್ನು ಹೂಡಿಕೆ ಮಾಡಿದ್ದು, ಆರೋಪಿಗಳು ಆ ಹಣವನ್ನು ತಮ್ಮ ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.

ಉಡುಪಿ: ಬಲ್ಲಾಳ್ ಮೊಬೈಲ್ ನಲ್ಲಿ ‘ಐಫೋನ್‌’ ಜೊತೆಗೆ ಉಚಿತವಾಗಿ ಪಡೆಯಿರಿ 9,999 ರೂ. ಮೌಲ್ಯದ ಗಿಫ್ಟ್.

ಉಡುಪಿ: ಆಪಲ್ ಐಫೋನ್ ನೂತನವಾಗಿ ಹೊರತಂದಿರುವ “ಆಪಲ್ ದಿ ಐ ಫೋನ್ 16′, ‘ಆಪಲ್ ವಾಚ್ ಸೀರೀಸ್ 10’ ಮತ್ತು ‘ಏರ್ಪೋಡ್ ಸೀರಿಸ್ 4’ ಗಳನ್ನು ಸೆ.10 ರಿಂದ ಉಡುಪಿಯ ಕಲ್ಪನಾ ಚಿತ್ರಮಂದಿರದ ಬಳಿಯ ‘ಬಲ್ಲಾಳ್ ಮೊಬೈಲ್ ನಲ್ಲಿ ಬುಕ್ಕಿಂಗ್‌ ಪ್ರಾರಂಭವಾಗಿದೆ. ಈ ನೂತನ ಆಪಲ್ ಉತ್ಪನ್ನಗಳು “ಬಲ್ಲಾಳ್ ಮೊಬೈಲ್ಸ್” ನಲ್ಲಿ ಮುಂಗಡವಾಗಿ ಬುಕ್ ಮಾಡಿ, ಪ್ರತಿಯೊಬ್ಬ ಗ್ರಾಹಕರಿಗೆ 9,999 ರೂ. ಮೌಲ್ಯದ ಮೊಬೈಲ್ ಸಲಕರಣೆಗಳು ಉಚಿತವಾಗಿ ಪಡೆಯಿರಿ. ಇಂದೇ ನಿಮ್ಮ ಕನಸಿನ ಐಫೋನ್ ಬುಕ್ ಮಾಡಿ… […]