ಕಟಪಾಡಿಯ ತ್ರಿಶಾ ಸಂಸ್ಥೆಯಲ್ಲಿ ಶ್ರೀ ವಿದ್ಯಾ ವಿನಾಯಕ ಸಂಭ್ರಮೋತ್ಸವ

ಕಟಪಾಡಿ: ತ್ರಿಶಾ ಸಂಸ್ಥೆಯು ಕನ್ನಡ ಮಾಧ್ಯಮ ಶಾಲೆಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಅನ್ನು ಕೊಡುಗೆಯಾಗಿ ನೀಡಲು ದೇಣಿಗೆ ಸಂಗ್ರಹಕ್ಕಾಗಿ ಶ್ರೀ ವಿದ್ಯಾ ವಿನಾಯಕನ ಮಹೋತ್ಸವವನ್ನು ಆರಂಭಿಸಿದ್ದು ಈ ಬಾರಿ 4ನೇ ವರ್ಷದ ಮಹೋತ್ಸವವನ್ನು ಅದ್ದೂರಿಯಿಂದ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಸಪ್ಟೆಂಬರ್ 7 ರಿಂದ ಸೆಪ್ಟೆಂಬರ್ 9 ವರೆಗೆ ಆಚರಿಸಲಾಯಿತು. ಸೆ. 7ರಂದು ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಗಣಹೋಮ, ಭಜನಾ ಕಾರ್ಯಕ್ರಮಗಳ ಮೂಲಕ ಆರಂಭಿಸಲಾಯಿತು. ಸೆ. 8 ರಂದು ಯುವ ವಾಗ್ಮಿ, ಲೇಖಕರಾದ ದೀಕ್ಷಿತ್ ನಾಯರ್ […]

ಮಣಿಪಾಲ: ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿಯ ಬಂಧನ

ಉಡುಪಿ: ಅನಂತನಗರದ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಅಕ್ರಮ ಪ್ರವೇಶಿಸಿ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸ್ಥಳೀಯ ನಿವಾಸಿ ನವೀನ್ ನಾಯ್ಕ್ (25) ಎಂದು ಗುರುತಿಸಲಾಗಿದೆ. ಈತ ಸೆ.1ರಂದು ನಸುಕಿನ ವೇಳೆ ವಸತಿ ನಿಲಯದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಳಿಕ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಯೊಬ್ಬಳ ಕೈ ಎಳೆದು ಕಿರುಕುಳ ನೀಡಿ ಪರಾರಿಯಾಗಿದ್ದನು. ಈ ಬಗ್ಗೆ ವಸತಿ ನಿಲಯದ ವಾರ್ಡನ್ ನೀಡಿದ ದೂರಿನಂತೆ ಮಣಿಪಾಲ […]

ಉಡುಪಿ:ವಿಕಲಚೇತನರ ರಾಜ್ಯ ಪ್ರಶಸ್ತಿ : ಅರ್ಜಿ ಆಹ್ವಾನ

ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ “ವಿಶ್ವವಿಕಲಚೇತನರ ದಿನಾಚರಣೆ” ಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ, ಸರ್ಕಾರದ ವತಿಯಿಂದ ವಿಕಲಚೇತನರ ಕ್ಷೇತ್ರದಲ್ಲಿಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಿಕ್ಷಕರಿಗೂ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಉದ್ದೇಶಿಸಿದೆ. ರಾಜ್ಯ ಪ್ರಶಸ್ತಿಗಾಗಿ ವೈಯಕ್ತಿಕ ವಿಭಾಗ, ವಿಶೇಷ ಶಿಕ್ಷಕರ ವಿಭಾಗ ಮತ್ತು ಸಂಸ್ಥೆಗಳ ವಿಭಾಗದಲ್ಲಿ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಗಳನ್ನು ದ್ವಿಪ್ರತಿಗಳಲ್ಲಿ ಹಾರ್ಡ್ ಕಾಪಿ ಹಾಗೂ ಸಾಫ್ಟ್ ಕಾಪಿ (ಎಂ.ಎಸ್ […]

ಉಡುಪಿ: ವಿವಿಧ ತರಬೇತಿ ಶಿಬಿರ : ಅರ್ಜಿ ಆಹ್ವಾನ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಯುವಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 3 ರವರೆಗೆಬೆಂಗಳೂರು ಕಸ್ತೂರ್ಬಾ ರಸ್ತೆಯ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣ/ ಅನುತ್ತೀರ್ಣರಾದ 18 ರಿಂದ 40 ವರ್ಷ ವಯೋಮಿತಿಯ ಅಭ್ಯರ್ಥಿಗಳಿಗೆ 15 ದಿನಗಳ ಜಿಮ್ ಹಾಗೂ ಫಿಟ್ನೆಸ್ ತರಬೇತಿ, ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 3 ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣ/ ಅನುತ್ತೀರ್ಣರಾದ […]

ಮೆಚ್ಚಿನ ಶಿಕ್ಷಕರ ವರ್ಗಾವಣೆಗೆ ಕಣ್ಣೀರು ಹಾಕಿ ಬೀಳ್ಕೊಟ್ಟ ಮಕ್ಕಳು

ಉಡುಪಿ: ಮೆಚ್ಚಿನ ಶಿಕ್ಷಕರ ವರ್ಗಾವಣೆಗೆ ಮಕ್ಕಳು ಕಣ್ಣೀರು ಹಾಕಿ ಬೀಳ್ಕೊಟ್ಟ ಘಟನೆ ಬೈಂದೂರು ತಾಲೂಕಿನ ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ದೈಹಿಕ ಶಿಕ್ಷಕ ಹರ್ಕೂರು ಪ್ರವೀಣ್ ಕುಮಾರ್ ಶೆಟ್ಟಿ ವರ್ಗಾವಣೆಗೆ ಮಕ್ಕಳು ಕಣ್ಣೀರು ಹಾಕಿದ್ದಾರೆ. ಪ್ರವೀಣ್ ಅವರು ಕಳೆದ ಒಂದು ದಶಕದಿಂದ ಆಲೂರು ಪ್ರೌಢಶಾಲೆಯಲ್ಲಿ ದೈಹಿಕಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕ್ರೀಡೆಯಲ್ಲಿ ಮಕ್ಕಳನ್ನು ಹುರಿದುಂಬಿಸುತ್ತಾ ಹಲವು ಪ್ರಶಸ್ತಿ ಬಾಚಿಕೊಳ್ಳುವಂತೆ ಮಾಡಿದ್ದರು‌. ಅವರ ಹೋರಾಟಕ್ಕೆ ಗ್ರಾಮಸ್ಥರು ತಲೆದೂಗಿದ್ದರು, ಸಹಕರಿಸಿದ್ದರು. ಶಾಲಾ ಮಕ್ಕಳಿಗೂ ಈ ದೈಹಿಕ ಶಿಕ್ಷಕ ಎಲ್ಲರಿಕ್ಕಿಂತ ಅಚ್ಚಮೆಚ್ಚು. ಎಲ್ಲಾ […]