ಉಡುಪಿ: ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಬೇಡಿ: ಶಾಸಕರಿಗೆ ಎಚ್ಚರಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್

ಉಡುಪಿ: ಕುಂದಾಪುರದ ಪ್ರಾಂಶುಪಾಲರ ಪ್ರಶಸ್ತಿ ತಡೆ ಕುರಿತಾಗಿ ಅಸಾಂವಿಧಾನಿಕ, ಅನಾಗರಿಕ ರೀತಿಯಲ್ಲಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿರುವುದರ ಬಗ್ಗೆ ಮೊದಲು ಶಾಸಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಜ್ಞಾನದ ಬೆಳಕನ್ನು ನೀಡಿ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ಗೌರವ, ಅತೀವ ಕಾಳಜಿ ಇದೆ. ಶಿಕ್ಷಕರ ಮೇಲೆ ಗೌರವದ ನೆಪ ಇಟ್ಟುಕೊಂಡು ಕಾನೂನಿಗೆ ವಿರುದ್ಧವಾಗಿ ಅನಾಗರಿಕ ರೀತಿಯಲ್ಲಿ ತಮ್ಮವರು ಪ್ರತಿಭಟನ ನಡೆಯುವಾಗ ಕಾನೂನು ರೂಪಿಸುವ ರಾಜ್ಯ […]

ಡಯಾನ- ಕುಕ್ಕಿಕಟ್ಟೆ ರಸ್ತೆಯಲ್ಲಿ ಮರಣ ಗುಂಡಿ; ಸ್ವಲ್ಪ ಎಡವಿದ್ರೂ ಮಸಣ ಸೇರುದಂತೂ ಗ್ಯಾರಂಟಿ!

ಉಡುಪಿ: ಈ ರಸ್ತೆಯಲ್ಲಿ ಪ್ರಯಾಣಿಸುವುದು ಎಂದರೆ ಸಾವಿಗೆ ಆಹ್ವಾನ ಕೊಟ್ಟಂತೆ. ಜೀವದ ಆಸೆಯನ್ನೆ ಬಿಟ್ಟುಬಿಡಬೇಕು. ಮನೆಗೆ ತಲುಪುತ್ತೇವೆ ಎಂಬ ಗ್ಯಾರಂಟಿ ಅಂತೂ ಇಲ್ಲವೇ ಇಲ್ಲ. ಇದು ಡಯಾನ- ಕುಕ್ಕಿಕಟ್ಟೆ ರಸ್ತೆಯ ನರಕ ದರ್ಶನ. ಹೌದು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಡಯಾನ-ಕುಕ್ಕಿಕಟ್ಟೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಯ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ನಿತ್ಯ ಸರ್ಕಸ್ ಮಾಡಿಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಎಡವಿದ್ರೂ ಆಸ್ಪತ್ರೆ ಅಥವಾ ಮಸಣ ಸೇರುದಂತೂ ಗ್ಯಾರಂಟಿ. ಈಗಾಗಲೇ […]

ಬ್ರಹ್ಮಾವರ: ಸ್ಕೂಟರ್-ಬೈಕ್ ನಡುವೆ ಅಪಘಾತ; ಸ್ಕೂಟರ್ ಸವಾರ ಮೃತ್ಯು.

ಬ್ರಹ್ಮಾವರ: ಸ್ಕೂಟರ್ ಮತ್ತು ಬೈಕ್ ಮಧ್ಯೆ ಸೆ.8ರಂದು ಮಧ್ಯಾಹ್ನ ವೇಳೆ ಕನ್ನಾರು- ಕೊಕ್ಕರ್ಣೆ ರಸ್ತೆಯ ಸಾಸ್ತಾವು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ. ಮೃತರನ್ನು ಸ್ಕೂಟರ್ ಸವಾರ ಸಹಿತ್ ತಂಡಿ ಎಂದು ಗುರುತಿಸಲಾಗಿದೆ. ಕನ್ನಾರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಕೊಕ್ಕರ್ಣೆ ಕಡೆಯಿಂದ ಕನ್ನಾರು ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಎರಡೂ ವಾಹನಗಳು ರಸ್ತೆಗೆ ಬಿದ್ದು ಸ್ಕೂಟರ್‌ನಲ್ಲಿದ್ದ ಸಹಿತ್ ತಂಡಿ ಹಾಗೂ ಬೈಕ್‌ನಲ್ಲಿದ್ದ ಸವಾರ […]

ಕಿನ್ನಿಗೋಳಿ: ಆಟೋ ರಿಕ್ಷಾ ಅಪಘಾತದಲ್ಲಿ ತಾಯಿಯನ್ನು ರಕ್ಷಿಸಿದ ಬಾಲಕಿಯ ಸಮಯಪ್ರಜ್ಞೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ..!

ಮಂಗಳೂರು: ಕಿನ್ನಿಗೋಳಿ ಸಮೀಪ ಸೆ.6ರಂದು ನಡೆದ ರಸ್ತೆ ಅಪಘಾತದ ವೇಳೆ ತಕ್ಷಣ ಸಹಾಯಕ್ಕೆ ಧಾವಿಸಿದ ಬಾಲಕಿಯೊಬ್ಬಳ ಸಮಯಪ್ರಜ್ಞೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದ್ದಾರೆ. ಈ ಬಗ್ಗೆ ‘ಎಕ್ಸ್’ನಲ್ಲಿಂದು ಪೋಸ್ಟ್‌ವೊಂದನ್ನು ಹಾಕಿರುವ ಮುಖ್ಯಮಂತ್ರಿ, ‘ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಯಾರ ಸಹಾಯಕ್ಕೂ ಕಾಯದೆ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆ, ಧೈರ್ಯ ಶ್ಲಾಘನೀಯ’ […]

ಸಂಪೂರ್ಣ ಹದಗೆಟ್ಟ ಶಾಂತಿನಗರ ಮುಖ್ಯರಸ್ತೆ

ಉಡುಪಿ: 80ನೇ ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಶಾಂತಿನಗರ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ.ಇಲ್ಲಿಯ ರಸ್ತೆಯ ಅವ್ಯವಸ್ಥೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಯ ಅಕ್ಕ ಪಕ್ಕದ ಮನೆಗಳಿಂದ ಬಟ್ಟೆ ತೊಳೆದ ನೀರು, ಕೊಳಚೆ ನೀರನ್ನು ರಸ್ತೆಗಳಿಗೆ ಹರಿಯಬಿಡಲಾಗುತ್ತಿದೆ. ಇದರಿಂದ ಪರಿಸರದಲ್ಲಿ ಗಬ್ಬುವಾಸನೆ ಹರಡಿದ್ದು, ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಇಲ್ಲಿಯ ಸಮಸ್ಯೆಯನ್ನು ಜನಪ್ರತಿನಿಧಿಗಳು, ಪಂಚಾಯತ್ ನ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯತ್ ಮೌನಕ್ಕೆ […]