ಉಡುಪಿ: ಹೆಚ್‌ಡಿಬಿ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ನಾಪತ್ತೆ.
ಉಡುಪಿ: 3 ತಿಂಗಳಿನಿಂದ ಉಡುಪಿಯ ಹೆಚ್‌ಡಿಬಿ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗಪ್ಪ (31) ಎಂಬವವರು 7-8 ದಿನಗಳಿಂದ ತನ್ನ ತಮ್ಮ ಗಣೇಶ್ ರವರ ಮನೆಯಾದ ಬನ್ನಂಜೆ ಉಡುಪಿ ಎಂಬಲ್ಲಿಂದ ಕೆಲಸಕ್ಕೆ ತೆರಳುತ್ತಿದ್ದರು. ಸೆ.1 ರಂದು ಬೆಳಿಗ್ಗೆ 06:30 ಗಂಟೆಗೆ ಕಳೆದು ಹೋದ ಮೊಬೈಲ್‌ನ್ನು ತೆಗೆದುಕೊಂಡು ಬರಲು ಬನ್ನಂಜೆಯ ಮನೆಯಿಂದ ಮಂಗಳೂರಿಗೆ ಹೋದವರು ವಾಪಾಸ್ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.
ಕಾರ್ಕಳ: ಅಂಗಡಿ ಮುಗ್ಗಟ್ಟು, ಮಾರ್ಕೆಟ್ ಗಳಿಗೆ ಅಧಿಕಾರಿಗಳ ದಾಳಿ; ದಂಡ ವಸೂಲಿ
ಉಡುಪಿ: ಕಾರ್ಕಳ ಪುರಸಭೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಸಂಗ್ರಹಣೆ , ಮಾರಾಟ ಬಳಕೆ ನಿಷೇಧ ಕಾಯ್ದೆ ಅನ್ವಯ ಕಾರ್ಕಳ ಪುರಸಭಾ ಅಧಿಕಾರಿಗಳು ಅಂಗಡಿ ಮುಗ್ಗಟ್ಟು, ಹೋಟೆಲ್ ,ಮಾರ್ಕೆಟ್ ಗಳಿಗೆ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಯವರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 2ಕೆಜಿಗಳಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ಸುಮಾರು 8800 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾ ಕಂದಾಯ ಅಧಿಕಾರಿ ಅಶೋಕ್, ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ […]
ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣ; ಡ್ರಗ್ಸ್ ಜಾಲದ ಬಗ್ಗೆ ಸಮಗ್ರ ತನಿಖೆ
ಉಡುಪಿ: ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣದ ತನಿಖೆ ಒಂದು ಆಯಾಮದಲ್ಲಿ ನಡೆದರೆ, ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಪ್ರಮುಖ ಆರೋಪಿ ಅಲ್ತಾಫ್ ಅತ್ಯಾಚಾರ ಎಸಗಿದ್ದರೆ ಅಭಯ್ ಎಂಬಾತ ಕೃತ್ಯ ನಡೆದ ಸ್ಥಳಕ್ಕೆ ಡ್ರಗ್ಸ್ ತಂದು ಕೊಟ್ಟಿದ್ದ. ಡ್ರಗ್ಸ್ ತಂದು ಕೊಟ್ಟವರಿಗೆ ತಿರುಪತಿ, ಬೆಂಗಳೂರು ತನಕ ಸಂಪರ್ಕ ಇತ್ತು ಎಂಬುವುದು ತನಿಖೆಯಿಂದ ಬಯಲಾಗಿದೆ. ಹಿಂದೂ ಯುವತಿಯನ್ನು ಆಗಸ್ಟ್ 24 ರಂದು ಅಪಹರಿಸಿ ಕೌಡೂರು ಬಳಿಯ ರಂಗನಪಲ್ಕೆಯ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. […]
ವೈದ್ಯಕೀಯ ವಿದ್ಯಾರ್ಥಿನಿಯ ಲೈಂಗಿಕ ದೌರ್ಜನ್ಯ ಪ್ರಕರಣದ ಹಿಂದೆ ಲವ್ ಜಿಹಾದ್ ಅಡಗಿದೆ
ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಲೈಂಗಿಕ, ಮಾನಸಿಕ ದೌರ್ಜನ್ಯದ ಹಿಂದೆ ಲವ್ ಜಿಹಾದ್ ನ ನೆರಳಿದೆ ಎಂದು ಸಂಘಟನೆಗಳು ಆರೋಪಿಸಿವೆ. ಈ ಸಂಬಂಧ ಹಿಂದೂ ಸಂಘಟನೆಗಳು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಹಿಂದೂ ವೈದ್ಯ ವಿದ್ಯಾರ್ಥಿನಿಯನ್ನು ಮುಸ್ಲಿಂ ಯುವಕ ಪ್ರೀತಿಸುವ ನೆಪದಲ್ಲಿ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಇದರ ಹಿಂದೆ ಲವ್ ಜಿಹಾದ್ ಇದೆ. ಇದರಿಂದಾಗಿ ಹಿಂದೂ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ […]
ಉಡುಪಿ: ಆನ್ ಲೈನ್ ಟ್ರೇಡಿಂಗ್ ನಲ್ಲಿ 3.60 ಕೋಟಿ ರೂ. ವಂಚನೆ
ಉಡುಪಿ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಮೂರು ಮಂದಿಗೆ ಕೋಟ್ಯಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲಿನೆಟ್ ಸೋಫಿಯಾ ಡಿʼಮೆಲ್ಲೋ ಮತ್ತು ಅವರ ಗಂಡ ಹಾಗೂ ಗಂಡನ ಸೋದರ ಸಂಬಂಧಿಗೆ ವಿದ್ಯಾ ಸೋಮೇಶ್ವರ್ ಎಂಬಾತ ತಾನು ಕೆಲಸ ಮಾಡಿಕೊಂಡಿರುವ SP Capitals Trading ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿದ್ದನು. ಅದರಂತೆ ಇವರು 19/09/2019 ರಿಂದ ದಿನಾಂಕ 29/08/2024 […]