ಉಡುಪಿ:ಅರ್ಜಿ ಸಲ್ಲಿಕೆ : ಅವಧಿ ವಿಸ್ತರಣೆ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ನಿಯೋಜಿಸಲು ಅರ್ಹ ಆಸಕ್ತ 18 ವರ್ಷಮೇಲ್ಪಟ್ಟ ಅಭ್ಯರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ https://swdservices.karnataka.gov.in/ ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟಂಬರ್ 5 ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಎರಡು ದಿನಗಳ ಒಳಗಾಗಿ ಉಪನಿರ್ದೇಶಕರ ಕಚೇರಿ, ಸಮಾಜಕಲ್ಯಾಣ ಇಲಾಖೆ, ರಜತಾದ್ರಿ, ಬಿ ಬ್ಲಾಕ್, ಎರಡನೇ ಮಹಡಿ, […]

ಕೃಷಿ ಭಾಗ್ಯ ಯೋಜನೆ: ರೈತರಿಂದ ಅರ್ಜಿ ಆಹ್ವಾನ

ಉಡುಪಿ: ಮಳೆಯಾಶ್ರಿತ ಕೃಷಿ ನೀತಿ ಅನ್ವಯ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತುರೈತರ ಜೀವನಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನ ಗುರಿಯನ್ನು ಹೊಂದಿ ಅನುಷ್ಠಾನಗೊಂಡಿರುವ ಕೃಷಿ ಭಾಗ್ಯಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮರು ಜಾರಿಗೊಳಿಸಲಾಗಿರುತ್ತದೆ. ಅದೇ ರೀತಿ ಕೃಷಿ ಭಾಗ್ಯ-ಎಸ್.ಡಿ.ಎಂ.ಎಫ್ ಯೋಜನೆಯನ್ನು ಜಿಲ್ಲೆಯ ಬರ ಪೀಡಿತ ಬ್ರಹ್ಮಾವರ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿಅನುಷ್ಠಾನಗೊಳಿಸಲಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ […]

ಕಾರ್ಕಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು; ಆರೋಪಿ ಬಂಧನ, 10 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಉಡುಪಿ : ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿ ಲಾಕರ್ ನಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಳ ನಿವಾಸಿ ಸಂತೋಷ್‌, ಟಿ(32) ಬಂಧಿತ ಆರೋಪಿ. ಈತ ಸುಮಾರು 33 ಪವನ್ ತೂಕದ 10,05,000 ರೂ. ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತ ಆರೋಪಿಯಿಂದ ಕಳವು ಮಾಡಿದ 33 ಪವನ್ ತೂಕದ 10,05,000 ರೂ. ಮೌಲ್ಯದ […]

ಉಡುಪಿ: ಶ್ರೀ ಅರುಣ್ ಕುಮಾರ್ ಅವರಿಗೆ ಮಾಹೆ ಪಿಎಚ್‌ಡಿ ಪದವಿ ಗೌರವ.

ಉಡುಪಿ: ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಅರುಣ್ ಕುಮಾರ್ ಅವರು ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿಯಿಂದ (MAHE) ಅವರ ಸಂಶೋಧನಾ ಪ್ರಬಂಧ ‘ಹೆಲಿಕಲ್ ಗ್ರೂವ್ಡ್ ರೀನ್‌ಫೋರ್ಸ್ಡ್ ಕಾಂಕ್ರೀಟ್ ಪೈಲ್ ಇನ್ ಕೊಹೆಶನ್‌ಲೆಸ್‌’ನಲ್ಲಿ ಅಧ್ಯಯನಗಳು ಎಂಬ ಶೀರ್ಷಿಕೆಯಡಿಯಲ್ಲಿ ಪಿಎಚ್‌ಡಿ ಪ್ರಬಂಧವನ್ನ ಸಲ್ಲಿಸಿದರು. ಅವರ ಸಂಶೋಧನಾ ಮೇಲ್ವಿಚಾರಕರಾದ ಡಾ.ಕಿರಣ್ ಕುಮಾರ್ ಶೆಟ್ಟಿಯವರ ಪರಿಣಿತ ಮಾರ್ಗದರ್ಶನದಲ್ಲಿ ಮತ್ತು ಸಹ-ಮಾರ್ಗದರ್ಶಿ ಡಾ.ಎ.ಕೃಷ್ಣಮೂರ್ತಿ, ಡಾ.ಅರುಣ್ ಕುಮಾರ್ ಅವರ ಸಂಶೋಧನೆಯು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ಡಾ.ಅರುಣ್ […]

ಉಡುಪಿ ಮಣಿಪಾಲದ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ವಿವಿಧ ಉದ್ಯೋಗಾವಕಾಶಗಳು

ಉಡುಪಿ ಮಣಿಪಾಲದ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ವಿವಿಧ ಉದ್ಯೋಗಾವಕಾಶಗಳು.ಇಂದೇ ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿ. https://docs.google.com/forms/d/e/1FAIpQLSd0RJe9MRm70Khqh1Ryx-EN8VJODcuqhwWa-ATvjcLuIaXZaA/viewform?usp=sf_link