ಶೀಘ್ರವೇ ಜುಲೈ, ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಚಿತ್ರದುರ್ಗ: ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಶೀಘ್ರವೇ ಮನೆ ಯಜಮಾನಿಯರ ಖಾತೆಗೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ 11 ತಿಂಗಳ ಮೊತ್ತ ಸಂದಾಯವಾಗಿದ್ದು, ಶೀಘ್ರವೇ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವೂ ಸಂದಾಯವಾಗಲಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಏಕಕಾಲದಲ್ಲಿ ಒಟ್ಟಿಗೆ ಹಣ ಸಂದಾಯವಾಗುತ್ತಿಲ್ಲ. ಒಂದು ವರ್ಷದಲ್ಲಿ 25 ಸಾವಿರ ಕೋಟಿ ರೂ ಮೊತ್ತವನ್ನು ಯೋಜನೆಗೆ ವ್ಯಯಿಸಲಾಗಿದೆ […]

ಮಣಿಪಾಲ: ವಿದ್ಯಾರ್ಥಿಗಳ ರೂಮ್ ಗೆ ನುಗ್ಗಿ ಲ್ಯಾಪ್ ಟಾಪ್, ಐಪ್ಯಾಡ್ ಕಳ್ಳತನ; ಇಬ್ಬರ ಬಂಧನ

ಉಡುಪಿ: ಮಣಿಪಾಲ ಠಾಣೆ ವ್ಯಾಪ್ತಿಯ ವಿದ್ಯಾರತ್ನನಗರದ ಅಪಾರ್ಟೆಂಟ್ ವೊಂದರಲ್ಲಿ ಎರಡು ಲ್ಯಾಪ್ ಟಾಪ್ ಮತ್ತು ಐಪಾಡ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪೆರುಮಾಳ್ ನಿವಾಸಿ ಪಿ ಕಾರ್ತಿಕ್ (28) ಮತ್ತು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಬಾಲನ್ (34) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 4,00,000 ರೂ. ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು 1 ಆಪಲ್ ಕಂಪನಿಯ ಐಪಾಡ್ ನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರು ಮಣಿಪಾಲದ […]

ನಾಲ್ಕು ದಶಕಗಳಿಂದ ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕಲಾಶಿಕ್ಷಕ

ಶೇಖರ್ ಪೂಜಾರಿ ಕಲ್ಮಾಡಿಯವರ ಸಾಂಪ್ರದಾಯಿಕ ಶೈಲಿಯ ಗಣೇಶನಿಗೆ ಭಾರೀ ಡಿಮ್ಯಾಂಡ್ಉಡುಪಿ: ಚೌತಿ ಅಂದ್ರೆ ಗಣೇಶನ ಹಬ್ಬ ಮಾತ್ರವಲ್ಲ, ಬಗೆ ಬಗೆಯ ಗಣೇಶನ ವಿಗ್ರಹಗಳೂ ಒಂದು ಪ್ರಮುಖ ಆಕರ್ಷಣೆ. ಗಣೇಶ ವಿಗ್ರಹ ತಯಾರಿಸೋ ಅವೆಷ್ಟೋ ಕಲಾವಿದರು ಇಂದಿಗೂ ಸಾಂಪ್ರದಾಯಿಕ ಶೈಲಿಯನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಆ ಪೈಕಿ ಮುಂಚೂಣಿಯಲ್ಲಿರುವವರು ಕಲ್ಮಾಡಿ ಶೇಖರ್ ಪೂಜಾರಿ. ಉಡುಪಿಯ ಅಲೆವೂರಿನ ಗಣೇಶ ಮೂರ್ತಿ ತಯಾರಿಸೋ ಕುಟೀರದ ದೃಶ್ಯ ಇದು…ಕಲಾಶಿಕ್ಷಕ ,ನಿವೃತ್ತ ಮುಖ್ಯೋಪಾಧ್ಯಾಯ ಕಲ್ಮಾಡಿ ಶೇಖರ್ ಪೂಜಾರಿ ಇಲ್ಲಿ ನಾಲ್ಕು ದಶಕಗಳಿಂದ ವೈವಿಧ್ಯಮಯ ಗಣೇಶನ ಮೂರ್ತಿಗಳನ್ನು […]

ಉಡುಪಿ: ಶ್ರೀ ಭಗವತೀ ನಾಸಿಕ್ ಕಲಾ ತಂಡದಿಂದ ಮಗುವಿನ ಚಿಕಿತ್ಸೆಗೆ 2.8 ಲಕ್ಷ ರೂ. ಆರ್ಥಿಕ‌ ನೆರವು

ಉಡುಪಿ: ಶ್ರೀ ಭಗವತೀ ನಾಸಿಕ್ ಕಲಾ ತಂಡ ಕಸ್ತೂರ್ಬಾನಗರ ಇದರ ಕಲಾವಿದರು ಅಷ್ಟಮಿಗೆ ವೇಷ ಧರಿಸಿ ಸಂಗ್ರಹಿಸಿದ 2.8 ಲಕ್ಷ ರೂ.ಗಳನ್ನು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.ಚಿಟ್ಪಾಡಿ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಗುವಿನ ಪೋಷಕರಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ವೇಷ ಧರಿಸಿದ ಶ್ರೀ ಭಗವತೀ ನಾಸಿಕ್ ಕಲಾ ತಂಡದ ಕಲಾವಿದರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಅಣ್ಣಯ್ಯ ಸೇರಿಗಾರ್, ಮಣಿಪಾಲ ಆಸ್ಪತ್ರೆಯ ವೈದ್ಯೆ […]

ಉಡುಪಿ: ಸಮಾನ ಮನಸ್ಕರ ತಂಡದಿಂದ 25ನೇ ಮನೆ ಹಸ್ತಾಂತರ

ಉಡುಪಿ: ಸಮಾನ ಮನಸ್ಕರ ತಂಡ ಉಡುಪಿ ಇವರಿಂದ ಅಗತ್ಯವುಳ್ಳ ಬಡವ ಮಹಿಳೆ ಲಕ್ಷ್ಮೀ ಅವರಿಗಾಗಿ ನಿರ್ಮಿಸಿಕೊಟ್ಟಿರುವ 25ನೇ ಮನೆಯ ಹಸ್ತಾಂತರ ಕಾರ್ಯಕ್ರಮ ಕುಕ್ಕೆಹಳ್ಳಿಯಲ್ಲಿ ಜರುಗಿತು. ನಿವೃತ್ತ ಲೋಕಾಯುಕ್ತ ಡಾ. ಸಂತೋಶ್ ಹೆಗ್ಡೆ 25 ನೇ ಮನೆಯನ್ನು ಹಸ್ತಾಂತರಿಸಿ ಮಾತನಾಡಿ, ಇದೊಂದು ಸುಂದರ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಬಿತ್ತಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮಾನವೀಯತೆಯನ್ನು ಅಳವಡಿಕೊಂಡಾಗ ಒಳ್ಳೆಯ ಮನುಷ್ಯರಾಗಬಹುದು. ಈ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು. ತಂಡದ ಮುಖ್ಯಸ್ಥರಾದ ಶಶಿಧರ […]