ಉಡುಪಿ ಶ್ರೀಕೃಷ್ಣಮಠಕ್ಕೆ ಜೂನಿಯರ್ ಎನ್ ಟಿಆರ್, ರಿಷಭ್ ಶೆಟ್ಟಿ ಭೇಟಿ
ಉಡುಪಿ: ಉಡುಪಿಗೆ ಇವತ್ತು ಸ್ಟಾರ್ ನಟರಾದ ಜೂನಿಯರ್ ಎನ್ ಟಿ ಆರ್ ಮತ್ತು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಆಗಮಿಸಿದ್ದಾರೆ. ಜೊತೆಯಾಗಿ ಆಗಮಿಸಿದ ಈ ನಟರು ಕುಟುಂಬ ಸಮೇತ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಇವರಿಗೆ ಸೆಲೆಬ್ರಿಟಿ ನಿರ್ದೇಶಕ ಪ್ರಶಾಂತ್ ನೀಲ್ ಸಾಥ್ ನೀಡಿದ್ದಾರೆ. ಸ್ಟಾರ್ ನಟರು ಮತ್ತು ನಿರ್ದೇಶಕರು ಜೊತೆಯಾಗಿಯೇ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಮಾಡಿದರು. ಶ್ರೀ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಕೈಗೊಂಡ ನಟರು ಬಳಿಕ ಪರ್ಯಾಯ ಶ್ರೀಗಳನ್ನು ಭೇಟಿ […]
ಕಾರ್ಕಳ ಅತ್ಯಾಚಾರ ಪ್ರಕರಣ: ತನಿಖೆ ವೇಳೆ ಡ್ರಗ್ಸ್ ಬಗ್ಗೆ ಮಹತ್ವದ ವಿಚಾರಗಳು ಬಹಿರಂಗ..!
ಕಾರ್ಕಳ: ಕಾರ್ಕಳ ಅಯ್ಯಪ್ಪನಗರದ ಹಿಂದೂ ಯುವತಿಯ ಅಪಹರಣ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಪ್ರಕರಣದ ಹಿಂದಿರುವ ಮಾದಕ ದ್ರವ್ಯ ಜಾಲದ ಬಗ್ಗೆ ಕಾರ್ಕಳ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಈ ಪ್ರಕರಣದ ಆರೋಪಿ ಆಂಧ್ರಪ್ರದೇಶದ ಗಿರಿರಾಜು ಜಗಾಧಾಬಿ (31) ಹಾಗೂ ಶಂಕರಪುರದ ಜಾನ್ ನೊರೋನ್ಹಾ (30) ಅವರು ಈ ಮೊದಲು ಕುವೈಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಜಾನ್ ನೊರೋನ್ಹಾನಿಗೆ ಗಿರಿರಾಜು ಕರೆ ಮಾಡಿ ಡ್ರಗ್ಸ್ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದ.ಜಾನ್ ನೊರೋನ್ಹಾ […]
ಉದ್ಯಾವರ ಮಾತೃ ಮಂಡಳಿ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ
ಉಡುಪಿ: ಮಾತೃ ಮಂಡಳಿ ಸೇವಾ ಟ್ರಸ್ಟ್ (ರಿ) ಪಿತ್ರೋಡಿ ಉದ್ಯಾವರ ಇವರ ವತಿಯಿಂದ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆಯು ಶ್ರೀ ಶಂಭು ಶೈಲೇಶ್ವರ ದೇವಸ್ಥಾನ ಶಂಬುಕಲ್ಲು ಉದ್ಯಾವರದಲ್ಲಿ ಆಗಸ್ಟ್ 30ರ ಶುಕ್ರವಾರದಂದು ನಡೆಯಿತು. ಸುಮಂಗಲಿಯರೆಲ್ಲರೂ ಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದರು. ಪ್ರಕಾಶ್ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ವೇಳೆ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀಮತಿ ನಯನಾ ಗಣೇಶ್, ಕೋಶಧಿಕಾರಿಗಳಾದ ಸುಮತಿ ಯು.ಮೈಂದನ್ ಪದಾಧಿಕಾರಿಗಳಾದ, ಲೀಲಾ ಭಾಸ್ಕರ್, ಗುಲಾಬಿ ಸನಿಲ್, ಚಂದ್ರ ಭಾಸ್ಕರ್ , ಆಶಾ ಪ್ರೇಮಾ […]
ಮಣಿಪಾಲ: MSDCಯಲ್ಲಿ ಡ್ರೀಮ್ ಝೋನ್’ ವತಿಯಿಂದ “ಬ್ಲೌಸ್ & ಸಲ್ವಾರ್ ಕಮೀಜ್ ಡಿಸೈನ್” ಸರ್ಟಿಫಿಕೇಟ್ ಕೋರ್ಸ್
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಸ್ಕೂಲ್ ಆಫ್ ಫ್ಯಾಶನ್ ಮತ್ತು ಇಂಟೀರಿಯರ್ ಡಿಸೈನಿಂಗ್, ಡ್ರೀಮ್ ಜೋನ್ ನಲ್ಲಿ ಬ್ಲೌಸ್ & ಸಲ್ವಾರ್ ಕಮೀಜ್ ಡಿಸೈನ್ ಸರ್ಟಿಫಿಕೇಟ್ ಕೋರ್ಸ್ ತರಬೇತಿ ನಡೆಯಲಿದೆ. ಕಲಿಕೆಯ ಫಲಿತಾಂಶಗಳು:▪️ ಉಡುಪು ಹೊಲಿಗೆ, ಹೆಮ್ಮಿಂಗ್ ಮತ್ತು ಅಲಂಕಾರಗಳನ್ನು ಸೇರಿಸುವ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಬಹುದು.▪️ಬ್ಲೌಸ್ ಮತ್ತು ಸಲ್ವಾರ್ ಕಮೀಜ್‌ಗಾಗಿ ಮಾದರಿಗಳನ್ನು ತಯಾರಿಸಿ/ಅಭಿವೃದ್ಧಿಪಡಿಸಿ.▪️ ಮಹಿಳೆಯರ ಉಡುಪುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡಿ ಮತ್ತು ಪರಿಪೂರ್ಣ ಫಿಟ್ ಅನ್ನು […]
ಮಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಗೆ 10 ವರ್ಷ ಕಾರಗೃಹ ಶಿಕ್ಷೆ; ಆರೋಪಿಯ ತಂದೆ, ಬಾವನಿಗೂ ಜೈಲು ಶಿಕ್ಷೆ..!
ಮಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಯ ಇಚ್ಚೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಯುವತಿಗೆ ಇನ್ನಿಬ್ಬರು ಕೊಲೆ ಬೆದರಿಕೆ ಹಾಕಿದ್ದ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅವರಿಗೂ ಕಠಿಣ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೊಳಗಾದ ಆರೋಪಿ ಪುತ್ತೂರು ಕಬಕದ ನಿವಾಸಿ ನಿತೇಶ್ (40). ಈತನ ತಂದೆ ರಾಮಣ್ಣ ಪೂಜಾರಿ (63), ಭಾವ ನಿಖಿತಾಶ್ ಸುವರ್ಣ (40) ಕೊಲೆ ಬೆದರಿಕೆ […]