ಉಡುಪಿ ಜಿಲ್ಲಾ ಪೊಲೀಸ್ ಶ್ವಾನ ‘ಐಕಾನ್’ ನಿವೃತ್ತಿ
ಉಡುಪಿ: ಕಳೆದ 10 ವರ್ಷ 25 ದಿನಗಳಿಂದ ಉಡುಪಿ ಜಿಲ್ಲೆಯ ಪೊಲೀಸ್ ಶ್ವಾನದಳದಲ್ಲಿ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನ ಐಕಾನ್ ನಿವೃತ್ತಿ ಹೊಂದಿದೆ. ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಈ ಶ್ವಾನವು ಆಗಸ್ಟ್ 5, 2014 ರಂದು ಜನಿಸಿದ್ದು, ನವೆಂಬರ್ 5, 2014 ರಂದು ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿದೆ. ಎಪಿಸಿ. ಗಣೇಶ ಎಂ. 1444 ರವರು ಹ್ಯಾಂಡ್ಲರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಸಿ.ಎ.ಆರ್ ಸೌತ್ ಆಡುಗೋಡಿಯಲ್ಲಿ ಸ್ಫೋಟಕ ಪತ್ತೆ ಬಗ್ಗೆ 09 ತಿಂಗಳು ಕಠಿಣ ತರಬೇತಿಯನ್ನು ಪಡೆದು […]
ಮೂರು ಪರ್ವತ ಏರಿದ ಉಡುಪಿಯ ಯುವಕ
ಉಡುಪಿ: ಉಡುಪಿಯ ಬ್ರಹ್ಮಗಿರಿಯ ಯುವಕ ಸಿದ್ವಿನ್ ಶೆಟ್ಟಿ ಅವರು ಮೂರು ಎತ್ತರದ ಶಿಖರಗಳನ್ನು ಯಶಸ್ವಿಯಾಗಿ ಏರುವ ಮೂಲಕ ಒಂದು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸುಮಾರು 14000 ಅಡಿ ಎತ್ತರದ ಮಹಾಗುಣ ಪರ್ವತ, 14200ಕ್ಕೂ ಅಡಿ ಎತ್ತರದ ಅಫರ್ವತ್ ಶಿಖರ ಮತ್ತು ಹಿಮಾಚಲ ಪ್ರದೇಶದಲ್ಲಿರುವ 20183ಕ್ಕೂ ಅಧಿಕ ಎತ್ತರದ ಮೌಂಟ್ ಯುನಾಮ್ ಶಿಖರಗಳನ್ನು ಏರಿ ಕರ್ನಾಟಕ ಮತ್ತು ತುಳುನಾಡಿನ ಧ್ವಜವನ್ನು ಹಾರಿಸುವ ಮೂಲಕ ಸಾಧನೆ ಮಾಡಿದ್ದಾರೆ. ಸಿದ್ವಿನ್ ಶೆಟ್ಟಿ ಅವರು ಉಡುಪಿ ಬ್ರಹ್ಮಗಿರಿ ಸಮೀಪದ […]
ಕಾರ್ಕಳ- ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಪ್ರಸ್ತಾಪಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ನೇರ ಹೊಣೆ; ಬೆಳ್ಳಿಪಾಡಿ ನೇಮಿರಾಜ್ ರೈ
ಉಡುಪಿ: ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಟೋಲ್ ನಿರ್ಮಾಣದ ಪ್ರಸ್ತಾಪಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರೇ ನೇರ ಹೊಣೆ. 2019ರ ಆಗಸ್ಟ್ ತಿಂಗಳಿನಿಂದ 2023ರ ಮೇ ತಿಂಗಳವರೆಗೆ ಇವರ ಕೈಯಲ್ಲಿ ಡಬಲ್ ಇಂಜಿನ್ ಸರಕಾರವಿದ್ದರೂ ಟೋಲ್ ನಿರ್ಮಾಣದ ಪ್ರಸ್ತಾಪವನ್ನು ಶಾಶ್ವತವಾಗಿ ರದ್ದುಗೊಳಿಸುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಬೆಳ್ಳಿಪಾಡಿ ನೇಮಿರಾಜ್ ರೈ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಪ್ರಸ್ತಾಪವು 2010ರಲ್ಲಿ ಯಡಿಯೂರಪ್ಪ […]
ಗುಂಡಿಬೈಲಿನಲ್ಲಿ ಗಂಡು ನವಿಲು ಮೃತ್ಯು
ಉಡುಪಿ: ಗುಂಡಿಬೈಲಿನಲ್ಲಿ ಮಾಜಿ ನಗರಸಭಾ ಸದಸ್ಯೆ ಗೀತಾ ಶೇರಿಗಾರ್ ಅವರ ಮನೆಯ ಹತ್ತಿರ ಸಾವನ್ನಪ್ಪಿದ ಗಂಡು ನವಿಲಿನ ದಹನ ಕಾರ್ಯವು ಆದಿ ಉಡುಪಿಯ ಅರಣ್ಯ ಇಲಾಖೆಯ ವಠಾರದಲ್ಲಿ ನಡೆಯಿತು. ನವಿಲು ಅನಾರೋಗ್ಯದಿಂದ ಸಾವನ್ನಪ್ಪಿದೆಯೆಂದು ತಿಳಿದುಬಂದಿದೆ. ಗಂಡು ನವಿಲೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಪಶು ವೈದ್ಯ ಡಾ. ಸಂದೀಪ್ ಕುಮಾರ್ ಅವರು ಚಿಕಿತ್ಸೆಗೆ ಒಳಪಡಿಸಿದರು. ಆದರೆ, ಅದಾಗಲೇ ನವಿಲು ಮೃತಪಟ್ಟಿತ್ತು. ಬಳಿಕ ಒಳಕಾಡುವರು ನವಿಲಿನ ಕಳೇಬರವನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಸಿದರು. […]
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜನೆ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ.ಪ್ರ.ದ.ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಲಯನ್ಸ್ ಕ್ಲಬ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ರವರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವು ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಹಾಗೂ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮಾಡುವ ಕ್ರೀಡಾಪಟುಗಳೊಂದಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಉಡುಪಿ ಶಾಸಕ […]