ಉಡುಪಿ: ಶ್ರೀಕೃಷ್ಣಾಜನ್ಮಾಷ್ಟಮಿ; ಸಾವಿರಾರು ಭಕ್ತರಿಂದ ಅನ್ನಪ್ರಸಾದ ಸ್ವೀಕಾರ
ಉಡುಪಿ: ಜಗದೋದ್ಧಾರನ ಜನ್ಮದಿನದ ಸಂದರ್ಭ ಸಂಪೂರ್ಣವಾಗಿ ಉಪವಾಸವಿದ್ದ ಭಕ್ತರು ಉಪವಾಸ ತೊರೆದಿದ್ದಾರೆ. ಅರ್ಥ್ಯ ಪ್ರದಾನದ ನಂತರ ಮಠದಲ್ಲಿ ಫಲಹಾರ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಬ್ರಹ್ಮನ ಕ್ಷೇತ್ರದಲ್ಲಿ, ಇಂದು ಮಠಕ್ಕೆ ಬರುವ 40 ರಿಂದ 50 ಸಾವಿರ ಜನಕ್ಕೆ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಕೃಷ್ಣ ಮಠ ರಾಜಾಂಗಣ ಸುತ್ತಮುತ್ತ ಹಲವಾರು ಕೌಂಟರ್ ಗಳನ್ನು ತೆರೆದು ಭೋಜನ ವಿತರಿಸಲಾಗುತ್ತಿದೆ. ಸಿಹಿ ಊಟದ ಜೊತೆಗೆ ಇವತ್ತು ಹಾಲು ಪಾಯಸ ಮಾಡಿ ಬಡಿಸಲಾಗುತ್ತಿದೆ. ಜೊತೆ ತರಹೇವಾರಿ ಲಡ್ಡುಗಳನ್ನು ಪರ್ಯಾಯ ಪುತ್ತಿಗೆ ಮಠ ತಯಾರು […]
ಅಷ್ಟಮಿಗೆ ಮುಂಬೈನಿಂದ ಬಂದ ಬೆಡಗಿಯ ಜಬರ್ದಸ್ತ್ ಹುಲಿ ಕುಣಿತ
ಉಡುಪಿ: ಭಗವಾನ್ ಶ್ರೀ ಕೃಷ್ಣನ ಜನ್ಮವಾಗಿದೆ, ಇಂದು ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ನಡೆಯುತ್ತಿದೆ. ಎಲ್ಲಿ ನೋಡಿದರೂ ಹುಲಿಗಳ ಕಲರವ. ಮಹಿಳಾ ಹುಲಿವೇಷಗಳು ಪುರುಷರ ಹುಲಿ ವೇಷಗಳಿಗೆ ಫೈಟ್ ಕೊಡುತ್ತಿವೆ. ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋನ ಡಾನ್ಸರ್ ಶ್ರೇಯಾ ಆಚಾರ್ಯ ಮುಂಬೈನಿಂದ ಬಂದು ಹುಲಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಹುಲಿ ವೇಷ ತಂಡ ಕೊಂಬೆ ಕುಣಿತ ತಂಡಗಳ ಜೊತೆ ನಗರದ ಅಲ್ಲಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಕಲೆ, ಸಂಸ್ಕೃತಿ ಸಂಪ್ರದಾಯ ಉಳಿಸೋಣ ಎಂದು ಸಂದೇಶ ಕೊಟ್ಟಿದ್ದಾರೆ. ಇಡೀ ಕುಟುಂಬ […]
ಹೆಬ್ರಿ: ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ.
ಹೆಬ್ರಿ: ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿಯವರಾದ ಸಪ್ನಾ.ಎನ್. ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೃಷ್ಣ, ರಾಧೆ ವೇಷಧಾರಿ ಪುಟಾಣಿಗಳ ಮೆರವಣಿಗೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ಮಗುವನ್ನು ತೊಟ್ಟಿಲಲ್ಲಿ ಹಾಕಿ ತೂಗಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಂದ ಕೃಷ್ಣನ ಲೀಲೆಗಳನ್ನು ಬಣ್ಣಿಸುವ ವಿವಿಧ ನೃತ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು, ಬಳಿಕ ವಿದ್ಯಾರ್ಥಿಗಳಿಗೆ ಪಂಚಕಜ್ಜಾಯ ವಿತರಿಸಲಾಯಿತು. ಈ ಸಂದರ್ಭ ಎಸ್.ಆರ್ ಪದವಿ ಪೂರ್ವ ಕಾಲೇಜಿನ […]
ಮಣಿಪಾಲ: ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಡಿಕ್ಕಿ ಹೊಡೆದ ಎರಡು ಕಾರು; ಕಾರಿನಲ್ಲಿದ್ದವರು ಅಪಾಯದಿಂದ ಪಾರು
ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿದ ರಿಡ್ಜ್ ಕಾರೊಂದು ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಣಿಪಾಲ ಈಶ್ವರನಗರದಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಎರಡು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಬಂದ ಶಿಫ್ಟ್ ಕಾರು ಚಾಲಕನು ಗರೋಡಿ ರಸ್ತೆಯ ತೆರಳುವ ಸಲುವಾಗಿ ಒಮ್ಮೇಲೆ ಎಡಕ್ಕೆ ತಿರುಗಿದ್ದಾನೆ. ಈ ವೇಳೆ ಹಿಂದಿನಿಂದ ಅತೀ ವೇಗದಲ್ಲಿ ಬರುತ್ತಿದ್ದ ರಿಡ್ಜ್ ಕಾರು ಚಾಲಕನು ನಿಯಂತ್ರಣ ಕಳೆದುಕೊಂಡ ಪರಿಣಾಮ ಶಿಫ್ಟ್ ಕಾರಿಗೆ ಡಿಕ್ಕಿ […]
ಚೆಕ್ ಬೌನ್ಸ್ ಪ್ರಕರಣ: ನಟಿ ಪದ್ಮಜಾ ರಾವ್ ಗೆ ಮೂರು ತಿಂಗಳು ಜೈಲು ಶಿಕ್ಷೆ, 40.20 ಲಕ್ಷ ರೂ. ದಂಡ
ಮಂಗಳೂರು: ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್ ಅವರಿಗೆ ನಗರದ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ. ನಟಿ ಪದ್ಮಜಾ ರಾವ್ ಅವರು ಜೂನ್ 17, 2020 ರಂದು 40 ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ 2020ರ ಜೂನ್ 17ರಂದು ಐಸಿಐಸಿಐ ಬ್ಯಾಂಕಿನ ಬೆಂಗಳೂರಿನ ಬನಶಂಕರಿ ಶಾಖೆಯಲ್ಲಿರುವ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ನೀಡಿದ್ದರು. […]