ಉಡುಪಿ: ಕಸ್ಟಮ್ಸ್‌ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಆನ್‌ಲೈನ್‌ನಲ್ಲಿ ಕೋಟ್ಯಂತರ ರೂ. ವಂಚನೆ ಪ್ರಕರಣ: ಗುಜರಾತ್‌’ನ ಇಬ್ಬರು ಆರೋಪಿಗಳ ಬಂಧನ.

ಉಡುಪಿ: ಉಡುಪಿ ವೈದ್ಯರೊಬ್ಬರಿಗೆ ಮುಂಬಯಿ ಕಸ್ಟಮ್ಸ್‌ ಅಧಿಕಾರಿಗಳ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಸೆನ್‌ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗುಜರಾತ್‌ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗುಜರಾತ್‌ ರಾಜ್ಯದ ಸೂರತ್‌ ಸಿಟಿ ದಭೋಲಿ ರಸ್ತೆಯ ನಿವಾಸಿ ನವಾದಿಯಾ ಮುಖೇಶ್‌ ಭಾಯಿ/ಗಣೇಶ್‌ ಭಾಯಿ (44), ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯ ಆಕಾಶವಾಣಿ ಚೌಕ್‌ ಯೂನಿವರ್ಸಿಟಿ ರಸ್ತೆಯ ನಿವಾಸಿ ಧರಮ್‌ಜೀತ್‌ ಕಮಲೇಶ್‌ ಚೌಹಾನ್‌ (28) ಬಂಧಿತ ಆರೋಪಿಗಳು. ಆರೋಪಿಗಳಿಂದ 5 ಮೊಬೈಲ್‌ ಫೋನ್‌ಗಳನ್ನು ಹಾಗೂ […]

ಕಾರ್ಕಳ ಅತ್ಯಾಚಾರ ಪ್ರಕರಣ: ಬಂಧಿತ ಇಬ್ಬರು ಆರೋಪಿಗಳು ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ: ಉಡುಪಿ ಎಸ್ಪಿ

ಕಾರ್ಕಳ: ಕಾರ್ಕಳ ಅಯ್ಯಪ್ಪ ನಗರದ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿದ್ದ ಅಲ್ತಾಫ್ ಹಾಗೂ ಶ್ರಾವೆದ್ ರಿಚರ್ಡ್‌ ಕ್ವಾಡ್ರಸ್‌ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಉಡುಪಿ ಎಸ್‌.ಪಿ. ಡಾ.ಅರುಣ್‌ಕುಮಾರ್‌ ತಿಳಿಸಿದ್ದಾರೆ. ಆರೋಪಿಗಳನ್ನು ಶನಿವಾರ ಕಾರ್ಕಳದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಈ ಸಂದರ್ಭ ನಗರ ಠಾಣೆ ಪೊಲೀಸರ ಮನವಿಯಂತೆ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಿಧಿಸಿ […]

ಮಣಿಪಾಲ: ಸೆ. 2ರಂದು MSDC’ಯಲ್ಲಿ “Fundamental Of Industrial Automation” ವಿಷಯಗಳ ಕುರಿತು 1 ದಿನದ ಉಚಿತ ಕಾರ್ಯಾಗಾರ.

ಮಣಿಪಾಲ : ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಸ್ಕೂಲ್ ಆಫ್ ಇಂಡಸ್ಟ್ರಿಯಲ್ ಆಟೊಮೇಷನ್’ನಿಂದ ಕೈಗಾರಿಕಾ ಯಾಂತ್ರೀಕೃತಗೊಂಡ ಮೂಲಭೂತ (Fundamental Of Industrial Automation) ವಿಷಯಗಳ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಸೆಪ್ಟೆಂಬರ್ 2 ರಂದು ಮಧ್ಯಾಹ್ನ 2 ರಿಂದ 5 ರವರೆಗೆ ಆಯೋಜಿಸಿದೆ. ಬೇಸಿಕ್ ತರಬೇತಿಯ ಹೊರತಾಗಿ, ತರಬೇತಿಯ ಒಂದು ಅಂಶ ಸಂಸ್ಥೆಗಳಲ್ಲಿ ನಡೆಸಲಾಗುತ್ತದೆ ಮತ್ತು ತರಬೇತಿಯನ್ನು ಸಂಯೋಜಕರು ಸ್ವತಃ ಕೈಗೊಳ್ಳುತ್ತಾರೆ. ಒಳಗೊಂಡಿರಬೇಕಾದ ವಿಷಯಗಳು: ಕೀ ಟೇಕ್ […]

ಪೆರ್ಡೂರು ಎಪಿ ಸ್ವೀಟ್ಸ್ ಸಿಹಿತಿಂಡಿ ಫ್ಯಾಕ್ಟರಿಗೆ ಯುವಕರು ಬೇಕಾಗಿದ್ದಾರೆ.

ಪೆರ್ಡೂರಿನಲ್ಲಿರುವ ಎಪಿ ಸ್ವೀಟ್ಸ್ ಸಿಹಿತಿಂಡಿ ಫ್ಯಾಕ್ಟರಿಗೆ ಕೆಲಸಕ್ಕೆ 2 ಯುವಕರು ಬೇಕಾಗಿದ್ದಾರೆ.ಆಕರ್ಷಕ ಸಂಬಳ ಹಾಗೂ ಉಚಿತ ಊಟ, ವಸತಿ ನೀಡಲಾಗುವುದು.ಆಸಕ್ತರು ಸಂಪರ್ಕಿಸಿ: 8722459897

ಉಡುಪಿ: ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ವಾರ್ಷಿಕ ಮಹಾಸಭೆ – ನೂತನ ಸದಸ್ಯರ ನೇಮಕ

ಉಡುಪಿ, ಆಗಸ್ಟ್ 25: ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 25ರ ಭಾನುವಾರ ಕಟ್ಟಡದ ಆವರಣದಲ್ಲಿಯೇ ಇರುವ ಸಭಾಗೃಹದಲ್ಲಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರೇ ಆಗಿರುವ ಶ್ರೀ ಇಕ್ಬಾಲ್ ಹಮ್ಮಾಜಿಯವರು ವಹಿಸಿದ್ದರು ಹಾಗೂ ಸದಸ್ಯರನ್ನು ಸ್ವಾಗತಿಸಿ ಸಭೆಯನ್ನು ಪ್ರಾರಂಭಿಸಿದರು. ಸಂಘದ ಕಾರ್ಯದರ್ಶಿಯವರಾದ ಶ್ರೀಮತಿ ಪ್ರಮಿಳಾ ಜತ್ತನ್ನರವರು ಹಿಂದಿನ ಮಹಾಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಆ ಬಳಿಕ ಸಂಘದ ಖಜಾಂಚಿಯಾಗಿರುವ ಶ್ರೀಮತಿ ರೇಶ್ಮಾರವರು ಹಿಂದಿನ […]