ದರ್ಶನ್​ಗೆ​​ ರಾಜಾತಿಥ್ಯ ನೀಡುವ ಪೋಟೋ ವೈರಲ್: ಜೈಲರ್‌ಗಳು ಸೇರಿದಂತೆ ಒಟ್ಟು 7 ಸಿಬ್ಬಂದಿಗಳು ಅಮಾನತು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ದರ್ಶನ್​ಗೆ​​ ರಾಜಾತಿಥ್ಯ ನೀಡುತ್ತಿರುವ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಜೈಲಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಡಾಮಂಡಲಗೊಂಡಿದ್ದಾರೆ. ಬೇರೆಡೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ:ಪ್ರಸ್ತುತ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಾಗೂ ದರ್ಶನ್ ಮತ್ತು ಅವರ ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕಾರಾಗೃಹಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ […]

ಉಡುಪಿ: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಉಡುಪಿ: ಕೆರೆಗೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಉಡುಪಿಯ ಕರಂಬಳಿಯಲ್ಲಿ ನಡೆದಿದೆ. ಮೃತನನ್ನು ಇಂದ್ರಾಳಿ ನಿವಾಸಿ ಸಿದ್ದಾರ್ಥ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಈತ ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿ. ಸಿದ್ದಾರ್ಥ್ ನಿನ್ನೆ ಇಬ್ಬರು ಸ್ನೇಹಿತರೊಂದಿಗೆ ಉಡುಪಿಯ ಕರಂಬಳಿ ಕೆರೆಗೆ ಈಜಲು ತೆರಳಿದ್ದನು. ಈ ವೇಳೆ ಈಜಲು ನೀರಿಗಿಳಿದಿದ್ದು, ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನಿಬ್ಬರು ಸ್ನೇಹಿತರು ನೀರಿಗೆ ಇಳಿದಿರಲಿಲ್ಲ ಎನ್ನಲಾಗಿದೆ.

ದುಬೈನ ಯುವತಿಯರ ತಂಡದಿಂದ ಹುಲಿವೇಷ

ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮೇಳೈಸಿದೆ. ಇಂದು ಜನ್ಮಾಷ್ಟಮಿಯ ವೈಭವವಾದರೆ ಮಂಗಳವಾರ ಐತಿಹಾಸಿಕ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಉಡುಪಿಯ ಎಲ್ಲೆಡೆ ತಾಸೆ,ಬ್ಯಾಂಡ್ ಪೆಟ್ಟು ಕೇಳಿಬರುತ್ತಿದೆ. ತಾಸೆ ಏಟಿಗೆ ಅಲ್ಲಲ್ಲಿ ಹುಲಿಕುಣಿತ ತಂಡಗಳು ಪ್ರದರ್ಶನ ಮಾಡುತ್ತಿದೆ. ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮದಲ್ಲಿ ಹತ್ತಾರು ಹುಲಿವೇಷ ತಂಡಗಳು ಇವೆ. ರಾತ್ರಿ ಊದು ಪೂಜೆಯ ಬಳಿಕ ಬಣ್ಣ ಹಾಕಿಕೊಂಡು ಪ್ರದರ್ಶನ ಮಾಡುತ್ತಿದೆ.ಈ ಬಾರಿ ವಿಶೇಷವಾಗಿ ದುಬೈ ನ ಯುವತಿಯರ ತಂಡ ಹುಲಿವೇಷಕ್ಕಾಗಿ ಉಡುಪಿಗೆ ಆಗಮಿಸಿದೆ.ಅಪ್ಪೆನ ಮೋಕೆದ ಜೋಕುಲು ದುಬೈ […]

ಮಾಳದಲ್ಲಿ ಬೃಹತ್ ಕಾಳಿಂಗ ಸರ್ಪ‌ ಪ್ರತ್ಯಕ್ಷ; ಬೆಚ್ಚಿಬಿದ್ದ ಗ್ರಾಮಸ್ಥರು

ಉಡುಪಿ: ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮೇಘರಾಜ್ ಎಂಬುವವರ ಮನೆಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು‌ ಕಾಣಿಸಿಕೊಂಡಿದೆ. ಬೃಹತ್ ಕಾಳಿಂಗ ಸಂರ್ಪವನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಾರೆ. ಕಾಳಿಂಗ ಸರ್ಪ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯರು ಉರಗ ರಕ್ಷಕರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಜಾನ್ ಮೃತ್ಯುಂಜಯ ಅವರು ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದರು. ಸಾಕಷ್ಟು ಹರಸಾಹಸದ ಬಳಿಕ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು. ಬಳಿಕ ರಕ್ಷಿತಾರಣ್ಯಕ್ಕೆ ಕಾಳಿಂಗ ಸರ್ಪವನ್ನು ಬಿಡಲಾಯಿತು. ಕಾಳಿಂಗ ಸರ್ಪ ಸೆರೆ […]

ಕೃಷ್ಣನೂರು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ

ಉಡುಪಿ: ಪೊಡವಿಗೊಡೆಯನ ನಾಡಿನಲ್ಲಿ ಅಷ್ಟಮಿಯ ಸಂಭ್ರಮ ಕಳೆಗಟ್ಟಿದ್ದು, ಶ್ರೀ ಕೃಷ್ಣಮಠದ ಆವರಣ ಸಹಿತ ಇಡೀ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಅಷ್ಟಮಿಯ ವೈಭವ ಕಂಡುಬರುತ್ತಿದೆ. ಶ್ರೀ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮಠದೊಳಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ, ಒಳಗಿನ ಅಲಂಕಾರ, ನೈವೇದ್ಯ ಹಾಗೂ ಪ್ರಸಾದದ ರೂಪದಲ್ಲಿ ನೀಡುವ ಲಡ್ಡು, ಚಕ್ಕುಲಿ ಇತ್ಯಾದಿಗಳ ಸಿದ್ದತೆ ಭರದಿಂದ ಸಾಗಿದೆ. ಬೆಳಗ್ಗೆಯಿಂದಲೇ ಶ್ರೀ ಕೃಷ್ಣಮಠದಲ್ಲಿ ಅಷ್ಟಮಿ ಸಂಭ್ರಮ ಡೋಲು ಉತ್ಸವದೊಂದಿಗೆ ಆರಂಭಗೊಂಡು ಮಂಗಳವಾರ ವಿಟ್ಲಪಿಂಡಿ ಉತ್ಸವ […]