ತ್ರಿಶಾ ಸಂಸ್ಥೆ : ಸಿ ಎಸ್ ಎಕ್ಸಿಕ್ಯೂಟಿವ್ ಉತ್ತಮ ಫಲಿತಾಂಶ

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿ ಎಸ್ ಐ) ನಡೆಸುವ ಸಿ ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಅನನ್ಯ ನಾಯಕ್ 371 ಅಂಕಗಳೊಂದಿಗೆ ಎರಡೂ ಮಾಡ್ಯೂಲ್ ಗಳಲ್ಲಿ ಉತ್ತೀರ್ಣರಾಗಿದ್ದು ಮೇಘಾ (210) , ಪೂಜಾರಿ ಖುಷಿ ಸುಧಾಕರ್ (204), ಶ್ರುತಿ ಶಾನುಭಾಗ್ (203), ದೀಪ್ತಿ ಶೆಟ್ಟಿ (203), ತೇಜಸ್ವರ್ಮ ಕುಂಡಾಡಿ‌, ಭಾರ್ಗವಿ ಬಿ ಪುರಾಣಿಕ್ ಮತ್ತು ಮಂಗಳೂರಿನ ತ್ರಿಶಾ ಕಾಲೇಜ್ […]

ಕಾರ್ಕಳ ಅತ್ಯಾಚಾರ ಪ್ರಕರಣ: ಮೂರನೇ ಆರೋಪಿಯ ಬಂಧನ.

ಕಾರ್ಕಳ: ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಎರಡು ಆರೋಪಿಗಳನ್ನು ಬಂಧಿಸಲಾಗಿದೆ. ಇವತ್ತು ಮೂರನೇ ಆರೋಪಿ ಅಭಯ್(23) ಕಾರ್ಕಳ ಇವನನ್ನು ಬಂಧಿಸಲಾಗಿದೆ. ಅಭಯ್ ಇತನೇ ಪ್ರಥಮ ಆರೋಪಿ ಅಲ್ತಾಫ್ ಗೆ ಮಾದಕ ವಸ್ತು ಕೊಟ್ಟಿದ್ದಾನೆ ಎಂದು ನಮಗೆ ಪ್ರಥಮವಾಗಿ ತನಿಖೆಯಲ್ಲಿ ಕಂಡುಬಂದಿರುತ್ತದೆ. ಕೃತ್ಯ ಎಸಗಿದ ಮೇಲೆ, ಪ್ರಥಮ ಆರೋಪಿ ತಪ್ಪಿಸಿಕೊಳ್ಳಲು ಸಹಕಾರ ಮಾಡುವುದಕ್ಕೆ ಪ್ರಯತ್ನ ಮಾಡಿರುವುದು ನಮಗೆ ತನಿಖೆಯಲ್ಲಿ ಕಂಡುಬಂದಿರುತ್ತದೆ. ಈಗ ಆತನನ್ನು ಬಂಧಿಸಿ ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಪಡೆದುಕೊಂಡು, ಆತನನ್ನು ಸಂಪೂರ್ಣ ತನಿಖೆ […]

ಎಂಕುಲ್ ಫ್ರೆಂಡ್ಸ್ ಕಲಾವಿದರು ಹಿರಿಯಡಕ ನೇತೃತ್ವದಲ್ಲಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧಾ ಕೃಷ್ಣ ಸ್ಪರ್ಧೆ: 100 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗಿ.

ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ನೇತೃತ್ವದಲ್ಲಿ ಹಾಗೂ ದೇವಾಡಿಗರ ಸಂಘ ಹಿರಿಯಡ್ಕ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮುದ್ದು ಕೃಷ್ಣ ಹಾಗೂ ಮುದ್ದು ರಾಧಾ ಕೃಷ್ಣ ಸ್ಪರ್ಧೆಯು ಪ್ರಪ್ರಥಮ ಬಾರಿಗೆ ಹಿರಿಯಡ್ಕ ಶ್ರೀ ವೀರಭದ್ರ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಜರುಗಿತು. 100 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಗೆ ನೋಂದಾವಣೆ ಮಾಡಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರಮುಖ ಕಾರಣವಾಗಿತ್ತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ಪದಕ ನೀಡಿ […]

ಅವತಾರ್ 2′ ವೇಷದಲ್ಲಿ ಮಿಂಚಲಿರುವ ರವಿ ಕಟಪಾಡಿ

ಉಡುಪಿ: ಪ್ರತೀವರ್ಷ ಅಷ್ಠಮಿಯ ದಿನದಂದು ವಿಶಿಷ್ಟ ವೇಷ ತೊಟ್ಟು ಅನಾರೋಗ್ಯಪೀಡಿತ ಮಕ್ಕಳಿಗೆ ಹಣ ಸಂಗ್ರಹಿಸುವ ರವಿ ಕಟಪಾಡಿ ಈ ಬಾರಿ ಅವತಾರ್ 2 ವೇಷಧಾರಿಯಾಗಿ ನಗರ ಸಂಚಾರ ಮಾಡುತ್ತಿದ್ದಾರೆ.ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ‘ಅವತಾ‌ರ್ 2’ ವೇಷಧಾರಿ ರವಿ ಕಟಪಾಡಿ ಅವರು ಕಟಪಾಡಿ, ಶಂಕರಪುರ, ಉದ್ಯಾವರ ಮತ್ತಿತರೆಡೆ ಸಂಚರಿಸಿ ಮನೋರಂಜನೆ ನೀಡುತ್ತಿದ್ದಾರೆ. ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಕಳೆದ 9 ವರ್ಷಗಳಲ್ಲಿ […]