ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಗೇಟ್ ವಿರುದ್ಧ ಬೃಹತ್ ಪ್ರತಿಭಟನೆ

ಉಡುಪಿ: ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಸಂಗ್ರಹಣಾ ಕೇಂದ್ರವನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಕಂಚಿನಡ್ಕದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಜಿಲ್ಲೆಯ ವಿವಿಧ ಸಂಘಟನೆಗಳು, ಕಾಪು, ಕಾರ್ಕಳ, ಉಡುಪಿ, ಮೂಲ್ಕಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸುತ್ತಲಿನ‌ 40 ಗ್ರಾಮಗಳ ಸಾರ್ವಜನಿಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಕಂಚಿನಡ್ಕದಿಂದ ಪಡುಬಿದ್ರಿ ಜಂಕ್ಷನ್ ವರೆಗೆ ಜಾಥಾ ನಡೆಯಿತು. ಉಡುಪಿ […]

ಆ.27ರಂದು ಕಲ್ಕೂರ್ ಸಮೂಹ ಸಂಸ್ಥೆಯಿಂದ ಹುಲಿ ವೇಷ ನರ್ತನ ಪ್ರದರ್ಶ‌ನ

ಉಡುಪಿ: ಕಲ್ಕೂರ ಬಿಲ್ಡರ್ಸ್ ಆ್ಯಂಡ್ ಡೆವಲಪರ್ ಹಾಗೂ ಕಲ್ಕೂರ ರೆಫ್ರಿಜರೇಶನ್ ಆ್ಯಂಡ್ ಕಿಚನ್ ಇಕ್ವಿಪ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ “ಹುಲಿ ವೇಷ ನರ್ತನ ಪ್ರದರ್ಶನ” ಆ.27ರಂದು ಸಂಜೆ 4ಗಂಟೆಯಿಂದ ಉಡುಪಿಯ ರಥಬೀದಿಯ ತೊಟ್ಟಿಲು ಸುಬ್ರಾಯ ವೇದಿಕೆಯಲ್ಲಿ ನಡೆಯಲಿದೆ ಎಂದು ಕಲ್ಕೂರ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ರಂಜನ್ ಕಲ್ಕೂರ್ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ನಿಬಂಧನೆಗಳಿಲ್ಲದೆ – ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಕುಣಿಯುವ ಎಲ್ಲಾ ತಂಡಗಳಿಗೆ ಪ್ರದರ್ಶನಕ್ಕೆ ಮುಕ್ತ ಅವಕಾಶ ಒದಗಿಸಲಾಗಿದೆ. […]

ಆ.27ರಂದು ಉಡುಪಿ ಶಿರೂರು ಮಠದ ಮುಂಭಾಗದಲ್ಲಿ ಹುಲಿವೇಷ, ಜಾನಪದ ನೃತ್ಯ ಕಾರ್ಯಕ್ರಮ

ಉಡುಪಿ: ಶಿರೂರು ಪೀಠಾಧಿಪತಿಗಳಾದ ವೇದವರ್ಧನ ತೀರ್ಥ ಶ್ರೀಪಾದರು, ಕೀರ್ತಿಶೇಷ ಲಕ್ಷ್ಮೀವರತೀರ್ಥ ಶ್ರೀಪಾದರು‌ ವಿಟ್ಲಪಿಂಡಿ ಮಹೋತ್ಸವದಂದು ನಡೆಸಿಕೊಂಡು ಬಂದಂತಹ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಶಿರೂರು ಮಠದ ಮುಂಭಾಗದ ಅನ್ನವಿಠಲ್ ವೇದಿಕೆಯಲ್ಲಿ ಈ ಬಾರಿಯು ಆಯೋಜಿಸಲು ಸಂಕಲ್ಪಿಸಿದ್ದಾರೆ ಎಂದು ಮಠದ ದಿವಾನ ಉದಯಕುಮಾ‌ರ್ ಸರಳತ್ತಾಯ ಹೇಳಿದರು. ಉಡುಪಿ ಶಿರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದಂದು ಕೀರ್ತಿಶೇಷ ಲಕ್ಷ್ಮೀವರತೀರ್ಥ ಶ್ರೀಪಾದರು ಉಡುಪಿಯ ಜನತೆಗೆ ಶ್ರೀ ಕೃಷ್ಣ ಮಠದ ರಥಬೀದಿಯ ಶಿರೂರು ಮಠದ […]

ಮಲ್ಪೆ: ಯುವಕ ನಾಪತ್ತೆ

ಮಲ್ಪೆ: ಕಿನ್ನಿಮೂಲ್ಕಿ ವಾಟರ್‌ ಸರ್ವಿಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಗೌತಮ್‌ (31) ಆ.18ರಂದು ಬೆಳಿಗ್ಗೆ 9:30 ಗಂಟೆಗೆ ಮನೆಗೆ ಬಂದಿದ್ದು ಬಳಿಕ ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋಗಿರುತ್ತಾನೆ. ಈತ ಆ.19 ರಂದು ಬೆಳಿಗ್ಗೆ 08:30 ಗಂಟೆಗೆ ಕನ್ನರಪಾಡಿ ಗೋಪುರದ ಹತ್ತಿರವಿರುವ ಹೋಟೆಲ್‌ ಬಳಿ ಇರುವುದನ್ನು ತಾಯಿ ನೋಡಿರುತ್ತಾರೆ. ಬಳಿಕ ಸಂಬಂಧಿಕರ ಮನೆಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಯುವತಿಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ: ವಿ.ಸುನಿಲ್ ಕುಮಾರ್ ಆಕ್ರೋಶ

ಕಾರ್ಕಳ: ಶ್ರಮ ಜೀವಿ ಸಮಾಜ ಭೋವಿ ಸಮುದಾಯದ ಬಡ ಯುವತಿಯೋರ್ವಳಿಗೆ ಮತ್ತು ಭರಿಸುವಂತ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ. ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಶಾಸಕ ವಿ ಸುನಿಲ್ ಕುಮಾರ್ ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಯುವತಿಯನ್ನು ಪುಸಲಾಯಿಸಿ ಅಮಲು ಪದಾರ್ಥದೊಂದಿಗೆ ಕಾರಿನಲ್ಲಿ ಸುಮಾರು ದೂರ ಪಳ್ಳಿ ತನಕ ಕರೆದೊಯ್ದು ಅಮಲು ಪದಾರ್ಥ ನೀಡಿ ಈ ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾದ್ಯ. ಇದೊಂದು ಪೂರ್ವಯೋಜಿತ […]