ಬ್ರಹ್ಮಶ್ರೀ ನಾರಾಯಣಗುರು ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಶತಮಾನಗಳ ಹಿಂದೆ ಸಮಪಾಲು-ಸಮಬಾಳ್ವೆಗಾಗಿ ಧ್ವನಿ ಎತ್ತಿದ ನಾರಾಯಣಗುರು ಯಾವುದೇ ರಕ್ತ ಕ್ರಾಂತಿಗಳಿಲ್ಲದೆ ತಮ್ಮ ಮಾತು ಹಾಗೂ ಬದ್ಧತೆಗಳ ಮೂಲಕ ಸಮಾಜದಲ್ಲಿನ ಮೇಲು-ಕೀಳು ಎಂಬ ಅಂಧಕಾರವನ್ನು ಹೋಗಲಾಡಿಸಿ, ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ […]
ಉಡುಪಿ: ಸ್ಮಾರ್ಟ್ ಬಜಾರ್’ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ಉಡುಪಿ: ಸ್ಮಾರ್ಟ್ ಬಜಾರ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯನ್ನು ಆ.26 ರಂದು ಉಡುಪಿಯ ಜೋಡುಕಟ್ಟೆಯ ಜನಾರ್ದನ ಟವರ್‌ನಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದ್ದು, 2 ವರ್ಷದ ಮಕ್ಕಳಿಗೆ ಮುದ್ದು ಕೃಷ್ಟ, 2 ರಿಂದ 6 ವರ್ಷದ ಮಕ್ಕಳಿಗೆ ಬಾಲಕೃಷ್ಣ ಹಾಗೂ 6 ರಿಂದ 10 ವರ್ಷದ ವರೆಗಿನ ಮಕ್ಕಳಿಗೆ ಕಿಶೋರ ಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಬಹುಮಾನ ಗೆಲ್ಲುವ ಅವಕಾಶ:ಈ ಪ್ರಯುಕ್ತ ಮೋಜಿನ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸುವವರಿಗೆ ಅತ್ಯಾಕರ್ಷಕ ಬಹುಮಾನ […]
ಕಾರ್ಕಳ: ರಾಜ್ಯ ಮಟ್ಟದ ಕುಣಿತ ಭಜನಾ ಸ್ವರ್ಧೆ “ಸ್ಮರಿಸಿ ಭಜಿಸಿರೋ ಸಪ್ತ ಸ್ವರಗಳ ಸಮ್ಮಿಲನ” ಕಾರ್ಯಕ್ರಮ.

ಕಾರ್ಕಳ: ಶ್ರೀ ಆಂಜನೇಯ ಭಜನಾ ಮಂಡಳಿ(ರಿ.) ಸಾಣೂರು ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ಕುಣಿತ ಭಜನಾ ಸ್ವರ್ಧೆ “ಸ್ಮರಿಸಿ ಭಜಿಸಿರೋ ಸಪ್ತ ಸ್ವರಗಳ ಸಮ್ಮಿಲನ” ಕಾರ್ಯಕ್ರಮವು ಮುರತ್ತಂಗಡಿಯ ರಿಜೆನ್ಸಿ ಸಭಾಭವನದಲ್ಲಿ ಆಗಸ್ಟ್ 18ರಂದು ನಡೆಯಿತು. ಸಮಾರಂಭದ ಉಧ್ಘಾಟನೆಯನ್ನು ಸಿ.ಎ. ಕೆ. ಕಮಲಾಕ್ಷ ಕಾಮತ್ ಕಾರ್ಕಳ ಇವರು ನೆರವೆಸುತ್ತಾ ಭಜನೆಯು ದೇವರನ್ನು ಆರಾಧಿಸುವ ಮಹಾಮಂತ್ರವಾಗಿದೆ, ಭಕ್ತಿಯಲ್ಲಿ ಮಹಾಶಕ್ತಿ ಅಡಗಿದೆ ಈ ನಿಟ್ಟಿನಲ್ಲಿ ಸಾಣೂರು ಶ್ರೀ ಆಂಜನೇಯ ಭಜನಾ ಮಂಡಳಿ (ರಿ.) ಇವರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಮಾರಂಭದಲ್ಲಿ ಮುಖ್ಯ […]
ಶ್ರೀ ಗೋಪಾಲಕೃಷ್ಣ ಮಂದಿರ ಮುಂಡ್ಕಿನಜೆಡ್ಡು: ಆಗಸ್ಟ್ 26 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ

ಉಡುಪಿ: ಶ್ರೀ ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಆಗಸ್ಟ್ 26 ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ ಜರುಗಲಿದೆ. ಆಗಸ್ಟ್ 27 ಮಂಗಳವಾರ ಅಪರಾಹ್ನ ಗಂಟೆ 3.00ರಿಂದ ವಿಟ್ಲ ಪಿಂಡಿ ಪ್ರಯುಕ್ತ ಈ ಕೆಳಗಿನ ವಿವಿಧ ಸ್ಪರ್ಧೆಗಳು ಜರಗಲಿವೆ ರಸಪ್ರಶ್ನೆ:ಪ್ರಾಥಮಿಕ ಶಾಲಾ ವಿಭಾಗಪ್ರೌಢ ಶಾಲಾ ವಿಭಾಗ ಸಂಗೀತ ಕುರ್ಚಿ:ಪ್ರಾಥಮಿಕ ಬಾಲಕರುಪ್ರಾಥಮಿಕ ಬಾಲಕಿಯರುಪ್ರೌಢ ಬಾಲಕರುಪ್ರೌಢ ಬಾಲಕಿಯರುಮಹಿಳೆಯರುಪುರುಷರು ಚಮಚ ಲಿಂಬೆ ಓಟ:ಮಹಿಳೆಯರಕಿರಿಯ ವಿಭಾಗ (ಪ್ರಾಥಮಿಕ)ಹಿರಿಯ ವಿಭಾಗ (ಸಾಮಾನ್ಯ) ಇಡ್ಲಿ ತಿನ್ನುವುದು:ಪ್ರೌಢ ಶಾಲಾ ಬಾಲಕರುಪ್ರೌಢ ಶಾಲಾ ಬಾಲಕಿಯರುಮಹಿಳೆಯರುಪುರುಷರು ಆನೆಗೆ […]