ಕಂಚಿನಡ್ಕದಲ್ಲಿ ನಿರ್ಮಿಸಲು ಹೊರಟಿರುವ ಟೋಲ್ ಗೇಟ್ ರದ್ದುಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಉಡುಪಿ: ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿರುವ ಟೋಲ್ ಗೇಟ್ ರದ್ದು ಪಡಿಸುವಂತೆ ಮತ್ತು ಈ ರಸ್ತೆಯಲ್ಲಿ ಟೋಲ್ ಸ್ಥಾಪನೆ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಂಚಿನಡ್ಕದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಹಿಂದಿನ ಯಡಿಯೂರಪ್ಪ ಸರಕಾರ ಅವಧಿಯಲ್ಲಿ ಟೋಲ್ ಗೇಟ್ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಳ್ಮಣ್ ನಲ್ಲಿ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ಸ್ಥಳಾಂತರ ಮಾಡಿತ್ತು. ಆದರೆ, ಯಾವುದೇ […]

ಉಡುಪಿ: ಆ.26ರಂದು ಟೈಗರ್ಸ್ ಫ್ರೆಂಡ್ಸ್ ನ ಅಬ್ಬರದ ಉಡುಪಿ ಪಿಲಿನಲಿಕೆ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಾ ಜನ್ಮಾಷ್ಟಮಿಯ ಪ್ರಯುಕ್ತ ಟೈಗರ್ಸ್ ಫ್ರೆಂಡ್ಸ್ ಉಡುಪಿ ವತಿಯಿಂದ ತೃತೀಯ ವರ್ಷದ “ಅಬ್ಬರದ ಉಡುಪಿ ಪಿಲಿನಲಿಕೆ ಕಾರ್ಯಕ್ರಮ” ಇದೇ ಆ.26ರಂದು ಕುಂಜಿಬೆಟ್ಟು ಮೀನುಮಾರುಕಟ್ಟೆ ಬಳಿಯ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಗೌರವ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4.30ಕ್ಕೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ದೊಡ್ಡಣಗುಡ್ಡೆ ಶ್ರೀ ದುರ್ಗಾ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ […]

ಕಂಚಿನಡ್ಕ ನೂತನ ಟೋಲ್ ಗೇಟ್ ಗೆ ಟೆಂಪೋ ಲಾರಿ ಮಾಲೀಕರಿಂದ ವಿರೋಧ

ಉಡುಪಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಕಂಚಿನಡ್ಕ ಎಂಬಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್‌ ಗೇಟ್ ವಿರುದ್ಧ ಟೆಂಪೋ ಮತ್ತು ಲಾರಿ ಚಾಲಕರ ಸಂಘ ಪ್ರತಿಭಟನೆಗೆ ಸಜ್ಜಾಗಿದೆ. ಇದೇ ತಿಂಗಳ 24ರಂದು ಹೊಸ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಸಂಘಟಕ ರಾಘವೇಂದ್ರ ಶೆಟ್ಟಿ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಮೂರು ಟೋಲ್ ಗೇಟ್ ಗಳಿದ್ದು ಪಕ್ಕದ ದಕ್ಷಿಣ ಕನ್ನಡದಲ್ಲೂ ಟೋಲ್ ಗೇಟ್ ಗಳಿವೆ. ಪ್ರಕೃತಿ ವಿಕೋಪ, ದಿನ ವಸ್ತುಗಳ […]

ಶಿರ್ವ: ಯುವಕ ನಾಪತ್ತೆ.

ಶಿರ್ವ: ಮೂಲದ ಯುವಕ ಮೊಹಮ್ಮದ್‌ ಷರೀಪ್‌ (30) ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಆ.4 ರಂದು ಬೆಳಿಗ್ಗೆ 08:30 ಗಂಟೆಗೆ ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗಿದ್ದು ಸಂಜೆಯಾದರು ವಾಪಾಸು ಮನೆಗೆ ಬಾರದೇ ಇದ್ದು ಈ ಬಗ್ಗೆ ಆತನ ಇರುವಿಕೆಯ ಬಗ್ಗೆ ಆಸುಪಾಸು ವಿಚಾರಿಸಿದಾಗಲೂ ಆತನು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದರಾಮಯ್ಯನವರೇ ಇನ್ನು 9 ದಿನ ಉಳಿದಿದೆ, ನಿಮ್ಮ ಕುರ್ಚಿ ಅಲ್ಲಾಡುತ್ತಿದೆ; ಶಾಸಕ ಯಶ್ಪಾಲ್ ಸುವರ್ಣ ವ್ಯಂಗ್ಯ

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿಯೇ ಈಗ ಅಲ್ಲಾಡುತ್ತಿದೆ. ಇನ್ನು ನಿಮಗೆ ಒಂಭತ್ತು ದಿನಗಳ ಕಾಲಾವಕಾಶ ಇದೆ. ಅಷ್ಟರ ಒಳಗೆ ಜನರ ವಿಶ್ವಾಸ ಗಳಿಸಿ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವ್ಯಂಗ್ಯವಾಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಿಮ್ಮದೇ ಸರಕಾರದ ಶಾಸಕರು ಮತ್ತು ಸಚಿವರು ಸರಕಾರ ಶೇಕ್ ಆಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಆಗಸ್ಟ್ 29 ತಾರೀಕಿನ ತನಕ ನಿಮಗೆ ಸಮಯ ಇದೆ. ರಾಜಕೀಯ ನಿವೃತ್ತಿ ಅಂಚಿನಲ್ಲಾದರೂ ಉಳಿದ ಅನುದಾನಗಳನ್ನು ಬಿಡುಗಡೆ ಮಾಡಿ. ದೇವರು […]