ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ; ಮಲ್ಪೆ ಪಡುಕೆರೆಯಲ್ಲಿ ಮಾನವ ಸರಪಳಿ ರಚಿಸುವ ಮೂಲಕ ವಿಶಿಷ್ಟ ರೀತಿಯ ಪ್ರತಿಭಟನೆ

ಉಡುಪಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಉಡುಪಿಯ ಪಡುಕೆರೆ ನಿವಾಸಿಗಳು ಬೃಹತ್ ಮಾನವ ಸರಪಳಿ ರಚಿಸಿದ್ದಾರೆ. ಬಾಂಗ್ಲಾದಲ್ಲಿ ಅರಾಜಕತೆ ಮನೆ ಮಾಡಿದ್ದು, ಅಲ್ಲಿ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರ ವಿರುದ್ಧ ಕುದ್ರು ನಿವಾಸಿಗಳು ಮನೆಯಿಂದ ಹೊರ ಬಂದು ಮಾನವ ಸರಪಳಿ ರಚಿಸಿದರು. ಪಡುಕೆರೆಯ ಶನೀಶ್ವರ ದೇವಸ್ಥಾನ ಬಳಿಯಿಂದ ಮಾನವ ಸರಪಳಿ ಆರಂಭವಾಗಿದ್ದು, ಒಂದು ಭಾಗದಲ್ಲಿ ಸಮುದ್ರ ಮತ್ತೊಂದು ಭಾಗದಲ್ಲಿ ನದಿ ಇರುವ ಭೂಪ್ರದೇಶದಲ್ಲಿ ಪಡುಕೆರೆಯಿಂದ ಮಟ್ಟು ತನಕ ಮಾನವ ಸರಪಳಿ ರಚನೆ ಮಾಡಲಾಯಿತು. ಮಹಿಳೆಯರು ವೃದ್ಧರು ಯುವಕರು […]