ಬ್ರಹ್ಮಾವರ: ಫೈನಾನ್ಸಿನಲ್ಲಿ ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ನೀಡುವುದಾಗಿ ನಂಬಿಸಿ 75 ಲಕ್ಷ ರೂ.ವಂಚನೆ; ಪ್ರಕರಣ ದಾಖಲು.
ಬ್ರಹ್ಮಾವರ: ಫೈನಾನ್ಸಿನಲ್ಲಿ ಹರಾಜಿಗೆ ಬಂದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಒಟ್ಟು 75 ಲಕ್ಷರೂ.ಗಳನ್ನು ವಂಚಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸುವಾಸಿನಿ ಹಾಗೂ ಆತನ ಸಹೋದ ವಾದಿರಾಜ ಎಂಬವರು ನಡೂರಿನ ನಿತ್ಯಾನಂದ ಎಂಬವರಿಗೆ 35 ಲಕ್ಷ ರೂ.ಸೇರಿ ದಂತೆ ಹಲವರಿಗೆ ಒಟ್ಟು 75 ಲಕ್ಷ ರೂ.ವಂಚಿಸಿದ ಆರೋಪಿಗಳು. ಮಣಿಪಾಲದ ಸಿಟಿಕಾರ್ಪ್ ಫೈನಾನ್ಸ್ ಎಂಬ ಹಣಕಾಸು ಸಂಸ್ಥೆಯಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ಇವರು ನಿತ್ಯಾನಂದ (64) ಹಾಗೂ ಇತರರನ್ನು […]
ಉಡುಪಿ: ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಡಳಿತ ಸೂಚನೆ.
ಉಡುಪಿ, ಆಗಸ್ಟ್ 20: ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಓ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಮಟ್ಟವು ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಇತರೇ ಜಲಚರಗಳ ಜೀವಕ್ಕೆ ಆಪಾಯವಾಗುತ್ತದೆ, ಜೊತೆಗೆ ಕಲುಷಿತ […]
ಟಿ.ಜೆ. ಅಬ್ರಹಾಂ 193 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದಾಗ ರಾಜೀನಾಮೆ ನೀಡಿದ್ದೀರಾ?
ಉಡುಪಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿರುವ ಪ್ರಮೋದ್ ಮಧ್ವರಾಜ್ ಅವರೇ, ತಾವು ಸಚಿವರಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ 193 ಕೋಟಿ ರೂಪಾಯಿ ಮೊತ್ತದ ವಂಚನೆ ದೂರು ದಾಖಲಿಸಿದ್ದ ವೇಳೆ ತಾವು ರಾಜೀನಾಮೆ ನೀಡಿದ್ದೀರಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ. ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ ಕಾಂಚನ್ ಅವರು, ಪ್ರಮೋದ್ ಮಧ್ವರಾಜ್ […]
ವಿಧಾನಸೌಧದ ಎದುರು ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಿ: ಶಾಸಕ ಯಶ್ ಪಾಲ್ ಸುವರ್ಣ ಒತ್ತಾಯ
ಉಡುಪಿ: ರಾಜ್ಯ ಮತ್ತು ದೇಶದಾದ್ಯಂತ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಮೊದಲೇ ನಾವು ಹೇಳಿದಂತೆ ವಿಧಾನಸೌಧದ ಎದುರು ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಒತ್ತಾಯ ಮಾಡಿದ್ದಾರೆ. ನಾರಾಯಣ ಗುರುಗಳು ಕೇರಳದಲ್ಲಿ ಹುಟ್ಟಿ ಅಲ್ಲೇ ಹೋರಾಟಗಳನ್ನು ಮಾಡಿ ದೇಶಾದ್ಯಂತ ಮಠ ಮಂದಿರಗಳನ್ನು ಸ್ಥಾಪನೆ ಮಾಡಲು ಕಾರಣಕರ್ತರಾದವರು. ಒಂದೇ ದೇವರು ಒಂದೇ ಕುಲ ಎಂಬ ತತ್ವ ಸಾರಿ ನಮಗೆಲ್ಲಾ ಆದರ್ಶಪ್ರಾಯರಾದವರು. ಇನ್ನು ಮುಂದಾದರೂ ಅವರ […]
ಉಡುಪಿ: ಮುರಳೀಧರ್ ಭಟ್ ಅವರಿಗೆ “ವಿಪ್ರ ಛಾಯಾ ಸಾಧಕ” ಪುರಸ್ಕಾರ
ಉಡುಪಿ: ಛಾಯಾಚಿತ್ರ ಕಲಾವಿದ ಮುರಳೀಧರ್ ಭಟ್ ಕೊಡವೂರು ಇವರಿಗೆ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ “ವಿಪ್ರ ಛಾಯಾ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವಲಯ ಬ್ರಾಹ್ಮಣ ಮಹಾಸಭಾದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಛಾಯಾಗ್ರಹಣ ಮಾಡಿತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ ತೋಡತ್ತಿಲ್ಲಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ವಿಪ್ರ ಸೇನಾನಿ ಶ್ರೀ ಗಣೇಶ್ ಅಡಿಗ, ದಿನಕರ ರಾವ್ ಸಂಘದ ಅಧ್ಯಕ್ಷ ಸುರೇಂದ್ರ ಉಪಾಧ್ಯಾಯ, ಗೌರವಾಧ್ಯಕ್ಷರುಗಳಾದ ಗೋವಿಂದ ಐತಾಳ್, […]