ಬ್ರಹ್ಮಾವರ: ಅಂಗಡಿ ಮಾರಾಟಕ್ಕಿದೆ

ಬ್ರಹ್ಮಾವರ: ಬ್ರಹ್ಮಾವರ ಬಸ್ ಸ್ಟ್ಯಾಂಡ್ ಬಳಿ ಬಾರ್ನ್ಸ್ ಪ್ಲಾಜಾದ ಗ್ರೌಂಡ್ ಫ್ಲೋರಿನಲ್ಲಿ 385 ಚದರ ಅಡಿಗಳ ಅಂಗಡಿ ಮಾರಾಟಕ್ಕಿದೆ. ಹಾಗೂ ವಾಶ್ ರೂಂ ಸೌಲಭ್ಯ ಹೊಂದಿದೆ.ಮೊ: 8197815875

ಕುಂದಾಪುರ: ಆ.25 ರಂದು ಶ್ರಾವಣ ಸಂಧ್ಯಾ ಮತ್ತು ಸೂರ್ಯ ಸಿದ್ಧಾಂತ ಫೌಂಡೇಶನ್ ದಶಮಾನೋತ್ಸವ ಸಂಭ್ರಮ

ಕುಂದಾಪುರ: ಕೆರ್ಗಾಲು ಮಟ್ನಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೊಗೇರಿ ಸೂರ್ಯ ಸಿದ್ಧಾಂತ ಫೌಂಡೇಶನ್ ಮತ್ತು ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯ ಇವರ ಸಹಯೋಗದೊಂದಿಗೆ ಶ್ರಾವಣ ಸಂಧ್ಯಾ ಕಾರ್ಯಕ್ರಮ ಮತ್ತು ಸೂರ್ಯ ಸಿದ್ಧಾಂತ ಫೌಂಡೇಶನ್ದಶಮಾನೋತ್ಸವದ ಆ.25 ರವಿವಾರ ಮಧ್ಯಾಹ್ನ 2.30ರಿಂದ ನಡೆಯಲಿದೆ. ಸೂರ್ಯ ಸಿದ್ಧಾಂತ ಫೌಂಡೇಶನ್ ನಿರ್ದೇಶಕರಾದ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳರು ಕಾರ್ಯಕ್ರಮದ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಲಿದ್ದಾರೆ. ವಿದ್ವಾನ್ ಭರತ್ ಐತಾಳ್ ರವರು ಪಂಚಾಂಗ ಶ್ರವಣಮತ್ತು ಧಾರ್ಮಿಕ ಪ್ರವಚನ ನೆಡೆಸಿ ಕೊಡುವರು. ಸಭಾಧ್ಯಕ್ಷರಾಗಿ […]

ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್, ವಿಚಾರಣೆ ಆ.29ಕ್ಕೆ ಮುಂದೂಡಿಕೆ.

ಬೆಂಗಳೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 29ಕ್ಕೆ ಮುಂದೂಡಿದೆ. ಕರ್ನಾಟಕ ಹೈಕೋರ್ಟ್ ನಲ್ಲಿ ಸಿಎಂ ಪರ ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ. ಇದೇ ವೇಳೆ ಜನಪ್ರತಿನಿಧಿಗಳ ಕೋರ್ಟ್​ನ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಸೂಚಿಸಿದ್ದು ಈ ಮೂಲಕ ಸಿದ್ದರಾಮಯ್ಯಗೆ […]

ಉಡುಪಿ: ನೂರಾರು ಉಚಿತ ಹೆರಿಗೆ ಮಾಡಿಸಿದ್ದ ಶುಶೂಷಕಿ ಲಕ್ಷ್ಮೀ ಮರಕಾಲ್ತಿ ಇನ್ನಿಲ್ಲ.

ಉಡುಪಿ: ಬ್ರಹ್ಮಾವರದ ವಡ್ಡರ್ಸೆ ಪಂಚಾಯತ್ ನ ಕಾವಡಿ ಗ್ರಾಮದ ನಿವಾಸಿ ದಿವಂಗತ ಅಣ್ಣಯ್ಯ ಅವರ ಧರ್ಮಪತ್ನಿ,ಗ್ರಾಮಾಂತರ ಭಾಗದ ಹೆರಿಗೆ ಸ್ಪೆಷಲಿಸ್ಟ್ ಎಂದೇ ಖ್ಯಾತರಾದ ಲಕ್ಷ್ಮೀ ಮರಕಾಲ್ತಿ (88) ಹೃದಯಾಘಾತದಿಂದ ನಿಧನರಾದರು.ಹಳ್ಳಿ ಕಡೆ ಮನೆಮನೆಗೆ ತೆರಳಿ ಬಾಣಂತಿಯರಿಗೆ ಹೆರಿಗೆ ಮಾಡಿಸುವ ಕಾಯಕ ನಡೆಸುತ್ತಿದ್ದು ಸುಮಾರು 800 ಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಖ್ಯಾತಿ ಹೊಂದಿದ್ದರು. ಈ ಕಾಯಕವನ್ನು ಉಚಿತ ಸೇವೆಯಾಗಿ ಮಾಡುತ್ತಿದ್ದರು ಎಂಬುದು ಗಮನಾರ್ಹ. ಮೃತರು ಎರಡು ಗಂಡು,ಐದು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರರನ್ನು ಅಗಲಿದ್ದಾರೆ.

ಕುಂದಾಪುರ: ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಕಳ್ಳತನ‌ ಪ್ರಕರಣ; ಕದ್ದ ಹುಂಡಿ ಹಣ ಸಮೀಪದ ಶಾಲೆಯಲ್ಲಿಟ್ಟು ಹೋದ ಕಳ್ಳ.

ಕುಂದಾಪುರ: ಹೆಮ್ಮಾಡಿ‌ ಲಕ್ಷ್ಮೀನಾರಾಯಣ ದೇವಸ್ಥಾನದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಹುಂಡಿ ಹಣ ಕದ್ದೊಯ್ದ ಕಳ್ಳ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಇಟ್ಟು ಹೋದ ಘಟನೆ ಇಂದು (ಸೋಮವಾರ) ಸಂಜೆ ತಡವಾಗಿ ಬೆಳಕಿಗೆ ಬಂದಿದೆ‌. ಶನಿವಾರ ಹೆಮ್ಮಾಡಿನ ಪ್ರಾಥಮಿಕ ಶಾಲೆಯ ವರಾಂಡದ ಜಗುಲಿಯ ಮೇಲೆ ಹಸಿರು ಚೀಲ ಇದ್ದುದನ್ನು ಗಮನಿಸಿದ್ದ ಶಿಕ್ಷಕರು ಅಷ್ಟೇನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಭಾನುವಾರ ಶಾಲೆ‌ಗೆ ರಜೆ‌ ಇದ್ದು, ಇಂದು ಅದೇ ಸ್ಥಳದಲ್ಲಿದ್ದ ಚೀಲವನ್ನು ಗಮನಿಸಿದ ವಿದ್ಯಾರ್ಥಿಗಳು ಹಸಿರು ಚೀಲವನ್ನು ಬಿಡಿಸಿ ನೋಡಿದಾಗ ಹಣ ಇರುವುದು ಗಮನಕ್ಕೆ ಬಂದಿದೆ. […]