ಆರೋಗ್ಯ ನಿಗಾ ಸಹಾಯಕರ ತರಬೇತಿ (ಹೋಮ್ ನರ್ಸಿಂಗ್): ಅರ್ಜಿ ಆಹ್ವಾನ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಒಂದು ತಿಂಗಳ ಉದ್ಯೋಗಾಧಾರಿತ ಆರೋಗ್ಯ ನಿಗಾ ಸಹಾಯಕರ ತರಬೇತಿಗಾಗಿ 18 ರಿಂದ 30 ವರ್ಷದ ವರೆಗಿನ ವಯೋಮಿತಿಯ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ಉತ್ತೀರ್ಣ/ ಅನುತ್ತೀರ್ಣ ಅಥವಾ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಮಂತ್ರಾಲಯದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾನ್ಯತೆ ಪಡೆದ ಪಠ್ಯ ಕ್ರಮದಲ್ಲಿ ತರಬೇತಿ ನೀಡಲಾಗುವುದು. ಒಂದು ತಿಂಗಳ ತರಬೇತಿಯ ಅವಧಿಯಲ್ಲಿ […]

ಮಣಿಪಾಲ: MSDC “ಓರೇನ್ ಇಂಟರ್ನ್ಯಾಷನಲ್” ನಲ್ಲಿ ಒಂದು ಕೋರ್ಸ್‌ಗೆ ನೋಂದಾಯಿಸಿ ಹಾಗೂ ಇನ್ನೊಂದು ಕೋರ್ಸ್ ‘ಉಚಿತ’ವಾಗಿ ಪಡೆಯಿರಿ.

ಮಣಿಪಾಲ: MSDC (ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಒಂದು ಕೋರ್ಸ್‌ ನೋಂದಾಯಿಸಿ ಹಾಗೂ ಒಂದು ಹೆಚ್ಚಿನ ಕೋರ್ಸ್ ಉಚಿತವಾಗಿ ಪಡೆಯಿರಿ. ಈ ಆಫರ್ 31 ಆಗಸ್ಟ್ ವರೆಗೆ ಮಾತ್ರ ಇರುವುದು. ಸೀಮಿತ ಸೀಟುಗಳು ಮಾತ್ರ ಲಭ್ಯಿಇವೆ. MSDC ಓರೇನ್ ಇಂಟರ್ನ್ಯಾಷನಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೌಶಲ್ಯ ತರಬೇತಿಯನ್ನು ನೀಡಿ ವೃತ್ತಿಪರರನ್ನಾಗಿ ಮಾಡುವುದು ಹಾಗೂ ಅವರಿಗೆ ಉದ್ಯೋಗ ಕಲ್ಪಿಸಲು ಅಥವಾ ಸ್ವ ಉದ್ಯಮ ಸ್ಥಾಪಿಸಲು ಸಹಕಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಮಣಿಪಾಲ್ […]

ಉಡುಪಿ: ತುಳುನಾಡ ಟೈಗರ್ಸ್ ನ‌ 4ನೇ ವರ್ಷದ ‘ಹುಲಿ ಕುಣಿತ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್, ಉಡುಪಿ ಇವರ ವತಿಯಿಂದ ರಾಜೇಶ್ ಸುವರ್ಣ ನೇತೃತ್ವದಲ್ಲಿ ಇದೇ ಆ.26 ಮತ್ತು 27ರಂದು ನಿಟ್ಟೂರು ಹೈಸ್ಕೂಲ್ ಬಳಿ ಆಯೋಜಿಸಲಾಗಿರುವ 4ನೇ ವರ್ಷದ ‘ಹುಲಿ ಕುಣಿತ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ತುಳುನಾಡ ಟೈಗರ್ಸ್ ತಂಡದ ಪ್ರಮುಖರಾದ ರಾಜೇಶ್ ಸುವರ್ಣ, ಮದನ್ ಮಣಿಪಾಲ್, ರಂಗಣ್ಣ, ದಿವಾಕರ ಪೂಜಾರಿ, ಸುಕೇಶ್ ಪೂಜಾರಿ, ಸುದರ್ಶನ್, […]

ರೋಹನ್ ಕಾರ್ಪೊರೇಷನ್:78 ನೇ ಸ್ವಾತಂತ್ರ್ಯ ಸಂಭ್ರಮಾಚರಣೆ

ಮಂಗಳೂರು : 78 ನೇ ಸ್ವಾತಂತ್ರ ದಿನವನ್ನು ರೋಹನ್ ಕಾರ್ಪೋರೇಷನ್ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಕಾರ್ಮಿಕ ಅಧಿಕಾರಿ ವಿಲ್ಮಾ “ಕನಸಿನ ಕಟ್ಟಡದ ರೋಹನ್ ಕಾರ್ಪೊರೇಷನ್ ಜೊತೆ ಸೇರಿ ಹೊಸ ಭಾರತ ನಿರ್ಮಾಣ ಮಾಡೋಣ, ಕಾರ್ಮಿಕರಿಲ್ಲದೆ ನಮಗೆ ಸೂರಿಲ್ಲ ನಿಮ್ಮ ನಡುವಿನ ಸ್ವಾತಂತ್ರೋತ್ಸವ ನಿಜಕ್ಕೂ ನೆನಪಿನ ಬುತ್ತಿ,” ಎಂದರು. ಸ್ವಾತಂತ್ರೋತ್ಸವದ ಕುರಿತಾಗಿ ಮಾತನಾಡಿದ ಕಾರ್ಮಿಕ ಅಧಿಕಾರಿ ಕುಮಾರ್ “ಕಾರ್ಮಿಕರಿಗೆ ಇಂದು ರಜೆ ಘೋಷಣೆ ಮಾಡಿದ್ದೇವೆ, ಸ್ವಾತಂತ್ರಕ್ಕಾಗಿ ಮುಡಿಪಿರುವ ಈ ದಿನವನ್ನು ಕಾರ್ಮಿಕರು ಸ್ವತಂತ್ರವಾಗಿ […]

ಆಳ್ವಾಸ್’ನಲ್ಲಿ ಸಂಭ್ರಮದಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವ; 15 ಸಾವಿರಕ್ಕೂ ಅಧಿಕ ಜನರು ಭಾಗಿ.

ಮೂಡುಬಿದಿರೆ: ವ್ಯಕ್ತಿ, ಸಮುದಾಯ, ದೇಶ ಸೇರಿದಂತೆ ಸರ್ವರಲ್ಲಿ ನಿರ್ಭೀತ ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಆಶಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆಳ್ವ ಆವರಣದ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡ 78ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶವನ್ನು ಆರ್ಥಿಕ, ಸಾಮಾಜಿಕ, ಸಾಮುದಾಯಿಕವಾಗಿ ಎಲ್ಲರೂ ಸೇರಿ ಕಟ್ಟೋಣ ಎಂದ ಅವರು, ವೈಯಕ್ತಿಕ ಸ್ವಾತಂತ್ರ್ಯದ ಉಳಿವೂ ಇಂದಿನ ಅವಶ್ಯಕತೆ. ಸ್ವಾತಂತ್ರ್ಯ ವನ್ನು ಯಾರದೇ ಪಾದಕ್ಕೆ ಸಮರ್ಪಿಸಬೇಡಿ ಎಂದು […]