ಹಿರಿಯಡಕ: ವಾಲಿಬಾಲ್ ಪಂದ್ಯಾಟ ಇಂಡಿಪೆಂಡೆನ್ಸ್ ಟ್ರೋಫಿ-2024: ಯುವ ಭಾಂದವರು ಬೊಮ್ಮರಬೆಟ್ಟು ಹಿರಿಯಡ್ಕ ತಂಡ ಪ್ರಥಮ.
ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯ ಹಾಗೂ ನೇತೃತ್ವದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ ಅಂಡರ್ 20 ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟ ಇಂಡಿಪೆಂಡೆನ್ಸ್ ಟ್ರೋಫಿ-2024 ರಲ್ಲಿ ಯುವ ಭಾಂದವರು ಬೊಮ್ಮರಬೆಟ್ಟು ಹಿರಿಯಡ್ಕ ತಂಡವು ಗೆದ್ದು, ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಇಶಾನ್ ಸ್ಟ್ರೈಕರ್ಸ್ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಇದರ ಸಂಸ್ಥಾಪಕರಾದ ಡಾ.ಶಿವಕುಮಾರ್ ಕರ್ಜೆ ಅವರ ದಿವ್ಯ ಹಸ್ತದಿಂದ ಪಂದ್ಯಕೂಟಕ್ಕೆ ಚಾಲನೆ ನೀಡಲಾಯಿತು. ಮುಖ್ಯ […]
ವರಮಹಾಲಕ್ಷ್ಮಿ ಹಬ್ಬ: ಆನೆಗುಡ್ಡೆ ದೇವಸ್ಥಾನದಲ್ಲಿ ವಿಶೇಷ ಪೂಜೆ
ಉಡುಪಿ: ಸಂಕ್ರಾಂತಿ ಮತ್ತು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು. ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಸಂಕ್ರಾಂತಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡಿದರು. ಏಕಾದಶಿ ಇರುವ ಹಿನ್ನೆಲೆಯಲ್ಲಿ ಯಾವುದೇ ಸೇವೆಗಳು ಲಭ್ಯವಿರಲಿಲ್ಲ. ಆದರೂ ಭಕ್ತರು ದೇವಳಕ್ಕೆ ಭೇಟಿಕೊಟ್ಟು ದೇವರಲ್ಲಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ವಾಹನಗಳ ಪೂಜೆ ನೆರವೇರಿತು.
ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಸುಂದರ್ ಶೆಟ್ಟಿ ನಿಧನ
ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಕುಂಟಾಲಕಟ್ಟೆ-ಬೈರಂಪಳ್ಳಿ ನಿವಾಸಿ ಸುಂದರ್ ಶೆಟ್ಟಿ (84) ಇವರು ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಬೇಬಿ ಶೆಟ್ದಿ, ಮೂವರು ಪುತ್ರರು ರಮಾನಂದ, ಸದಾನಂದ ದಯಾನಂದ ಹಾಗೂ ಅಪಾರ ಬಂಧುವಿತರನ್ನು ಅಗಲಿದ್ದಾರೆ.
ಶೀಘ್ರದಲ್ಲೇ ಉಡುಪಿ ಜಿಲ್ಲೆಗೆ ಶುಭಸುದ್ದಿ ಕೊಡ್ತೇನೆ: ಸಚಿವ ಸೋಮಣ್ಣ ಭರವಸೆ
ಉಡುಪಿ: ಕರಾವಳಿ ಭಾಗ ನಮ್ಮ ಹೃದಯವಿದ್ದಂತೆ. ಇಲ್ಲಿನ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿ ಉನ್ನತೀಕರಣಗೊಳಿಸುವುದು ಇಲಾಖೆಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಕಾಪುವಿಗೆ ಭೇಟಿ ನೀಡಿದ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ರೈಲ್ವೇ ರಾಜ್ಯ ಖಾತೆಯ ಸ್ವತಂತ್ರ ಸಚಿವನಾಗಿ ಎರಡು ವಾರಗಳ ಹಿಂದೆ ಮಂಗಳೂರಿಗೆ ಬಂದು ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ […]
ಎಂಜಿಎಂ ಸಂದ್ಯಾಕಾಲೇಜು: ಅಭಿವಿನ್ಯಾಸ ಕಾರ್ಯಕ್ರಮ
ಉಡುಪಿ: ಎಂ.ಜಿ.ಎಂ ಸಂಧ್ಯಾ ಕಾಲೇಜು ಉಡುಪಿ ಇಲ್ಲಿನ 2024-25ನೇ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಲೇಜಿನ ಶ್ರೀಮಂತ ಇತಿಹಾಸ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಮಾತನಾಡಿದರು. ಬಿಸಿಎ ವಿಭಾಗದ ಸಂಯೋಜಕ ಡಾ.ಎಂ.ವಿಶ್ವನಾಥ ಪೈ ಉಪಸ್ಥರಿದ್ದರು. ಬಿಕಾಂ ವಿಭಾಗದ ಸಂಯೋಜಕಿ ಡಾ.ಮಲ್ಲಿಕಾ ಶೆಟ್ಟಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಕಾವ್ಯ […]