ಶಿರಿಯಾರ: ಟೈಲರ್ ನಾಗರಾಜ್ ಶೆಣೈ ನಿಧನ

ಬ್ರಹ್ಮಾವರ: ಶಿರಿಯಾರ ಕಲ್ಬರ್ಗಿ ನಿವಾಸಿ ಟೈಲರ್ ನಾಗರಾಜ್ ಶೆಣೈ (62) ಅವರು ಆ.15ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು ಶಿರಿಯಾರದಲ್ಲಿ ಎಸ್.ಎನ್. ಟೈಲರ್ ಶಾಪ್ ಹೊಂದಿದ್ದು ಸುಮಾರು 35 ವರ್ಷಗಳ ಕಾಲ ಈ ಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಅನಂತರ 13 ವರ್ಷಗಳಿಂದ ಬೆಂಗಳೂರಿನ ಜಯನಗರದಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸಿದ್ದರು.
ಮಣಿಪಾಲ: ಕಾರಿನಲ್ಲಿ ಉಸಿರುಗಟ್ಟಿ ಕಾರಿನ ಚಾಲಕ ಮೃತ್ಯು.

ಉಡುಪಿ: ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕನೋರ್ವ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.ಮೃತ ಚಾಲಕನನ್ನು ಚಿಕ್ಕಮಗಳೂರು ಮೂಲದ ಆನಂದ (37) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಗುರುರಾಜ್ ಎಂಬವರು ಆ.14ರಂದು ರಾತ್ರಿ ಆನಂದ ಅವರ ಕಾರಿನಲ್ಲಿ ತನ್ನ ತಂದೆಯನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದರು. ಗುರುರಾಜ್ ಅವರ ತಂದೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಚಾಲಕ ಆನಂದ ಅವರು ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಕಾರಿನಲ್ಲೇ ಮಲಗಿದ್ದರು. ಆ.15ರಂದು ಬೆಳಿಗ್ಗೆ ನೋಡುವಾಗ ಆನಂದ ಅವರು ಕಾರಿನಲ್ಲೇ […]
ಬ್ಯಾಂಕ್ ಆಫ್ ಬರೋಡಾ 78ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ

ಮಂಗಳೂರು: ಬ್ಯಾಂಕ್ ಆಫ್ ಬರೋಡಾವು ತನ್ನ ಮಂಗಳೂರಿನ ವೀರಾಜ್ ಟವರ್ಸ್‌ನಲ್ಲಿರುವ ವಲಯ ಕಚೇರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಿತು. ವಲಯ ಮುಖ್ಯಸ್ಥರಾದ ಶ್ರೀ ರಾಜೇಶ್ ಖನ್ನಾ ಅವರು ರಾಷ್ಟ್ರಧ್ವಜಾರೋಹಣ ನಡೆಸಿ, ಬ್ಯಾಂಕರ್‌ಗಳಾಗಿ ದೇಶ ಸೇವೆಗೆ ಮತ್ತು ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಿಕೊಳ್ಳುವಂತೆ ಸಿಬ್ಬಂದಿಗೆ ಪ್ರೇರೇಪಿಸಿದರು. ಶ್ರೀ ರಮೇಶ್ ಕಾನಡೆ, ಡಿಜಿಎಂ ಶ್ರೀ ಅಶ್ವಿನಿ ಕುಮಾರ್, ಡಿಜಿಎಂ; ಶ್ರೀ ಸನೀಲ್ ಕುಮಾರ್, ಮಂಗಳೂರು ನಗರದ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಹಿರಿಯ ಅಧಿಕಾರಿಗಳು, […]
ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆ : ಸ್ವಾತಂತ್ರೋತ್ಸವ ಸಂಭ್ರಮಾಚರಣೆ

ಕಟಪಾಡಿ: ಕಟಪಾಡಿಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಟಪಾಡಿಯ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದರ ಮುಖಾಂತರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಹ್ಮಾವರ ವಲಯದ ಕರ್ನಾಟಕ ಅರಣ್ಯ ಇಲಾಖೆಯ ಗಸ್ತು ವನಪಾಲಕರಾದ (Beat Forester) ಹವಾಲ್ದಾರ್ ಶ್ರೀ ಕೇಶವ ಪೂಜಾರಿ ಎಂ ಅವರು ದ್ವಜಾರೋಹಣ ನೆರವೇರಿಸಿ, “ದೇಶ ಸೇವೆಯೇ ಈಶ ಸೇವೆ ” ಎಂಬ ನುಡಿ ಮುತ್ತಿನಂತೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದೆಂದರೆ ಅದೊಂದು ಹೆಮ್ಮೆಯ ವಿಚಾರ […]
ಉಡುಪಿ: ಆಯುರ್ವೇದ ಔಷಧಿಯಲ್ಲ ಜೀವನ ಪದ್ಧತಿ: ವಿಜಯ್ ಕೊಡವೂರು

ಉಡುಪಿ: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಪುಣ್ಯಕೋಟಿ ಗೋ ಸೇವಾ ಟ್ರಸ್ಟ್ (ರಿ.) ಬೆಳ್ಮಾರು ಬ್ರಹ್ಮಾವರ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ಬ್ರಾಹ್ಮಣ ಮಹಾಸಭಾ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ಆಯುರ್ವೇದ ಪಂಚಗವ್ಯ ಚಿಕಿತ್ಸಾ ಶಿಬಿರವು ಜು.12ರಂದು ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಸಂಯೋಜಕರಾದ ಕೆ ವಿಜಯ್ ಕೊಡವೂರು ಮಾತನಾಡಿ ಕೆಮಿಕಲ್ ನಿಂದ ತುಂಬಿರುವಂತಹ ಆರೋಗ್ಯವನ್ನು ದೂರ ಮಾಡಬೇಕು ನಮ್ಮ ಮುಂದಿನ ಪೀಳಿಗೆಯನ್ನು ಸಾವಯವ ಗ್ರಾಮ ಆರೋಗ್ಯವಂತ ಜನಾಂಗ ಮಾಡುವ ಉದ್ದೇಶ […]