ಉಡುಪಿ: ಕಾಂತಾರ ಚಿತ್ರಕ್ಕೆ ಎರಡು ನ್ಯಾಷನಲ್ ಫಿಲ್ಮ್ ಅವಾರ್ಡ್; ಖುಷಿ ಹಂಚಿಕೊಂಡ ನಟಿ ಮಾನಸಿ ಸುಧೀರ್.

ಉಡುಪಿ: ಕಾಂತಾರ ಚಿತ್ರಕ್ಕೆ ಎರಡು ನ್ಯಾಷನಲ್ ಫಿಲ್ಮ್ ಅವಾರ್ಡ್ ಲಭಿಸಿದ್ದು, ಈ ಚಿತ್ರದಲ್ಲಿ ರಿಷಬ್ ಶೆಟ್ಟಿಯ ತಾಯಿಯ ಪಾತ್ರ ಮಾಡಿದ್ದ ಮಾನಸಿ ಸುಧೀರ್ ಅವರು ಉಡುಪಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.ಮಹಾಲಕ್ಷ್ಮೀ ಹಬ್ಬದ ದಿನ ಅವಾರ್ಡ್ ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ಮಹಾಲಕ್ಷ್ಮೀ ದಿನ ನಾನು ನಟನೆ ಮಾಡಿರುವ ಎರಡು ಚಿತ್ರ ರಿಲೀಸ್ ಆಗಿದೆ. ಅದರ ಜೊತೆ ಅವಾರ್ಡ್ ಕೂಡ ಸಿಕ್ಕಿರುವುದು ತುಂಬಾ ಖುಷಿಯಾಗುತ್ತಿದೆ. ರಿಷಬ್ ಸರ್ ಗೆ ಅಭಿನಂದನೆ ಜೊತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹೊಂಬಾಳೆ ಕ್ರಿಯೆಷನ್ ಗು ಧನ್ಯವಾದ ಸಲ್ಲಿಸುತ್ತೇನೆ […]

ಉಡುಪಿ: ಮಹಿಳೆ ನಾಪತ್ತೆ.

ಉಡುಪಿ, ಆಗಸ್ಟ್ 16: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಾಡಬೆಟ್ಟು ಪುಳಿಮರ ಸಂಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಜ್ಯೋತಿ (34) ಎಂಬ ಮಹಿಳೆಯು ಆಗಸ್ಟ್ 06 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಉದ್ದ ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ಲಮಾಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ […]

ಹಿರಿಯಡ್ಕ: ವ್ಯಕ್ತಿ ನಾಪತ್ತೆ

ಉಡುಪಿ, ಆಗಸ್ಟ್ 16: ಹಿರಿಯಡ್ಕ ನಿವಾಸಿ ರಾಘವೇಂದ್ರ (44) ಎಂಬ ವ್ಯಕ್ತಿಯು ಮಾರ್ಚ್ 13 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಶ್ರಾವಣ ಶುಕ್ರವಾರವಾದ ಈ ದಿನ ಉಡುಪಿಯ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಅದ್ದೂರಿ ಪೂಜೆಗಳು ನಡೆಯುತ್ತಿವೆ. ವರಮಹಾಲಕ್ಷ್ಮಿ ವೃತದ ಜೊತೆಗೆ ದೇವಾಲಯದಲ್ಲಿ ವೈಭವದ ರಂಗ ಪೂಜೆ ಏರ್ಪಡಿಸಲಾಗಿದೆ. ದೇವಾಲಯವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ. ಲಕ್ಷ್ಮಿ ವೆಂಕಟೇಶ ದೇವರ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಿದ್ದಾರೆ. ಭಜನಾ ಸಪ್ತಾಹದ ಸಲುವಾಗಿ ಅಖಂಡ ಭಜನಾ ಮಹೋತ್ಸವಗಳು ದೇವಾಲಯದಲ್ಲಿ ನಡೆಯುತ್ತಿದೆ.

ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ: ಅವಧಿ ವಿಸ್ತರಣೆ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧರಿತ ಬೆಳೆ ವಿಮೆ ಯೋಜನೆಯಡಿ ಬೆಳೆ ಸಾಲ ಹೊಂದಿರುವ ರೈತರನ್ನು ಸಂಪೂರ್ಣ ಬೆಳೆ ವಿಮೆ ಯೋಜನೆಗೆ ಒಳಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ಬೆಳೆ ಸಾಲ ಹೊಂದಿದ ರೈತರನ್ನು ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳ ವಿಮಾ ಯೋಜನೆಗೆ ಒಳಪಡಿಸಲು ಆಗಸ್ಟ್ 25 ರ ವರೆಗೆ ಅವಧಿ ವಿಸ್ತರಣೆ ಮಾಡಿ ಅವಕಾಶ ಕಲ್ಪಿಸಲಾಗಿದ್ದು, ಬೆಳೆ […]