ಉಡುಪಿ: ಶ್ರೀಕೃಷ್ಣ ಮಠದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ಗೀತಾಮಂದಿರದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಧ್ವಜಾರೋಹಣವನ್ನು ನೆರವೇರಿಸಿದರು. ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಸುಗುಣ ಶಾಲೆಯ ಮಕ್ಕಳಿಂದ ದೇಶಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು. ಶ್ರೀ ಕೃಷ್ಣ ಮಠದ ಭಕ್ತರು, ಪುತ್ತಿಗೆ ಮಠದ ದಿವಾನರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಪುತ್ತಿಗೆ ಹಿರಿಯ ಶ್ರೀಪಾದರು ಸ್ವಾಂತಂತ್ರ್ಯ ದಿನದ ಬಗ್ಗೆ ಶುಭಾಶೀರ್ವಾದ […]

ಉಡುಪಿ: ದೇವರ ಹೆಸರಲ್ಲಿ‌ ಶಾಸಕ ಸುನಿಲ್ ಕುಮಾರ್ ರಾಜಕೀಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ.

ಉಡುಪಿ: ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರು ದೇವರ ಹೆಸರಿನಲ್ಲಿ ರಾಜಕೀಯ ಮಾಡಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ‌ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿದ್ದಾರೆ.‌ ದೇವರ- ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದವರು, ಈಗ ಭಗವಂತನಿಗೆ ಮೋಸ ಮಾಡಿದ್ದಾರೆ. ಮೂರ್ತಿ ಕಂಚಿನದ್ದೋ […]

ಬ್ರಹ್ಮಾವರ: ಎಸ್‌.ಎಮ್‌.ಎಸ್‌. ಪದವಿ ಪೂರ್ವ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ.

ಬ್ರಹ್ಮಾವರ: ಎಸ್‌.ಎಮ್‌.ಎಸ್‌. ಪದವಿ ಪೂವ೯ ಕಾಲೇಜು ಬ್ರಹ್ಮಾವರದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಣೆ ಬಹಳ ವಿಜ್ರಂಭಣೆಯಿಂದ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಲಯನ್‌ ಐವನ್‌ ದೊನಾತ್‌ ಸುವಾರಿಸ್ ರವರು ಸರ್ವರನ್ನೂ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ನೀಡಿದರು. ಈ ಸಂದಭ೯ದಲ್ಲಿ ಗಡಿ ರಕ್ಷಣಾ ದಳದಲ್ಲಿ(BSF ) ದೇಶದ ವಿವಿಧ ಗಡಿ ಪ್ರದೇಶಗಳ್ಲಿ 22 ವಷ೯ಗಳ ಸೇವೆಯನ್ನು ನೀಡಿ ನಿವೃತ್ತಸೈನಿಕರಾದ ಹವಲ್ದಾರ್‌ ಶ್ರೀ ಜಯರಾಮ ನಾಯ್ಕರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ […]

ಹೆಬ್ರಿ: ಸ್ವಾತಂತ್ರ್ಯವನ್ನು ಉಳಿಸುವ, ಮುಂದಿನ ಪೀಳಿಗೆಗೆ ತಲುಪಿಸುವ, ಗುರುತರವಾದ ಜವಾಬ್ದಾರಿ ನಮ್ಮದು: ಎಚ್. ನಾಗರಾಜ್ ಶೆಟ್ಟಿ

ಹೆಬ್ರಿ: ನಾವು ಸ್ವಾತಂತ್ರ್ಯ ಪಡೆಯಲು ನಮ್ಮ ಹಿರಿಯರು ಮಾಡಿದಂತಹ ತ್ಯಾಗ, ಬಲಿದಾನಗಳನ್ನು ಇಂದಿನ ಯುವ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸುವ, ಮುಂದಿನ ಪೀಳಿಗೆಗೆ ತಲುಪಿಸುವ, ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವು ಪಡೆದ ಸ್ವಾತಂತ್ರ್ಯದ ಮೌಲ್ಯವನ್ನು ನಮ್ಮ ಬದುಕಿನಲ್ಲಿ ಅಳವಡಿಸಿ, ಸೇವಾ ಮನೋಭಾವವನ್ನು ಇಟ್ಟುಕೊಂಡು ಜೀವನ ನಡೆಸಬೇಕು. ಸಮಾಜದಲ್ಲಿ ಉತ್ತಮ ಶಿಕ್ಷಕರಾಗಿ, ವಕೀಲರಾಗಿ, ವೈದ್ಯರಾಗಿ ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ […]

ಮನದ ಬಣ್ಣವಾಗಲಿ ತಿರಂಗ: ರಶ್ಮಿತಾ ಬರೆದ ಸ್ವಾತಂತ್ರ್ಯೋತ್ಸವದ ವಿಶೇಷ ಬರಹ

-ರಶ್ಮಿತಾ ಸಂತೋಷ್ ಉಡುಪಿ: ಆಗಸ್ಟ್ 15 , ಇದು ಪ್ರತಿಯೊಬ್ಬ ಭಾರತೀಯರ ಮನಗಳಲ್ಲೂ ದೇಶಾಭಿಮಾನ ಮನೆ ಮಾಡುವಂತಹ ದಿನ. ತ್ರಿವರ್ಣ ಧ್ವಜವು ದೇಶದೆಲ್ಲೆಡೆ ತಲೆಯೆತ್ತಿ ಬಾನೆತ್ತರಕ್ಕೆ ಹಾರಡುವಂತ ಕ್ಷಣವನ್ನು ಕಣ್ತುಬಿಕೊಳ್ಳಲು ಕಾರಣ ಅದೆಷ್ಟೋ ತ್ಯಾಗ ಬಲಿದಾನ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿಂದು ತಿರಂಗಾ ಧ್ವಜದ ಕಲರವ. ಜಾತಿ , ಧರ್ಮ, ಜನಾಂಗದ ಭೇದವನ್ನು ತೊರೆದು ಎಲ್ಲರು ಒಂದಾಗುವ ದಿನ. ಗಡಿಯಲ್ಲೂ ನಮ್ಮ ವೀರ ಯೋಧರು ದೇಶದ್ವಜ ಹಾರಿಸಿ ಸಂಭ್ರಮಿಸಿ ದೇಶಭಕ್ತಿ ತೋರುವ ಕ್ಷಣ. ದೇಶದ ಪ್ರತಿಯೊಬ್ಬ ನಾಗರಿಕನ […]