ಉಡುಪಿ: ಎಂಟು ವರ್ಷದ ಮಗನ ಸಮಯ ಪ್ರಜ್ಞೆಯಿಂದ ಪವಾಡ ಸದೃಶವಾಗಿ ಬದುಕುಳಿದ ತಂದೆ
ಉಡುಪಿ: ತಂದೆಯು ಮನೆಯಲ್ಲಿ ಕುಸಿದುಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದಾಗ, ಎಂಟು ವರ್ಷದ ಮಗನ ಸಮಯ ಪ್ರಜ್ಞೆಯಿಂದಾಗಿ ತಂದೆಯು ರಕ್ಷಿಸಲ್ಪಟ್ಟ ಘಟನೆ ದೊಡ್ಡಣಗುಡ್ಡೆಯಲ್ಲಿ ನಡೆದಿದೆ.ತಂದೆ ಮತ್ತು ಪುಟ್ಟ ಮಗ ಇರ್ವರು ವಿದ್ಯುತ್ ಸಂಪರ್ಕವಿಲ್ಲದ ಮನೆಯಲ್ಲಿ ವಾಸವಾಗಿದ್ದರು. ಹೀಗಿರುವಾಗ ಸೋಮವಾರ ತಡ ಸಂಜೆ ತಂದೆ ಅಜಯ್ ಕುಸಿದುಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣ ತಂದೆಯ ಅಸಹಾಯಕತೆಯನ್ನು ಗಮನಿಸಿದ ಮಗ ದಿಯಾನ್ ಕತ್ತಲಲ್ಲಿಯೇ ನೆರೆಮನೆಗೆ ಹೋಗಿ ವಿಷಯ ಮುಟ್ಟಿಸಿದ. ಕೂಡಲೇ ಮನೆಗೆ ಧಾವಿಸಿ ಬಂದು ನೆರೆಮನೆಯವರು ಸತ್ಯಸಂಗತಿ ತಿಳಿದುಕೊಂಡು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ನೆರವಿಗೆ […]
ಬಾಂಗ್ಲಾ ಅರಾಜಕತೆ, ದೌರ್ಜನ್ಯದ ಹಿಂದೆ ಅಂತಾರಾಷ್ಟ್ರೀಯ ಪಿತೂರಿ- ಪರ್ಯಾಯ ಪುತ್ತಿಗೆ ಶ್ರೀ
ಉಡುಪಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಕಳವಳಕಾರಿಯಾಗಿದ್ದು,ಇದರಲ್ಲಿ ಅಂತಾರಾಷ್ಟ್ರೀಯ ಪಿತೂರಿ ಇರುವ ಸಾಧ್ಯತೆಯಿದೆ. ಈ ಸಮಸ್ಯೆಗೆ ಮೂಲ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. ಜತೆಗೆ ಅದಕ್ಕೆ ಪರಿಹಾರ ಕಲ್ಪಿಸುವುದು ಮತ್ತು ವಿದೇಶಗಳಲ್ಲಿರುವ ಹಿಂದೂಗಳ ರಕ್ಷಣೆಗೆ ಕೇಂದ್ರ ಸರಕಾರ ದಿಟ್ಟ ನಿಲುವು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಳವಳ ವ್ಯಕ್ತಪಡಿಸಿರುವ ಶ್ರೀಪಾದರು, ಬಾಂಗ್ಲಾದ ಘಟನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ವಿಶ್ವಾದ್ಯಂತ ಹಿಂದೂಗಳ ಮೇಲೆ ಆಕ್ರಮಣಕಾರಿ ದಬ್ಬಾಳಿಕೆಗಳು […]
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆ : ಅರ್ಜಿ ಆಹ್ವಾನ
ಉಡುಪಿ: ನಿಜಶರಣ ಅಂಬಿಗರ ಚೌಡಯ್ಯಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು), ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ವಾಣಿಜ್ಯಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಬೆಸ್ತ, ಅಂಬಿಗ/ ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ,ಮೊಗವೀರ ಮತ್ತು ಇದರ ಉಪಜಾತಿಗಳ ಅರ್ಹಫಲಾನುಭವಿಗಳಿಂದ ಸೇವಾಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್, ಬೆಂಗಳೂರು […]
ವಿಶ್ವಶಾಂತಿಗೆ ಜಿನೇವಾ ಒಪ್ಪಂದದ ಕೊಡುಗೆ ಅಪಾರ:ಚಿಂತಕ ಡಾ. ಪ್ರಸಾದ್ ರಾವ್
ಉಡುಪಿ:1864 ರ ಜಿನೇವಾ ಒಪ್ಪಂದವು ವಿಶ್ವಶಾಂತಿಗೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಎಲ್ಲಾ ದೇಶಗಳ ಸೈನಿಕರಿಗೆ ಆರೈಕೆ ಹಾಗೂ ಮೃತ ಸೈನಿಕರಿಗೆ ಗೌರವಯುತವಾದ ಅಂತ್ಯ ಸಂಸ್ಕಾರಕ್ಕೆ ದೇಶಗಳು ಒಡಂಬಡಿಕೆಗೆ ಬಂದ ಮಹತ್ವದ ಒಪ್ಪಂದಗಳು ಜಿನೇವಾ ಒಪ್ಪಂದಗಳಾಗಿವೆ. ಸೆರೆಯಾದಸೈನಿಕರನ್ನು ಸಂಬಂಧಿಸಿದ ದೇಶಗಳಿಗೆ ಒಪ್ಪಿಸಲು ಈ ಒಪ್ಪಂದವು ಕಾರಣವಾಗಿದೆ. ರೆಡ್ ಕ್ರಾಸ್‌ನ ಉದಯಕ್ಕೆ ಈ ಒಪ್ಪಂದವು ಮೂಲ ಕಾರಣವಾಗಿದೆ ಎಂದು ಚಿಂತಕ ಮತ್ತು ರಂಗತಜ್ಞ ಡಾ. ಪ್ರಸಾದ್ ರಾವ್ಹೇಳಿದರು. ಅವರು ಸೋಮವಾರ ನಗರದ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ವಿಶ್ವಶಾಂತಿಗಾಗಿ ಜಿನೇವಾ […]
ಗ್ರಂಥ ಪಾಲಕರ ದಿನಾಚರಣೆಯ ಪ್ರಯುಕ್ತ ಪುಸ್ತಕ ಪ್ರದರ್ಶನ ಹಾಗೂ ಬಹುಮಾನ ವಿತರಣೆ
ಉಡುಪಿ: ಗ್ರಂಥಪಾಲಕರ ದಿನಾಚರಣೆ-2024ರ ಅಂಗವಾಗಿ ನಗರದ ವಿದ್ಯಾ ವಾಚಸ್ಪತಿ ಡಾ.ಬನ್ನಂಜೆಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರಗ್ರಂಥಾಲಯದಲ್ಲಿ ಸೋಮವಾರ ನಡೆದ ಪುಸ್ತಕ ಪ್ರದರ್ಶನ ಹಾಗೂ ವಿವಿಧ ಸ್ಫರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಸಾಹಿತಿ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಡಾ.ನಿಕೇತನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡುತ್ತ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪುಸಕ್ತ ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳವುದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಪುಸಕ್ತಗಳು ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಮೂಲಕ ಉತ್ತಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ […]