ಬೈಂದೂರು ತಾಲೂಕಿನ ಕೆಡಿಪಿ ಸಭೆಯಲ್ಲಿ ಭಾರೀ ಕೋಲಾಹಲ

ಉಡುಪಿ: ಶಾಸಕರು ತಮ್ಮ ಪಕ್ಷದ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿರುವುದು ಸಮಂಜಸವಲ್ಲ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರು ಪ್ರಸ್ತಾಪಿಸಿದ ವಿಷಯ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ರಣರಂಗಕ್ಕೆ ವೇದಿಕೆಯಾಯಿತು. ನೂತನ ನಾಮನಿರ್ದೇಶಿತ ಕೆ.ಡಿ.ಪಿ ಸದಸ್ಯರಾದ ಜಗದೀಶ ದೇವಾಡಿಗ, ಶೇಖರ ಪೂಜಾರಿ ಉಪ್ಪುಂದ ಹಾಗೂ ನರಸಿಂಹ ಹಳಗೇರಿ ಅವರು ಮಾತನಾಡಿ, ಬೈಂದೂರು […]

ಉಡುಪಿ: ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ

ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅತ್ಯುನ್ನತ ಸೇವೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆಸಲ್ಲಿಸುತ್ತಿರುವ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ. ಇವರು 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು, 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಪಣಂಬೂರು, ಪುತ್ತೂರು ನಗರ, ಉರ್ವ, ಉಡುಪಿ ನಗರ, ಕುಂದಾಪುರ, ಉಡುಪಿ ಟ್ರಾಫಿಕ್, ಉಡುಪಿ ಮಹಿಳಾ ಠಾಣೆ ಮತ್ತು ಹಿರಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. […]

ಉಡುಪಿ: ಅನಾಥ ಶವದ ಅಂತ್ಯಸಂಸ್ಕಾರ ನಡೆಸಿದ ಮಹಿಳೆಯರು

ಉಡುಪಿ: ಸಾಮಾನ್ಯವಾಗಿ ಅಂತ್ಯಸಂಸ್ಕಾರದಂತಹ ಕ್ರಿಯೆಗಳನ್ನು ಗಂಡಸರೇ ನಡೆಸುವುದು ವಾಡಿಕೆ.ಆದರೆ ಉಡುಪಿಯಲ್ಲಿ ಮಹಿಳೆಯರು ಸೇರಿ ಅಂತ್ಯಸಂಸ್ಕಾರ ನಡೆಸಿ ಗಮನ ಸೆಳೆದಿದ್ದಾರೆ. ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಇಪ್ಪತೈದು ದಿನಗಳಿಂದ ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವನ್ನು ಮಹಿಳೆಯರೇ ಮುಂದೆ ನಿಂತು ನಡೆಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಈ ಮಾನವೀಯ ಕಾರ್ಯದ ನೇತೃತ್ವ ವಹಿಸಿದ್ದರು.ಶವ ದಫನ ಪ್ರಕ್ರಿಯೆ ನಡೆಸುವಾಗ ಜ್ಯೋತಿ, ದೇವಕಿ ಬಾರ್ಕೂರು, ಮಮತಾ ಲಕ್ಷ್ಮೀನಗರ, ಅಶ್ವಿನಿ ಲಕ್ಷ್ಮೀನಗರ ಭಾಗಿಯಾಗಿ ಗಮನ ಸೆಳೆದರು.ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಈ ಅಂತ್ಯ ಸಂಸ್ಕಾರ […]

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ನೇರಸಾಲ ಯೋಜನೆ (ಹೊಸದು), ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ನವೀಕರಣ), ಗಂಗಾಕಲ್ಯಾಣ ಯೋಜನೆ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ ಮತ್ತು ವಿದೇಶಿ ವ್ಯಾಸಾಂಗ ಯೋಜನೆಗೆ ಅರ್ಹ ಫಲಾನುಭವಿಗಳು ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜಿ ಜನಸ್ನೇಹಿ ಕೇಂದ್ರ ಮತ್ತು […]

ನಾಳೆ ಮಲ್ಪೆ ಫಿಶರೀಶ್ ಹೈಸ್ಕೂಲ್ ನಲ್ಲಿ “ಕತ್ತಲ ಚಿಗುರು” ಭಾಗ- 2″ ಕಿರುಚಿತ್ರದ ಪ್ರೀಮಿಯರ್ ಶೋ

ಉಡುಪಿ: ಶಾಲಾ ವಿದ್ಯಾರ್ಥಿಗಳ ಕಥಾಹಂದರ ಹೊಂದಿರುವ ದಿನೇಶ್ ಕೊಡವೂರು ನಿರ್ದೇಶನದಲ್ಲಿ ಮೂಡಿಬಂದಿರುವ “ಕತ್ತಲ ಚಿಗುರು ಭಾಗ 2” ಕಿರುಚಿತ್ರದ ಪ್ರೀಮಿಯರ್ ಶೋ ಕಾರ್ಯಕ್ರಮ ನಾಳೆ (ಆ.15) ಮಧ್ಯಾಹ್ನ 2.30ಕ್ಕೆ ಮಲ್ಪೆ ಫಿಶರೀಶ್ ಹೈಸ್ಕೂಲ್ ಸಭಾಭವನದಲ್ಲಿ ನಡೆಯಲಿದೆ ಎಂದು ಚಿತ್ರ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.