ವಿದ್ವತ್ ಪಿಯು ಕಾಲೇಜಿನಲ್ಲಿ ಸಿಎ ಓರಿಯೆಂಟೇಶನ್ ಕಾರ್ಯಕ್ರಮ.
ಬೆಳ್ತಂಗಡಿ: ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿರುವ ಉದ್ಯೋಗವಕಾಶ ಮತ್ತು ಸಿಎ ಪೌಂಡೇಶನ್ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡುವ ಮಹತ್ವದ ಓರಿಯೆಂಟೇಶನ್ ಕಾರ್ಯಕ್ರಮವು ವಿದ್ವತ್ ಪಿಯು ಕಾಲೇಜಿನಲ್ಲಿ ಆಗಸ್ಟ್ 10 ರಂದು ನಡೆಯಿತು. ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಈ ಮಂಡಗಳಲೆಯವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿರುವ ವಿಫುಲವಾದ ಉದ್ಯೋಗವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು. ವಿದ್ವತ್ ಪಿಯು ಕಾಲೇಜಿನ ಆಡಳಿತ ಅಧಿಕಾರಿಗಳಾದ ಶ್ರೀ ಚಂದ್ರಶೇಖರವರು ವಿದ್ಯಾರ್ಥಿಗಳು […]
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಅತೀವ ನೋವಿನ ಸಂಗತಿ- ಪೇಜಾವರ ಸ್ವಾಮೀಜಿ ಕಳವಳ
ಉಡುಪಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ತುಂಬ ಖೇದವಾಗಿದೆ. ಇಡೀ ಹಿಂದೂ ಸಮಾಜ ಜಾಗೃತವಾಗಬೇಕು ಮತ್ತು ವಿಶ್ವಶಾಂತಿಗಾಗಿ ದೇವರಿಗೆ ಮೊರೆಯಿಡುವುದಷ್ಟೆ ನಮ್ಮ ಮುಂದಿವರು ಆಯ್ಕೆ ಎಂದು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ವಿಡಿಯೋ ಮೂಲಕ ಕಳವಳ ವ್ಯಕ್ತಪಡಿಸಿರುವ ಶ್ರೀಪಾದರು, ನಮ್ಮ ದೇಶದಲ್ಲಿರುವ ಎಲ್ಲ ಹಿಂದೂಗಳು ಕೂಡ ಅತ್ಯಂತ ಕಳವಳ ಪಡಬೇಕಾದ ಸ್ಥಿತಿಯಿದು. ಇವತ್ತು ಪಕ್ಕದ ದೇಶದಲ್ಲಿ ಅಷ್ಟ ಅಲ್ಲದೆ ಸ್ವದೇಶದಲ್ಲೂ ಹಿಂದೂಗಳ ಮೇಲಿನ ಆಕ್ರಮಣ ಅತಿಯಾಗಿದೆ. […]
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷರಾಗಿ ಪ್ರೊ. ಶಂಕರ್ ಆಯ್ಕೆ
ಉಡುಪಿ: ಆಗಸ್ಟ್ 10 ಶನಿವಾರ ಉಡುಪಿಯ ಹೋಟೆಲ್ ಕಿದಿಯೂರು ಶೇಷಶಯನ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯ ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣಿೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್ ಪುನರ್ ಆಯ್ಕೆ ಆಗಿರುತ್ತಾರೆ. ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಸಂಧ್ಯಾ ಶೆಣೈ, ಜೀವನ್ ರಾಂ ಸುಳ್ಯ , ವಿಘ್ನೇಶ್ವರ ಅಡಿಗ, ಮನೋಹರ್ ನಾಯಕ್, ಮಧುಸೂದನ್ ಹೇರೂರು, ಸುಗುಣ ಸುವರ್ಣ, ಗೌರವ ಸಲಹೆಗಾರರಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ರವೀಂದ್ರ […]
ಮೂಡುಬಿದರೆ: ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆ; ತರಗತಿಗೆ ಅಕ್ರಮ ಪ್ರವೇಶಿಸಿ ಕೃತ್ಯ ಎಸೆಗಿದ ಆರೋಪಿ ಸೆರೆ.
ಮೂಡುಬಿದಿರೆ: ಖಾಸಗಿ ಕಾಲೇಜಿಗೆ ಯುವಕನೊಬ್ಬ ತರಗತಿಗೆ ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಆ.12 ರಂದ ನಡೆದಿದೆ. ಕೃತ್ಯ ಎಸಗಿದ ಆರೋಪಿ ಮಂಜುನಾಥ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮತ್ತು ಇರಿತಕ್ಕೊಳಗಾದ ವಿದ್ಯಾರ್ಥಿನಿ ತುಮಕೂರಿನವರಾಗಿದ್ದು, ಇಬ್ಬರೂ ಆತ್ಮೀಯರಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ವಿದ್ಯಾರ್ಥಿನಿಯು ಆರೋಪಿ ಮಂಜುನಾಥನ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಹತಾಶೆಗೊಂಡ ಆರೋಪಿಯು ವಿದ್ಯಾರ್ಥಿನಿಯನ್ನು ಹುಡುಕಿಕೊಂಡು ಸೋಮವಾರ ಕಾಲೇಜಿಗೆ ತೆರಳಿ ತರಗತಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಕತ್ತರಿಯಿಂದ ಚುಚ್ಚಿದ್ದಾನೆ […]