ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮಕ್ಕಳು ಕಲಿತು, ಅರ್ಥೈಸಿಕೊಳ್ಳಬೇಕು
ಉಡುಪಿ: ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮಕ್ಕಳು ಕಲಿತು, ಅರ್ಥೈಸಿಕೊಳ್ಳಬೇಕು. ದೇಶಿಯ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ನಡುವೆ ಇರುವ ಅಂತರವನ್ನು ತೊಡೆದು ಹಾಕಲು ತುಳು ಪರ್ಬದಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು. ಮಣಿಪಾಲ ಮಾಹೆ ವಿ.ವಿ.ಯ ವತಿಯಿಂದ ಮಣಿಪಾಲ ಡಾ. ಟಿಎಂಎ ಪೈ ಹಾಲ್ ನಲ್ಲಿ ಇಂದು ಆಯೋಜಿಸಲಾಗಿದ್ದ ‘ಮಾಹೆ-ಆಟಿದ ತುಳು ಪರ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಭಾಷೆಗಳ ನಡುವಿನ ಸಾಂಸ್ಕೃತಿಕ ಅಂತರವನ್ನು ತೊಡೆದು ಹಾಕಲು ಸೇತುವೆ […]
ಮೂಡುಸಗ್ರಿ ಹಾನಿಯಾದ ಕಿರುಸೇತುವೆ 9.50 ಲಕ್ಷ ವೆಚ್ಚದಲ್ಲಿ ಶೀಘ್ರ ಮರು ನಿರ್ಮಾಣ: ಯಶ್ ಪಾಲ್ ಸುವರ್ಣ
ಉಡುಪಿ: ಮೂಡುಸಗ್ರಿ ವಾರ್ಡಿನ ಇಂದ್ರಾಳಿ ಸಗ್ರಿ ಶಾಲೆ ಸಂಪರ್ಕ ರಸ್ತೆಯ ಕಿರು ಸೇತುವೆ ಕುಸಿತಗೊಂಡಿರುವ ಸ್ಥಳಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿರು ಸೇತುವೆ ಹಾನಿಯಾಗಿ ವಾಹನ ಸಂಚಾರ ನಿಷೇಧವಾದ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಈಗಾಗಲೇ ನಗರಸಭೆಯ ಮೂಲಕ ಹೊಸ ಕಿರು ಸೇತುವೆಗೆ 9.50 ಲಕ್ಷ ರೂ. ಅನುದಾನ ಒದಗಿಸಿದ್ದು, ತಕ್ಷಣ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ […]
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ‘ಆಟಿದ ಕೂಟ’ ಆಯೋಜನೆ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಭವನ ಸದಾ ರಾಜಕೀಯ ಚಟುವಟಿಕೆಗಳಿಂದ ಕೂಡಿರುತ್ತದೆ. ಆದರೆ ಇಂದು ಅಲ್ಲಿನ ದೃಶ್ಯ ಭಿನ್ನವಾಗಿತ್ತು.ಮಹಿಳಾ ಕಾಂಗ್ರೆಸ್ ವತಿಯಿಂದ ‘ಆಟಿದ ಕೂಟ’ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕರಾವಳಿಯ ಆಟಿ ತಿಂಗಳ ಆಟ, ಹಾಡು, ನೃತ್ಯದ ವೈವಿಧ್ಯತೆ ಮತ್ತು ಅಡುಗೆ ರುಚಿಯನ್ನು ಈ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಕುಣಿದು ಕುಪ್ಪಳಿಸಿದರು. ಹಾಡು ಹೇಳಿ ಖುಷಿಪಟ್ಟರು. ಹಾಸ್ಯ ಚಟಾಕಿ ಹಾರಿಸಿದರು. ಕೊನೆಯಲ್ಲಿ ಬಗೆಬಗೆಯ ಆಟಿ ತಿಂಗಳ ಭಕ್ಷ್ಯ ಭೋಜನಗಳನ್ನು ಸವಿದರು. […]
ಉಡುಪಿ: ಕಾದು ನಿಂತು ಶೋರೂಂ ಮ್ಯಾನೇಜರ್ ಗೆ ಚೂರಿ ಇರಿದ ಸೆಕ್ಯೂರಿಟಿ ಗಾರ್ಡ್: ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಉಡುಪಿ: ಉಡುಪಿಯ ಶೋರೂಂ ಒಂದರ ಮ್ಯಾನೇಜರ್‌ಗೆ ಅದೇ ಶೋರೂಂನ ಸೆಕ್ಯೂರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಕಾದು ನಿಂತು ಚೂರಿ ಹಾಕಿ, ಬಳಿಕ ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನಿಸಿದ್ದು, ಈ ಭಯಾನಕ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಶೋರೂಂನ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ (36) ಇರಿತಕ್ಕೊಳಗಾದವರು. ಅಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಪ್ರಸಾದ್ ಚೂರಿಯಿಂದ ಇರಿದ ಆರೋಪಿ. ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್ ಗೆ ವಾರ್ನಿಂಗ್ ನೀಡಲಾಗಿತ್ತು. ಕೆಲಸದಿಂದ ತೆಗೆಯದಂತೆ ರೋನ್ಸನ್ […]
ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ
ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ, ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ https://shp.karnataka.gov.in/bcwd ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 04 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ https://bcwd.karnataka.gov.in/, […]