ಆಗುಂಬೆ: ಬೈಕ್-ಪಿಕಪ್ ವಾಹನ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಮೃತ್ಯು.
ಆಗುಂಬೆ: ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸರಕೋಣೆ ಬಳಿ ಪಿಕಪ್ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಆ.13ರಂದು ನಡೆದಿದೆ. ಮೃತಪಟ್ಟವರು ಅಗಸರಕೋಣೆಯ ಶರತ್ ಹಾಗೂ ಕೇರಳದ ಮೂಲದ ಸಂತೋಷ್ ಎಂದು ತಿಳಿದು ಬಂದಿದೆ. ಬಿದರಗೋಡು ಸಮೀಪದ ಅಗಸರ ಕೋಣೆಯ ಬಳಿ ಮಂಗಳವಾರ ಮಧ್ಯಾಹ್ನ ತೀರ್ಥಹಳ್ಳಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬರುತ್ತಿದ್ದ ಪಿಕಪ್ ನಡುವೆ ಅಪಘಾತ ನಡೆದಿದೆ. ಅತೀ ವೇಗದ ಚಾಲನೆಯಿಂದ ಈ ಅವಘಡ ಸಂಭವಿಸಿದೆ […]
ಆದಿ ಉಡುಪಿ ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ವರ್ತಕರಿಂದ ಪ್ರತಿಭಟನೆ
ಉಡುಪಿ: ಆದಿಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ರಸ್ತೆ, ಶೌಚಾಲಯ ಸಹಿತ ವಿವಿಧ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟ ಸಮಿತಿಯ ನೇತೃತ್ವದಲ್ಲಿ ವರ್ತಕರು ಕಪ್ಪುಪಟ್ಟಿ ಪ್ರದರ್ಶಿಸಿ ಇಂದು ಪ್ರತಿಭಟನೆ ನಡೆಸಿದರು. ಎಪಿಎಂಸಿ ಮಾರುಕಟ್ಟೆಯ ಅವ್ಯವಸ್ಥೆ ಖಂಡಿಸಿ ಕಳೆದ 11 ದಿನಗಳಿಂದ ವ್ಯಾಪಾರಿಗಳು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಮೌನ ಪ್ರತಿಭಟನೆ ನಡೆಸುತ್ತಿದ್ದರು. ಯಾವುದೇ ಅಧಿಕಾರಿ ಸ್ಪಂದಿಸದ ಹಿನ್ನೆಲೆಯಲ್ಲಿ ವರ್ತಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಆ ಮಾರ್ಗದ ಮೂಲಕ ಕಚೇರಿಗೆ […]
ಉಡುಪಿ: ಭಾರತೀಯ ಅಂಚೆ ಇಲಾಖೆ; ಹರ್ ಘರ್ ತಿರಂಗಾ ಅಭಿಯಾನ.
ಉಡುಪಿ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಇಂದು ಉಡುಪಿಯ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠ್ಠಲ ಭಟ್, ವಸಂತ ಹಾಗೂ ಉಪ ಅಂಚೆ-ಪಾಲಕಿ ಪೂರ್ಣಿಮಾ ಜನಾರ್ದನ್, ಅಂಚೆ ಸಿಬ್ಬಂದಿ ಪ್ರಜ್ವಲ್ ಉಡುಪಿ ವಿಧಾನಸಭಾ ಶಾಸಕ ಯಶ್ ಪಾಲ್ ಸುವರ್ಣರನ್ನು ಭೇಟಿಯಾಗಿ ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ತಿರಂಗಾ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿದರು.
ಉಡುಪಿ: ನಗರಸಭೆ ವ್ಯಾಪ್ತಿ ಹಾಗೂ ಗ್ರಾಮಾಂತರ ಪ್ರದೇಶಗಳ ರಸ್ತೆ ದುರಸ್ತಿಗೆ ಕಾಂಗ್ರೆಸ್‌ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಉಡುಪಿ, ಆ.13: ಉಡುಪಿ ನಗರಸಭೆ ವ್ಯಾಪ್ತಿಯ ಹಾಗೂ ಗ್ರಾಮಾಂತರ ಪ್ರದೇಶಗಳ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ನಗರದ ಸುತ್ತಮುತ್ತಲಿನ ಹಾಗೂ ರಾಜ್ಯದ ಪ್ರಮುಖ ಮೀನು ಗಾರಿಕಾ ಬಂದರು ಮತ್ತು ಪ್ರವಾಸಿ ತಾಣ ಮಲ್ಪೆಯ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಅಲ್ಲದೇ ನಗರ, ಗ್ರಾಮಾಂತರ ಭಾಗಗಳ ಹೆದ್ದಾರಿ ಸ್ಥಿತಿ ಅಯೋಮಯವಾಗಿದೆ ಎಂದು ಮನವಿ ಯಲ್ಲಿ ದೂರಲಾಗಿದೆ. […]
ಉಡುಪಿ ಸಂತೆಕಟ್ಟೆಯಲ್ಲಿ ಪಿಕಪ್ ಹಾಗೂ ಆಟೋ ಮಧ್ಯೆ ಭೀಕರ ಅಪಘಾತ
ಉಡುಪಿ: ಗ್ಯಾಸ್ ಸಿಲಿಂಡರ್ ತುಂಬಿದ್ದ ಮಹೀಂದ್ರಾ ಪಿಕಪ್ ಹಾಗೂ ಆಟೋರಿಕ್ಷಾ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಸಂತೆಕಟ್ಟೆ ಬಳಿಯ ಆಶೀರ್ವಾದ ಜಂಕ್ಷನ್ ಬಳಿ ಇಂದು ನಡೆದಿದೆ. ಘಟನೆ ನಡೆದು ಸಾಕಷ್ಟು ಹೊತ್ತಾದರೂ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಂದಿಲ್ಲ. ಅದೇ ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಮಲ್ಪೆಯ ಬ್ರದರ್ಸ್ ಟೂರಿಸ್ಟ್ ಬಸ್ ಚಾಲಕ ಬುರ್ಹಾನ್ ಮಲ್ಪೆ ಹಾಗೂ ನವೀನ್ ಹನುಮಾನ್ ನಗರ ಅವರು ಬಸ್ ನ್ನು […]