ಆ.15ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ನ ಆನ್ ಲೈನ್ ವ್ಯಾಸಂಗ- ಸಮಾಲೋಚನೆ ಕೋರ್ಸ್ ಗಳ ಉದ್ಘಾಟನೆ

ಐಐಟಿ ಮದ್ರಾಸ್ ಪ್ರವರ್ತಕ್ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ 20 ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತರಗತಿಗಳನ್ನ ನಡೆಸಿಕೊಡುವ ಯೋಜನೆ ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ. ಈ ತರಗತಿಗಳು ಆನ್ಲೈನ್ ಲೈವ್ ಮೂಲಕ ನಡೆಯಲಿದ್ದು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಐಐಟಿ ಯಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಿದ್ದೇನೆ ಎಂದು ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಹೇಳಿದರು. ಉಡುಪಿಯ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ […]

ರೋಟರಾಕ್ಟ್ ಕ್ಲಬ್ ಬ್ರಹ್ಮಾವರದಲ್ಲಿ ‘ಚಿಲುಮೆ-2024

ಬ್ರಹ್ಮಾವರ :ರೋಟರಾಕ್ಟ್ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಇಂಟರಾಕ್ಟ್ ಕ್ಲಬ್‌ಗಳಿಗೆ ಕಾರ್ಯಕ್ರಮ ವೈವಿಧ್ಯ ಸ್ಪರ್ಧೆ ‘ಚಿಲುಮೆ-2024’ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಯೋಜಿತ ರೋಟರಿ ಗವರ್ನರ್ ಬಿ.ಎಂ.ಭಟ್ ಉದ್ಘಾಟಿಸಿ ಮಾತನಾಡಿ ಯುವ ಜನತೆಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಈ ಕಾರ್ಯಕ್ರಮ ಉತ್ತಮ ಅವಕಾಶ ಕಲ್ಪಿಸಿದೆ ಎಂದರು. ಅತಿಥಿಗಳಾಗಿ ಕಾರ್ಯಕ್ರಮ ಪ್ರಾಯೋಜಕರಾದ ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಶ್ರೀಧರ್ ವಿ. ಶೆಟ್ಟಿ, ವಲಯಸೇನಾನಿ ದಿನೇಶ್‌ ನಾಯಿರಿ, ರೋಟರಿ ಯುವ ಸೇವಾ […]

ಉಡುಪಿ: ಕಸಾಪ ಉಡುಪಿ ತಾಲೂಕು ಘಟಕದಿಂದ ಗ್ರಂಥಪಾಲಕರ ದಿನಾಚರಣೆ

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದಿಂದ ಗ್ರಂಥ ಪಾಲಕರ ದಿನಾಚರಣೆಯ ಪ್ರಯುಕ್ತ ಸೋಮವಾರ ಉಡುಪಿಯ ಅಜ್ಜರಕಾಡಿನ ಕೇಂದ್ರ ಗ್ರಂಥಾಲಯದ ಕಚೇರಿಯಲ್ಲಿ ನಗರ ಮುಖ್ಯ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ. ಹಾಗೂಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಎಂ. ಇವರನ್ನು ಕ ಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಅವರು ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಪು ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಜಿಲ್ಲಾ ಕ […]

ಮೂಡುಬೆಳ್ಳೆ: ಸಮೃದ್ಧಿ ಡಿಜಿಟಲ್ ಕ್ಲಿನಿಕ್ ಲ್ಯಾಬರೋಟರಿಯಲ್ಲಿ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳ

ಮೂಡುಬೆಳ್ಳೆ: ಸಮೃದ್ಧಿ ಡಿಜಿಟಲ್ ಕ್ಲಿನಿಕ್ ಲ್ಯಾಬರೋಟರಿ ಶುಭ ಆರಂಭಗೊಂಡು 200 ದಿನಗಳ ಸಂಭ್ರಮದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಈ ಮೂರು ದಿನಗಳ ಬೃಹತ್ ಆರೋಗ್ಯ ಪ್ಯಾಕೇಜ್ ಮೇಳವು ಇದೇ ಬರುವ ಆಗಸ್ಟ್ 14ರಿಂದ ಆಗಸ್ಟ್ 16 ರ ವರೆಗೆ ನಡೆಯಲಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬಹುದು. 4000 ಮೌಲ್ಯದ ಕಂಪ್ಲೀಟ್ ಹೆಲ್ತ್ ಪ್ಯಾಕೇಜ್ ನ್ನು ಸಾರ್ವಜನಿಕರು ಈ 3 ದಿನಗಳಲ್ಲಿ ಕೇವಲ 1750 ಪಾವತಿಸಿ ಪಡೆಯಬಹುದು. 10 […]

ತ್ರಿಶಾ ಕ್ಲಾಸಸ್‌ ಮಂಗಳೂರು : ಸಿಎ ಇಂಟರ್ಮೀಡಿಯಟ್ ಮಾಹಿತಿ ಕಾರ್ಯಾಗಾರ

ಮಂಗಳೂರು: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಇಂಟರ್ಮೀಡಿಯಟ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವು ಆಗಸ್ಟ್11 ರಂದು ಮಂಗಳೂರಿನ ತ್ರಿಶಾ ಕಾಲೇಜ್ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್ಮೆಂಟ್ ಅಳಕೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ. ನಾರಾಯಣ್ ಕಾಯರ್ ಕಟ್ಟೆ ಅವರು ವಿದ್ಯಾರ್ಥಿಗಳು ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ, ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಳ್ಳುವುದು ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮುಖ್ಯ ಎಂದರು ಹಾಗೂ ತ್ರಿಶಾ ಸಂಸ್ಥೆಯು 26 ವರ್ಷಗಳನ್ನು ಪೂರೈಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು […]