ಕುಂದಾಪುರ: ಸ್ಕೂಟರ್‌ನಲ್ಲಿ ದನದ ಮಾಂಸ ಸಾಗಾಟ; ಆರೋಪಿ ಅರೆಸ್ಟ್.
ಕುಂದಾಪುರ: ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಘಟನೆಯು ಗುಜ್ಜಾಡಿ ಗ್ರಾಮದ ನಾಯಕವಾಡಿ ಜಟ್ಟಪ್ಪ ಸರ್ಕಲ್ ಬಳಿ ಆ. 9 ರಂದು ನಡೆದಿದೆ. ಗಂಗೊಳ್ಳಿ ಠಾಣಾ ಎಸ್‌ಐ ಹರೀಶ್ ಆರ್. ಅವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ದನದ ಮಾಂಸ ಪತ್ತೆಯಾಗಿದೆ. ಗಂಗೊಳ್ಳಿಯ ಅಶ್ಫಾಕ್ ಸುಬೇದಾರ್ (52) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಎಲ್ಲಿಂದಲೋ ದನವನ್ನು ಕಳವು ಮಾಡಿ, ಇತರರೊಂದಿಗೆ ವಧೆ ಮಾಡಿ, ಮಾಂಸ ಮಾಡಿ, ಅದನ್ನು […]
ಕಂಬಳ ಅಭಿಮಾನಿಗಳಿಗೆ ಗುಡ್ ನ್ಯೂಸ್: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ.
ಮೂಡುಬಿದಿರೆ: 2024-25ರ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟವಾಗಿದ್ದು, ಕಂಬಳ ಸೀಸನ್ ಅಕ್ಟೋಬರ್ 26 ರಿಂದ 2025ರ ಏಪ್ರಿಲ್ 19ರವರೆಗೆ ನಡೆಯಲಿದೆ. ಹೋದ ಸಲ ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಮಲೆನಾಡು ಭಾಗದ ಶಿವಮೊಗ್ಗದಲ್ಲಿ ಕಂಬಳ ನಡೆಸಲು ತೀರ್ಮಾನಿಸಲಾಗಿದೆ. ಈ ಸೀಸನ್ ನ ಮೊದಲ ಕಂಬಳ ಬೆಂಗಳೂರಿನಲ್ಲಿ ನಡೆದರೆ, ಅಂತಿಮ ಕಂಬಳವು ಶಿವಮೊಗ್ಗದಲ್ಲಿ ನಡೆಯಲಿದೆ. ಮೂಡುಬಿದಿರೆಯಲ್ಲಿ ಶನಿವಾರ (ಆ.10) ನಡೆದ ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. 2024-25ರ […]