ಉಡುಪಿ: ಹಾಲು ಮಾರಾಟ ಅಂಗಡಿಗೆ ನುಗ್ಗಿ ಕಳ್ಳತನ.
ಉಡುಪಿ: ಉಡುಪಿ ಅಂಬಲಪಾಡಿ ಬೈಪಾಸ್ ನಲ್ಲಿರುವ ಹಾಲು ಮಾರಾಟ ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ದೋಚಿರುವ ಘಟನೆ ನಡೆದಿದೆ.ಉಡುಪಿಯ ಬೈಪಾಸ್ ರಸ್ತೆಯ ಪೃಥ್ವಿ ಸೌಧದಲ್ಲಿರುವ ಅರುಣ್ ಶೆಟ್ಟಿ ಮಾಲಕತ್ವದ ಹಾಲು ಡಿಸ್ಟ್ರಿಬ್ಯೂಟರ್ ಸೆಂಟರ್ ನ ಬೀಗ ಮುರಿದು ರಾತ್ರಿ 11.30 ಕ್ಕೆ ನುಗ್ಗಿರುವ ಕಳ್ಳನೋರ್ವ ರೂ.35 ಸಾವಿರ ಹಣವನ್ನು ಲಪಟಾಯಿಸಿದ್ದಾನೆ.ಒಂದು ಕಡೆಯ ಬೀಗ ಮುರಿದು ಕಳ್ಳತನ ನಡೆಸಿದ್ದು , ಸಿಸಿಟಿವಿಯಲ್ಲಿ ಕಳ್ಳತನದ ವಿಡಿಯೋ ರೆಕಾರ್ಡ್ ಆಗಿದೆ.ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳನ ಹುಡುಕುತ್ತಿದ್ದಾರೆ.
ಮಹಿಳೆಯರು ಸಮಾಜ ಮುಖಿಯಾಗಿ ಬೆಳೆಯಬೇಕು- ಸರಳ ಕಾಂಚನ್
ಉಡುಪಿ:ತೋನ್ಸೆ ಮಹಿಳಾ ಮಂಡಳಿ ಕೆಮ್ಮಣ್ಣು ಇವರ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀಮತಿ ಸರಳಾ ಕಾಂಚನ್ ರವರು ಚೆನ್ನೇ ಮನೆ ಆಟ ಆಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಮಹಿಳೆಯರು ಮನೆಯಿಂದ ಹೊರಬಂದು ಸಮಾಜಮುಖಿಯಾಗಿ ಬೆಳೆಯಬೇಕು, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆಯನಿತ್ತರು. ವೆಯಿಟ್ ಲಿಫ್ಟಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಪಡೆದ ಪ್ರತೀಕ್ಷಾ ಶೆಟ್ಟಿ, ಹಾಗೂ ಬಾಕ್ಸಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಪದಕವನ್ನು ಪಡೆದ ಜಾಯಿಲಿನ್ ಇವರನ್ನು ಸನ್ಮಾನಿಸಲಾಯಿತು. ಕಂಡಾಳ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಘುರಾಮ್ […]
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜ್: ಆ.15 ರಂದು “ವಿಜ್ಞಾನ – ವಿಸ್ಮಯ ಮತ್ತು ಕುತೂಹಲ” ವಿಮರ್ಶಾ ಕಾರ್ಯಗಾರ
ಬೆಳ್ತಂಗಡಿ: 78ನೇ ಸ್ವಾತಂತ್ರೊತ್ಸವದ ಪ್ರಯುಕ್ತ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜ್‌ನಲ್ಲಿ “ವಿಜ್ಞಾನ-ವಿಸ್ಮಯ ಮತ್ತು ಕುತೂಹಲ” ಎಂಬ ಶೀರ್ಷಿಕೆಯಡಿಯಲ್ಲಿ ಇದೇ ಬರುವ ಆಗಸ್ಟ್ 15 ರ ಬೆಳಗ್ಗೆ 11.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ವಿನೂತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಜಗತ್ತಿನ ವಿಸ್ಮಯಕ್ಕೆ ಒಳಗಣ್ಣು ತೆರೆದಿಟ್ಟು, ಅನುಭವಿಸಿ, ಅರ್ಥೈಸಿ, ವಿವೇಚನೆಗೊಳಪಡಿಸುವ ವಿಶೇಷ ಸಂವಾದ ಇದಾಗಿದ್ದು, ಯುವ ಮನಸ್ಸುಗಳ ಮೇಲೆ ವೈಜ್ಞಾನಿಕ ವಿಶ್ಲೇಷಣೆಯ ಪ್ರಭಾವ ಬೀರಿ ಊಹೆಗೆ ನಿಲುಕದ ಪ್ರಕೃತಿಯ ವಿಸ್ಮಯವನ್ನು ಅರ್ಥೈಸಿಕೊಳ್ಳುವ ಒಂದು ವಿಶೇಷ ಪ್ರಯತ್ನ ಇದಾಗಿದೆ. ಸಾಂಪ್ರದಾಯಿಕ ಪಾಠ-ಪ್ರವಚನ ಮತ್ತು ಪರೀಕ್ಷಾ […]
ಹೆಬ್ರಿ: ಈಜಲು ಹೋದ ಬಾಲಕ ಅಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಮೃತ್ಯು.
ಹೆಬ್ರಿ: ಈಜಲು ಹೋದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಆ.9ರಂದು ಮಧ್ಯಾಹ್ನ ವೇಳೆ ಶಿವಪುರ ಹಳೆಬೆಟ್ಟು ಎಲಗೊಳಿ ಎಂಬಲ್ಲಿ ನಡೆದಿದೆ. ಮೃತರನ್ನು ಸುವರ್ಣ ಲತಾ ಎಂಬವರ ಮಗ ಸಿದ್ವೀಕ್(16) ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿ ಜೊತೆ ತನ್ನ ಅಜ್ಜಿ ಮನೆಯಾದ ಎಲಗೊಳಿಗೆ ಆ.7ರಂದು ಬಂದಿದ್ದು ಆ.9ರಂದು ಮಧ್ಯಾಹ್ನ ವೇಳೆ ಮನೆಯ ಎದುರಿನ ಕೆರೆಯಲ್ಲಿ ಈಜಲು ಹೋಗಿದ್ದನು. ಈ ವೇಳೆ ಆತ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು ಕೂಡಲೇ ಆತನ ಮಾವ ಆತನನ್ನು ನೀರಿನಿಂದ ಮೇಲೆ ಎತ್ತಿ […]
ಹಿರಿಯಡಕ: ಬಸ್ ಟೈಮಿಂಗ್ ವಿಚಾರದಲ್ಲಿ ಹೊಡೆದಾಟ; ನಾಲ್ವರ ವಿರುದ್ಧ ಪ್ರಕರಣ ದಾಖಲು.
ಹಿರಿಯಡಕ: ಹಿರಿಯಡಕ ಜಂಕ್ಷನ್ ಬಳಿ ಬಸ್ ಟೈಮಿಂಗ್ ವಿಚಾರದಲ್ಲಿ ಗಲಭೆ ಸೃಷ್ಟಿಸಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡ ಬಗ್ಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಟೈಮಿಂಗ್ ವಿಚಾರದಲ್ಲಿ ಬಸ್ ಅನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ ಗಲಭೆ ಸೃಷ್ಟಿಸಿದ ಶಶಿಕಾಂತ್ (25) ರಾಜೇಶ್ (35) ಉಮೇಶ್ (54) ಮತ್ತು ಪ್ರಶಾಂತ್ (40) ವಿರುದ್ಧ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.