ಮಣಿಪಾಲ: ಅನುಮಾನಾಸ್ಪದ ರೀತಿಯಲ್ಲಿ ಹೊಟೇಲ್ ನೌಕರ ಮೃತ್ಯು; ಪ್ರಕರಣ ದಾಖಲು
ಮಣಿಪಾಲ, ಆ.11: ಮಣಿಪಾಲದಲ್ಲಿ ಹೊಟೇಲ್ ನೌಕರರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಆ.9ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಉಳ್ತೂರು ಗ್ರಾಮದ ಉದಯ(43) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಯುವರ್ ಚಾಯ್ಸ್ ಎಂಬ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿ ಅಸೌಖ್ಯದಿಂದ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಇವರ ಮರಣದಲ್ಲಿ ಸಂಶಯ ಇದೆ ಎಂದು ಮೃತರ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ – ಡಿಪ್ಲೊಮಾ ಇನ್ ಮಾಂಟೆಸ್ಸರಿ ಚೆಲ್ಡ್ ಎಜ್ಯುಕೇಶನ್.
ಮಣಿಪಾಲ: ಮಣಿಪಾಲದ ಶ್ರೀ ಶಾರದಾ ಟೀಚರ್ ಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಾಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್ (D.MED)) ಶಿಕ್ಷಕಿಯರ ತರಬೇತಿ ಪಡೆದ 2023-24 ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಮಣಿಪಾಲದ ಕ್ರಿಸ್ಟಲ್ ಬಿಜ್ಹ್ ಹಬ್‍ನಲ್ಲಿ ಆ.10 ರಂದು ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಡೂರು ಗ್ರಾವಿಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿರುವ, ಹೆಸರಾಂತ ಹಾಸ್ಯಕಲಾವಿದರಾದ ಶ್ರೀ […]
ಉಡುಪಿ: ಶ್ರೀ ಭಗವತೀ ನಾಸಿಕ್ ಕಲಾತಂಡದ ಅಷ್ಟಮಿ ವೇಷದ ಪೋಸ್ಟರ್ ಬಿಡುಗಡೆ
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಚಿಟ್ಪಾಡಿ ಕಸ್ತೂರ್ಬಾನಗರದ ಶ್ರೀ ಭಗವತೀ ನಾಸಿಕ್ ಕಲಾತಂಡದ ಕಲಾವಿದರು ಮಗುವಿನ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ವಿಶೇಷ ವೇಷದೊಂದಿಗೆ ಜನರನ್ನು ರಂಜಿಸಲಿದ್ದಾರೆ.ಈ ಕಾರ್ಯಕ್ರಮದ ಪೋಸ್ಟರ್‌ನ್ನು ಕಸ್ತೂರ್ಬಾನಗರದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಅಣ್ಣಯ್ಯ ಸೇರಿಗಾರ್, ಸಂಸ್ಥೆಯ ಗೌರವಾಧ್ಯಕ್ಷ ಶ್ರೀಧರ ದೇವಾಡಿಗ, ಶಶಿರಾಜ್ ಕುಂದರ್, ಚರಣ್ ಬಂಗೇರ, ಕಲಾ ತಂಡದ ಪ್ರಣಮ್, ಸುಧೀರ್, ಉಮೇಶ್ ಉಪಸ್ಥಿತರಿದ್ದರು. ವೇಷಧರಿಸಿ ಸಂಗ್ರಹಿಸಿದ ಮೊತ್ತವನ್ನು ರಕ್ತದ ಕಾಯಿಲೆಯಿಂದ […]
ಬೇಕಾಗಿದ್ದಾರೆ
ಉಡುಪಿ:ಮಣಿಪಾಲ ಮತ್ತು ಮಂಗಳೂರಿನ FMCG & Fertilizer MNC ಯಲ್ಲಿ ಉದ್ಯೋಗವಕಾಶಗಳು.
ಉಡುಪಿ: ಸಮುದ್ರದಲ್ಲಿ ಪತ್ತೆಯಾದ ಅಪರಿಚಿತ ಶವದ ಅಂತ್ಯಸಂಸ್ಕಾರ
ಉಡುಪಿ: ಸಮುದ್ರದಲ್ಲಿ ಪತ್ತೆಯಾದ ಅಪರಿಚಿತ ಶವದ ಅಂತ್ಯಸಂಸ್ಕಾರ ನಡೆಸಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಮತ್ತೊಮ್ಮೆ ಸಾರ್ಥಕತೆ ಮೆರೆದಿದ್ದಾರೆ. ಮಣಿಪಾಲದ ಶೀತಲೀಕೃತ ಶವರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿದ್ದ ಅಪರಿಚಿತ ಶವದ ಅಂತ್ಯಸಂಸ್ಕಾರವು, ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ನಡೆಸಲಾಗಿದೆ. ಬೀಜಾಡಿ ಸಮುದ್ರ ಕಿನಾರೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ, ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವದ ವಾರಸುದಾರರು ಪತ್ತೆಯಾಗದೆ ಇರುವುದರಿಂದ ಕಾನೂನಿನಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಕುಂದಾಪುರ ಪೋಲಿಸ್ ಠಾಣೆಯ ಹೆಡ್ […]