ಉಡುಪಿ: ಅಸ್ವಸ್ಥಗೊಂಡ ಯುವತಿಯನ್ನು ಬಸ್ ನಲ್ಲೇ ಕರೆದೊಯ್ದು ಆಸ್ಪತ್ರೆಗೆ ಸೇರಿಸಿದ ಚಾಲಕ- ನಿರ್ವಾಹಕ
ಉಡುಪಿ: ಖಾಸಗಿ ಬಸ್ಸೊಂದರಲ್ಲಿ ಅಸ್ವಸ್ಥಗೊಂಡ ಯುವತಿಯೊಬ್ಬಳನ್ನು ಬಸ್ ಸಿಬ್ಬಂದಿ ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದೊಯ್ದು ಸಕಾಲಿಕವಾಗಿ ಚಿಕಿತ್ಸೆಗೆ ನೆರವಾದ ಘಟನೆ ಉಡುಪಿಯಲ್ಲಿ ನಡೆದಿದೆ. ಶಿರ್ವ – ಉಡುಪಿ ನಡುವೆ ಸಂಚರಿಸುವ ನವೀನ್ ಎಂಬ ಖಾಸಗಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಶಿರ್ವದಿಂದ ಉಡುಪಿಗೆ ಬರುತ್ತಿದ್ದ ಬಸ್ ಉಡುಪಿಯ ಹಳೆ ತಾಲೂಕು ಕಚೇರಿ ಬಳಿಕ ತಲುಪಿದಾಗ ಪ್ರಯಾಣಿಕ ಯುವತಿಯೊಬ್ಬಳು ಅಸ್ವಸ್ಥಗೊಂಡಿದ್ದಾಳೆ. ಬಸ್ಸಿನಲ್ಲೇ ವಾಂತಿ ಮಾಡಿದ ಯುವತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ವಿಷಯ ಅರಿವಿಗೆ ಬರುತ್ತಲೇ ಕಾರ್ಯಪ್ರವೃತ್ತರಾದ ಬಸ್ […]
ಕೃಷಿ ಪ್ರಶಸ್ತಿ: ಅರ್ಜಿ ಆಹ್ವಾನ
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ ಯೋಜನೆಯನ್ನು ಆರಂಭಿಸಲಾಗಿದ್ದು, ಮುಂಗಾರು ಭತ್ತದ ಬೆಳೆಗೆ ರೈತರು ಹಾಗೂ ರೈತ ಮಹಿಳೆಯರಿಂದ ಬೆಳೆ ಸ್ಪರ್ಧೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್‌ನಲ್ಲಿ ನೂತನವಾಗಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದ್ದು, ಸಿಟಿಝನ್ ಲಾಗಿನ್ ಅಥವಾ ಆರ್.ಎಸ್.ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸೇವಾ […]
ಶುಶ್ರೂಷಕರ ಹುದ್ದೆ: ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿಯಿರುವ ಶುಶ್ರೂಷಕರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 12 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ Udupi.nic.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ. ಸಂಘದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿವೃಷ್ಠಿಯಿಂದ ಹಾನಿಗೊಳಗಾದ ಭತ್ತದ ತಾಕುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಭೇಟಿ
ಉಡುಪಿ: ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಉಡುಪಿ ತಾಲೂಕಿನಾದ್ಯಂತ ಕೃತಕ ನೆರೆಯಿಂದ ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಹಾನಿಗೊಳಗಾಗಿದ್ದು, ನೆರೆಪೀಡಿತ ಪ್ರದೇಶಗಳಿಗೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈವರೆಗೆ ಅಂದಾಜು 14000.00 ಹೆ. ಪ್ರದೇಶದಲ್ಲಿ ನಾಟಿ ಆಗಿದ್ದು, ಉಡುಪಿ ಹೋಬಳಿಯಲ್ಲಿ 10.80 ಹೆ., ಕೋಟ ಹೋಬಳಿಯಲ್ಲಿ 35.00 ಹೆ., ಬ್ರಹ್ಮಾವರ ಹೋಬಳಿಯಲ್ಲಿ 3.00 ಹೆ. ಹಾಗೂ ಕಾಪು ಹೋಬಳಿಯಲ್ಲಿ 14.00 ಹೆ., ಸೇರಿದಂತೆ ಒಟ್ಟು ಸುಮಾರು 62.80 ಹೆ.ಗಳಷ್ಟು ಬೆಳೆ […]
ಉಡುಪಿ: ಸುಮನಸಾ ಕೊಡವೂರು ಸಂಸ್ಥೆಯ ಮಾತೆಯರಿಂದ ಆಟಿದ ಅಟ್ಟಿಲ್
ಉಡುಪಿ: ಸುಮನಸಾ ಕೊಡವೂರು ಸಂಸ್ಥೆಯ ಮಾತೆಯರಿಂದ ಆಟಿದ ಅಟ್ಟಿಲ್ಲ್ ಕಾರ್ಯಕ್ರಮ ರವಿವಾರ ಸಂಜೆ ಸುಮನಸಾ ಕಾರ್ಯಾಲಯದಲ್ಲಿ ನೆರವೇರಿತು. ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಮತ್ತು ಶಿಲ್ಪ ಚಂದ್ರಕಾಂತ್ ದಂಪತಿಗಳು ಸುರೇಖ ವಿನಯ್ ಅವರು ತಯಾರಿಸಿದ ಗೆಂಡದಡ್ಡೆಯ ಸಿಹಿಯನ್ನು ಹಂಚಿಕೊಳ್ಳುವುದರ ಮುಖೇನ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯರಾದ ಸುಮತಿಯಮ್ಮನವರು ಆಟಿಯ ವೈಶಿಷ್ಟ್ಯ, ಆಟಿ ಅಮಾವಾಸ್ಯೆಯ ಕಷಾಯದ ವಿಶೇಷತೆಯನ್ನು ಸವಿವರವಾಗಿ ತಿಳಿಸಿದರು. ಮಾತೆಯರು ಆ ಕಾಲದ ಕಷ್ಟದ ದಿನಗಳನ್ನು ಇಂದಿನ ಪೀಳಿಗೆ ತಿಳಿಸುತ್ತಾ ಮಕ್ಕಳಿಗೆ ಪೊಕ್ಕಾಟ, ಜುಬಿಲಿ, ಚನ್ನೆಮಣೆ ಆಟವನ್ನು ಹೇಳಿಕೊಟ್ಟರು. […]