ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ; ವಾಹನ ಸವಾರ ಮೃತ್ಯು.
ಮೂಡುಬಿದಿರೆ: ತಾಲೂಕಿನ ಕೋಟೆಬಾಗಿಲು ಬಳಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮರಿಯಾಡಿ ನಿವಾಸಿ ಅಹ್ಮದ್ ಬಾವ (50) ಅವರು ಮೃತಪಟ್ಟಿದ್ದಾರೆ. ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಕಾರೊಂದು ಮೂಡುಬಿದಿರೆಯಿಂದ ಮರಿಯಾಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಅಹ್ಮದ್ ಬಾವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ ವೇಳೆ ಮೃತಪಟ್ಟಿದ್ದಾರೆ.
ಉಡುಪಿ: ನಿಂತಿದ್ದ ಬಸ್ ಗೆ ಸ್ಕೂಟರ್ ಡಿಕ್ಕಿ; ಇಬ್ಬರು ಯುವಕರಿಗೆ ಗಂಭೀರ ಗಾಯ.
ಉಡುಪಿ: ನಿಂತಿದ್ದ ಬಸ್ ಗೆ ದಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಕಿನ್ನಿಮುಲ್ಕಿಯ ಮಂಜುನಾಥ್ ಪೆಟ್ರೋಲ್ ಬಂಕ್ ಬಳಿ ಇಂದು ರಾತ್ರಿ ನಡೆದಿದೆ.ಗಾಯಗೊಂಡ ಯುವಕರ ವಿಳಾಸ ತಿಳಿದುಬಂದಿಲ್ಲ. ಅತೀ ವೇಗದಲ್ಲಿ ಸುಜುಕಿ ಆಕ್ಸಿಸ್ ನಲ್ಲಿ ಬಂದ ಯುವಕರಿಬ್ಬರು ರಸ್ತೆ ಬದಿ ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆ ಬಿದ್ದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಆ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು […]
ಮಣಿಪಾಲ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ
ಉಡುಪಿ: ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಿಂದಿನಿಂದ ಬಂದ ವ್ಯಕ್ತಿಯೋರ್ವ ಸುಲಿಗೆ ಮಾಡಿಕೊಂಡು ಪರಾರಿಯಾದ ಘಟನೆ ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ನಡೆದಿದೆ.ಶಾಂತಾ ಕಾಮತ್ (84) ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ಬೆಳಿಗ್ಗೆೆ 7 ಗಂಟೆಗೆ ಕೆಲಸಕ್ಕೆೆಂದು ಹೋಗುತ್ತಿದ್ದರು. ಸಗ್ರಿನೋಳೆ ಶಾಲೆ ರಸ್ತೆೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಂಡೇಲು ಎಂಬಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕುತ್ತಿಗೆಗೆ ಕೈಹಾಕಿ ಚಿನ್ನದ ಚೈನ್ ಅನ್ನು ಕಸಿದುಕೊಂಡಿದ್ದಾನೆ. ಈ ವೇಳೆ ಅವರು ಆತನನ್ನು ಹಿಡಿಯಲು ಯತ್ನಿಸಿದರೂ ಆತ ಚೈನ್ ಸಹಿತ ಪರಾರಿಯಾಗಿದ್ದಾನೆ. […]
ಮಣಿಪಾಲ: ಆಗಸ್ಟ್ 8ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ನೇಲ್ ಆರ್ಟ್” ಬಗ್ಗೆ ಕಾರ್ಯಾಗಾರ.
ಮಣಿಪಾಲ: ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ), ಓರೇನ್ ಇಂಟರ್ನ್ಯಾಷನಲ್ ನಲ್ಲಿ ಆಗಸ್ಟ್ 8ರಂದು ಮಧ್ಯಾಹ್ನ 2:30 ರಿಂದ 3:30 ರವರೆಗೆ ನೇಲ್ ಆರ್ಟ್ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಗಾರದಲ್ಲಿ ವಿವಿಧ ಪ್ರಕಾರದ ಕಲೆಗಳಾದ ಎಂಬೊಸ್ಡ್ ಆರ್ಟ್, ಎನಿಮಲ್ ಆರ್ಟ್ ಹಾಗೂ ಡಾಟ್ ಲೈನ್ ಆರ್ಟ್ ಬಗ್ಗೆ ನೋಡಿ, ಕಲಿತು ಅಭ್ಯಾಸ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸ್ಥಳ: ಎಂಎಸ್‌ಡಿಸಿ, ಓರೇನ್ ಇಂಟರ್‌ನ್ಯಾಶನಲ್, 3ನೇ ಮಹಡಿ, ಈಶ್ವರನಗರ, ಮಣಿಪಾಲ📞8123165068📞8123163935🌐https://msdcskills.org/beauty-wellness/✉[email protected]_manipal
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟ
ಉಡುಪಿ: ನಗರಾಭಿವೃದ್ಧಿ ಇಲಾಖೆಯು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿಯನ್ನು ಇಂದು (ಸೋಮವಾರ) ಪ್ರಕಟಿಸಿದೆ. 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಉಡುಪಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಕಾಪು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಜೆ ಪರಿಶಿಷ್ಟ ಜಾತಿ, ಕಾರ್ಕಳ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ […]