ಡ್ರೀಮ್ ಹಾಲಿಡೇಸ್”: ಕೈಗೆಟುಕುವ ದರದಲ್ಲಿ ಟೂರ್ ಪ್ಯಾಕೇಜ್; EMI ಸೌಲಭ್ಯವೂ ಇರಲಿದೆ
ಉಡುಪಿ: ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲಿಗಾದ್ರೂ ಟೂರ್ ಪ್ಲ್ಯಾನ್ ಹಾಕೊಂಡಿದ್ದೀರಾ. ಅದಕ್ಕೆ ಪ್ಲ್ಯಾನಿಂಗ್ ಮಾಡ್ಕೊಳ್ಳೋದೆ ಕಷ್ಟ ಅನ್ನೋರು ನೀವಾಗಿದ್ರೆ ಇಲ್ಲಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್” ಪ್ಯಾಕೇಜ್ ಟೂರ್.ಹೌದು, ಕಡಿಮೆ ವೆಚ್ಚದಲ್ಲಿ ನೀವು ಹೆಸರಾಂತ ಪ್ರವಾಸಿ ತಾಣಗಳನ್ನು ವಿಸಿಟ್ ಮಾಡಬಹುದು. ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ “ಡ್ರೀಮ್ ಹಾಲಿಡೇಸ್”.ಚಳಿಗಾಲ ಪ್ರವಾಸ ಮಾಡಲು ಸೂಕ್ತ ಕಾಲ. ವಿಕೇಂಡ್ ನಲ್ಲಿ ಜಾಲಿ ಮಾಡಬೇಕು, ತಮ್ಮ ಸುತ್ತಲಿರುವ ಪ್ರೇಕ್ಷಣೀಯ ತಾಣಗಳನ್ನು […]
ಉಡುಪಿ: ಆಟೋ ಚಾಲಕರ ತಂಡದಿಂದ ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ
ಉಡುಪಿ: ಬಾಡಿಗೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಆಟೋ ಚಾಲಕರ ತಂಡವೊಂದು ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದಲ್ಲಿ ಇಂದು ನಡೆದಿದೆ. ಪ್ರತಾಪ್ ಚಂದ್ರ ಹಲ್ಲೆಗೊಳಗಾದ ರಿಕ್ಷಾ ಚಾಲಕ. ಉಡುಪಿ ನಗರದ ಸಿಟಿ ಬಸ್ ಸ್ಟ್ಯಾಂಡ್ ವ್ಯಾಪ್ತಿಯಲ್ಲಿ ಇವರು ರಿಕ್ಷಾ ಬಾಡಿಗೆ ಮಾಡುತ್ತಿರುವಾಗ ಆಟೋ ಚಾಲಕರ ತಂಡವು ಇವರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ತಂಡವು ನಗರ ವ್ಯಾಪ್ತಿಯಲ್ಲಿ ಎಲ್ಲಿಯೂ ಬಾಡಿಗೆ ಮಾಡಬಾರದು ಎಂದು ಪ್ರತಾಪ್ ಚಂದ್ರ ಅವರಿಗೆ ವಾರ್ನಿಂಗ್ ಮಾಡಿದೆ. […]
ಉಡುಪಿ: ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಉಡುಪಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ.ಉದಯ ಶಂಕರ್ ಅವರು, ಪಶ್ಚಿಮಘಟ್ಟದ ಉದ್ದಕ್ಕೂ ಭೂಕುಸಿತ ಆಗಿದೆ. ಚಿಕ್ಕಮಗಳೂರು, ವಯನಾಡು, ಮಡಿಕೇರಿ, ಚಿಕ್ಕಮಗಳೂರು ಹಾಗೂ ಅಂಕೋಲಾ ಈ ಮೊದಲಾದ ಕಡೆ ಭೂಕುಸಿತ ಉಂಟಾಗಿದೆ. ರಾಕ್ಷಸ ರೀತಿಯಲ್ಲಿ ಕೆಲಸ ಮಾಡುವ ಬುಲ್ಡೊಜರ್, […]
ತ್ರಿಶಾ ಕ್ಲಾಸಸ್ : ಸಿ ಎ ಫೌಂಡೇಶನ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
ಮಂಗಳೂರು : ಸಿ ಎ ಫೌಂಡೇಶನ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಂಗಳೂರಿನ ತ್ರಿಶಾ ಕ್ಲಾಸಸ್ ವತಿಯಿಂದ ಸನ್ಮಾನ ಕಾರ್ಯಕ್ರಮವು ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಆಗಸ್ಟ್ 2 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ.ನಾರಾಯಣ್ ಕಾಯರ್ಕಟ್ಟೆ ರವರು ವಿದ್ಯಾರ್ಥಿಗಳು ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಯಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ಹಲವು, ಅವುಗಳಲ್ಲಿ ಯಶಸ್ವಿಯಾಗಲು ನಿರಂತರ ಪರಿಶ್ರಮ, ಕಾರ್ಯಕ್ಷಮತೆ ಮತ್ತು ಛಲ ಇರಬೇಕು ಎನ್ನುತ್ತಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿ […]
ಧುಮ್ಮುಕಿ ಹರಿಯುತ್ತಿರುವ ದುರ್ಗಾ ಫಾಲ್ಸ್: ನೀರಿಗಿಳಿದು ಸೆಲ್ಫಿ, ರೀಲ್ಸ್ ಮಾಡದಂತೆ ಗ್ರಾಮಸ್ಥರ ಮನವಿ
ಉಡುಪಿ: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕಾರ್ಕಳ ತಾಲೂಕಿನ ದುರ್ಗಾ ಫಾಲ್ಸ್ ಧುಮ್ಮುಕಿ ಹರಿಯುತ್ತಿದೆ. ಸ್ವರ್ಣ ನದಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಲು ಕೊರಕಲ್ಲುಗಳ ಮಧ್ಯೆ ಹರಿದು ಸಾಗುವ ಹಿನ್ನೆಲೆಯಲ್ಲಿ ಇಲ್ಲಿ ನೈಸರ್ಗಿಕವಾಗಿ ಜಲಪಾತ ಸೃಷ್ಟಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಗಾ ಫಾಲ್ಸ್ ಕುರಿತು ವಿಡಿಯೋ ಮತ್ತು ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಸದ್ಯ ಇಲ್ಲಿ ಪ್ರವಾಸಿಗ ದಂಡು ದಂಡಾಗಿ ಬರುತ್ತಿದ್ದಾರೆ. ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿರುವ ದುರ್ಗಾ ಫಾಲ್ಸ್ ನೋಡಲು […]