ಕುಂದಾಪ್ರ ಭಾಷೆ ಕನ್ನಡ ಭಾಷೆಯ ವಿಶಿಷ್ಟ ಪ್ರಾಕಾರ: ಎ.ಎಸ್.ಎನ್. ಹೆಬ್ಬಾರ್

ಕುಂದಾಪುರ: ಕುಂದಾಪ್ರ ಕನ್ನಡ ಭಾಷೆಗೆ ಅದರದ್ದೇ ಆದ ಗತ್ತು ಗೈರತ್ತಿದೆ. ಹತ್ತಾರು ಬಗೆಯ ಪದ ಪ್ರಯೋಗಳಿರುವ ಕುಂದಾಪ್ರ ಕನ್ನಡವು ಕನ್ನಡ ಭಾಷೆಯ ವಿಶಿಷ್ಟ ಪ್ರಾಕಾರವಾಗಿದೆ ಎಂದು ಹಿರಿಯ ಸಾಹಿತಿ, ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ವತಿಯಿಂದ ವಿಶ್ವ ಕುಂದಾಪ್ರ ಕನ್ನಡದ ದಿನಾಚರಣೆಯ ಅಂಗವಾಗಿ ಅಗಸ್ಟ್ 25ರ ಭಾನುವಾರ ಆಯೋಜಿಸಲಾಗಿರುವ ‘ಕೆಸರಲ್ಲೊಂದು ದಿನ – ಗಮ್ಮತ್’ ಬೃಹತ್ ಗ್ರಾಮೀಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಭಾಷೆ […]

ಉಡುಪಿ: ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ತರಬೇತಿ ಕಾರ್ಯಾಗಾರ ಸಂಪನ್ನ

ಉಡುಪಿ: ಶೌರ್ಯವೆಂದರೆ “ಸಾಧನೆ” ಶೌರ್ಯದ ಸ್ವಯಂಸೇವಕರು ಇಲಾಖೆಗಳ ಜೊತೆಯಾಗಿ ಸೇವೆ ನೀಡುತ್ತಿರುವುದು ಇಲಾಖೆಗಳಿಗೆ ಆನೆ ಬಲ ಎಂದು ತಿಳಿದಿದ್ದೇನೆ ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ವಿನಾಯಕ ಕಲ್ಗುಟ್ಕರ್ ಹೇಳಿದರು. ಉಡುಪಿ ಪ್ರಗತಿ ಸೌಧದಲ್ಲಿ ನಡೆದ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಿಪತ್ತು ನಡೆಯುವ ವಿವಿಧ ಸಂದರ್ಭಗಳಲ್ಲಿ ಇಲಾಖೆಯ ಸೀಮಿತ ಸಿಬ್ಬಂದಿ ಅಥವಾ ಕ್ರಮಿಸುವ ಹಾದಿ ದೂರವಿರುವ ಸಂದರ್ಭಗಳಲ್ಲಿ ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಲು ವಿಳಂಬವಾಗುವ […]

ಹಿರಿಯಡ್ಕ: ಉಚಿತ ಆರೋಗ್ಯ ತಪಾಸಣಾ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಉಡುಪಿ: ಇಂದಿನ ಆಧುನಿಕ ಯುಗದಲ್ಲಿ ನಮ್ಮ ಆರೋಗ್ಯದ ರಕ್ಷಣೆಯ ಜೊತೆಗೆ ಇನ್ನೊಬ್ಬರ ಆರೋಗ್ಯ ಕಾಳಜಿ ವಹಿಸುವುದು ಅಗತ್ಯವಿದೆ ಆ ನಿಟ್ಟಿನಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಸುವರ್ಣ ಹೇಳಿದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಆಯೋಜನೆಯಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಲಯನ್ಸ್ ಕ್ಲಬ್ ಹಿರಿಯಡ್ಕ ದೇವಾಡಿಗ ಸುಧಾರಕ ಸಂಘ ಮಂಗಳೂರು ಉಪಸಂಘ ಹಿರಿಯಡಕ ಇವರ ಸಹಭಾಗಿತ್ವದೊಂದಿಗೆ […]

ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕಾ ಋತು ಆರಂಭ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕಾ ಋತು ಆರಂಭಗೊಂಡಿದೆ. ಜುಲೈ 31ಕ್ಕೆ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿ ಕೊನೆಗೊಂಡಿದೆ. ಆದರೆ ಈ ವರ್ಷ ಮಳೆಯ ಅಬ್ಬರದಿಂದಾಗಿ ಮೀನುಗಾರಿಕೆ ತುಸು ತಡವಾಗಿ ಪ್ರಾರಂಭಗೊಳ್ಳಲಿದೆ. ಕಳೆದ ಒಂದು ವಾರದಿಂದ ಗಾಳಿ ಮಳೆಯಾಗುತ್ತಿದ್ದು ಮೀನುಗಾರರಿಗೆ ತೊಡಕಾಗಿ ಪರಿಣಮಿಸಿದೆ. ಈಗಾಗಲೇ ಮೀನುಬೇಟೆಗೆ ಸಜ್ಜಾಗಿರುವ ಮೀನುಗಾರರು ಮತ್ತು ಬೋಟ್ ಮಾಲೀಕರು ಬಲೆಗಳನ್ನು ಸಜ್ಜುಗೊಳಿಸಿ ಅಗತ್ಯ ತಯಾರಿ ನಡೆಸಿ ಕಾಯುತ್ತಿದ್ದಾರೆ.ಆದರೆ ಪ್ರಕೃತಿ ಇನ್ನೂ ಮೀನುಗಾರಿಕೆಗೆ ಪೂರಕವಾಗಿ ಪರಿಣಮಿಸಿಲ್ಲ. ಕರ್ನಾಟಕ ಕರಾವಳಿಯಲ್ಲಿ ಕೈಗೊಳ್ಳುವ ಯಾಂತ್ರೀಕೃತ ಮೀನುಗಾರಿಕೆಯನ್ನು ಜೂನ್‌ […]

ಮಣಿಪಾಲ: ತಲೆಮರೆಸಿಕೊಂಡಿದ್ದ ಆರೋಪಿ 29 ವರ್ಷಗಳ ನಂತರ ಸೆರೆ.

ಉಡುಪಿ: 29 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಕೃಷ್ಣ ಭಂಡಾರಿ ಬಂಧಿತ ಆರೋಪಿ. ಈತ 1995 ರಲ್ಲಿ ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಓರ್ವನಾಗಿದ್ದಾನೆ. ಆರೋಪಿಯನ್ನು ಪೊಲೀಸ್‌ ನಿರೀಕ್ಷಕ ದೇವರಾಜ್ ಟಿ. ವಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಪ್ರಸನ್ನ ಸಿ. ಹಾಗೂ ಇಮ್ರಾನ್ ಮಾಹಿತಿಯನ್ನು ಕಲೆಹಾಕಿ ಕುಂದಾಪುರದಿಂದ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.