ಮಣಿಪಾಲ: ಆ.15ರಂದು ಮೂರನೇ ಆವೃತ್ತಿಯ “ಕೆನರಾ ಮ್ಯಾರಥಾನ್”
ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ‘ಮಹಿಳಾ ಸಬಲೀಕರಣ’ ಎಂಬ ಧ್ಯೇಯವಾಕ್ಯದೊಂದಿಗೆ ಇದೇ ಆಗಸ್ಟ್ 15ರಂದು ಮೂರನೇ ಆವೃತ್ತಿಯ “ಕೆನರಾ ಮ್ಯಾರಥಾನ್” ಸ್ಪರ್ಧಾಕೂಟವನ್ನು ಆಯೋಜಿಸಲಾಗಿದೆ ಎಂದು ಮ್ಯಾರಥಾನ್ ಆಯೋಜನಾ ಸಮಿತಿಯ ಸಚಿನ್ ಶೆಟ್ಟಿ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ 21 ಕಿ.ಮೀ, 10 ಕಿ.ಮೀ, 5 ಕಿ.ಮೀ ಹಾಗೂ 3 ಕಿ.ಮೀ. ಈ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಅಂದು ಬೆಳಿಗ್ಗೆ 5.30ರಿಂದ ಕೆನರಾ ಬ್ಯಾಂಕ್ ನ ಮಣಿಪಾಲ ಸರ್ಕಲ್ ಕಚೇರಿಯಿಂದ ಓಟದ […]
ಉಡುಪಿ: ಕಡಲ ತೀರದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ
ಉಡುಪಿ: ಉಡುಪಿಯಲ್ಲಿ ಸುರಿಯುತ್ತಿರುವ ಮಳೆಯ ತೀವ್ರತೆ ಅರಿವಿಗೆ ಬರಬೇಕಾದರೆ ಕಡಲ ತೀರಗಳಿಗೆ ಭೇಟಿ ಕೊಡಬೇಕು. ಊರಿನ ಕಸವನ್ನೆಲ್ಲ ನದಿಗಳು ಹೊತ್ತು ತಂದು ಸಮುದ್ರಕ್ಕೆ ಹಾಕುತ್ತಿವೆ. ಕಡಲಲ್ಲಿ ನೀರಿನ ಅಬ್ಬರ ಹೆಚ್ಚಿದ್ದಾಗ ಈ ಕಸದ ರಾಶಿ ಬಂದು ದಡ ಸೇರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಡಲಿನ ಆರ್ಭಟ ಜೋರಾಗಿದೆ. ಹೀಗಾಗಿ ಕಡಲ ಆಳಕ್ಕೆ ಸೇರಿದ ಕಸವೆಲ್ಲ ಬಂದು ತೀರ ಪ್ರದೇಶದಲ್ಲಿ ಸಂಗ್ರವಾಗುತ್ತಿದೆ. ಪ್ರತಿ ಮಳೆಗಾಲದಲ್ಲೂ ಈ ರೀತಿ ಕಸದ ಗುಡ್ಡವೆ ಬಂದು ಸೇರುತ್ತದೆ. ಕಡಲು ತನ್ನೊಳಗೆ ಏನನ್ನು ಇರಿಸಿಕೊಳ್ಳುವುದಿಲ್ಲ ಎಂಬ […]
ಉಡುಪಿ ಕೃಷ್ಣಮಠದಲ್ಲಿ ಶ್ರೀಕೃಷ್ಣ ಮಾಸೋತ್ಸವಕ್ಕೆ ಚಾಲನೆ
ಉಡುಪಿ: ಉಡುಪಿ ಶ್ರೀಕೃಷ್ಣಮಠ ಪುತ್ತಿಗೆ ಪರ್ಯಾಯ ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವೈಭವ ಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಶ್ರೀಕೃಷ್ಣ ಮಾಸೋತ್ಸವಕ್ಕೆ ಕೃಷ್ಣಮಠದ ರಾಜಾಂಗಣದಲ್ಲಿ ಚಾಲನೆ ನೀಡಲಾಯಿತು. ಶ್ರೀಕೃಷ್ಣ ಮಾಸೋತ್ಸವ ಉದ್ಘಾಟಿಸಿ ಮಾತನಾಡಿದ ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಗವದ್ಗೀತೆ ನಮ್ಮ ದೇಶಕ್ಕೆ ಸಂಸ್ಕೃತಿಯನ್ನು ತಿಳಿಸುವ ಬಹುದೊಡ್ಡ ಸಂಪತ್ತು. ಕೃಷ್ಣ ದೇವರನ್ನು ಪ್ರತಿದಿನ ಉಪಾಸನೆ ಮಾಡುವ ಕೆಲಸವಾಗಬೇಕು. ನಮ್ಮ ಧರ್ಮದ ಮೇಲೆ ಪ್ರಹಾರವಾದಾಗ ಅತಿವೃಷ್ಟಿ, ಅನಾವೃಷ್ಟಿ ಆಗುತ್ತದೆ. ಧರ್ಮ, ಸಂಸ್ಕೃತಿಯ ನಾಶಕ್ಕೆ ಪ್ರಯತ್ನಿಸಿದರೆ […]
ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಮಹಾಂತೇಶ ಶಿವಯೋಗಿಗಳ ಕೊಡುಗೆ ಅಪಾರ:ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್
ಉಡುಪಿ: ಮಾದಕ ವ್ಯಸನಗಳ ಸೇವನೆಯಿಂದಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವುಮೂಡಿಸುವುದರೊಂದಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಮಹಾಂತೇಶ ಶಿವಯೋಗಿಗಳು ನೀಡಿದ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು. ಅವರು ಇಂದು ನಗರದ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ನ ಪ್ರಜ್ಞಾ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ […]
ಶಿರ್ವ: ಹೊಂಡ ತಪ್ಪಿಸಲು ಹೋಗಿ ಕಂದಕಕ್ಕೆ ಬಿದ್ದ ಕಾರು; ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರು
ಉಡುಪಿ: ಶಿರ್ವ -ಕಟಪಾಡಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಉದ್ದಕ್ಕೂ ಹೊಂಡ ಗುಂಡಿಗಳು ಬಿದ್ದಿವೆ. ನಿತ್ಯ ವಾಹನ ಸವಾರರು ಸರ್ಕಸ್ ಮಾಡಿಕೊಂಡೆ ಹೋಗಬೇಕಾದ ದುಸ್ಥಿತಿ ನಿರ್ಮಾಣಗೊಂಡಿದೆ. ಇಂದು ಮುಂಜಾನೆ ಶಂಕರಪುರ ಸಾಲ್ಮರ್ ಸಮೀಪ ಶಿರ್ವಾ ದಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದ ಶಿಫ್ಟ್ ಕಾರೊಂದು ಹೊಂಡ ತಪ್ಪಿಸಲು ಹೋಗಿ ಕಂದಕಕ್ಕೆ ಬಿದ್ದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹದಗೆಟ್ಟ ರಸ್ತೆಯಿಂದಾಗಿ ಈ ಮಾರ್ಗದಲ್ಲಿ ಪ್ರತಿದಿನ ಒಂದಲ್ಲ ಒಂದು ಅಪಘಾತ ನಡೆಯುತ್ತಲೇ ಇದೆ. ಲೋಕೋಪಯೋಗಿ ಇಲಾಖೆಗೆ ದೂರು […]