ಕುಂದಾಪುರ: ಈಚರ್ ಲಾರಿಗೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು.
ಉಡುಪಿ: ಈಚರ್ ಲಾರಿಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹೈಕಾಡಿಯಲ್ಲಿ ನಡೆದಿದೆ.ಮೃತ ಸವಾರನನ್ನು ಬೆಳ್ವೆ ನಿವಾಸಿ ನಾಗರಾಜ್ (40) ಎಂದು ಗುರುತಿಸಲಾಗಿದೆ. ಅವರು ಬೆಳ್ವೆಯಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈಚರ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಮೇತ ರಸ್ತೆಗೆ ಬಿದ್ದ ನಾಗರಾಜ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಶಂಕರ್ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಉಡುಪಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಗೆ ಕಾರ್ಕಳ ತಾಲೂಕಿನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದೆ.ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯ ಕುಂಟಲ್ಪಾಡಿ ಸಮೀಪದಲ್ಲಿ ಪರ್ಪಲೆ ಗುಡ್ಡ ಕುಸಿದಿದ್ದು, ರಾಜ್ಯ ಹೆದ್ದಾರಿಯಲ್ಲಿ ಬಿರುಕು ಬಿದ್ದಿದೆ. ರಸ್ತೆ ಮಧ್ಯೆ ಕಂದಕ ನಿರ್ಮಾಣಗೊಂಡು ರಸ್ತೆ ಮಧ್ಯೆ ವಿಪರೀತ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ರಸ್ತೆಯ ವಿಕ್ಟರ್ ಫರ್ನಾಂಡಿಸ್ ಎಂಬವರ ಮನೆಯ ಹಿಂಭಾಗದಲ್ಲಿ ಮತ್ತು ನಿಟ್ಟೆ ಲೆಮಿನ ಫ್ಯಾಕ್ಟರಿ ಬಳಿ ಗುಡ್ಡ ಕುಸಿದಿದ್ದು, ಅಪಾರ […]
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎನೇಲ್ ಗೊಬ್ಬು ಕ್ರೀಡಾಕೂಟ
ದೈಹಿಕ- ಮಾನಸಿಕ ಆರೋಗ್ಯದ ಸದೃಢತೆಗೆ ಗ್ರಾಮೀಣ ಕ್ರೀಡೆ ಸಹಕಾರಿ: ಅನಿಲ್ ಕುಮಾರ್ ತುಳುವನ್ನು ಅಧಿಕೃತ ಭಾಷೆಯಾಗಿಸಲು ಹೋರಾಟ ಅಗತ್ಯ: ರಕ್ಷಿತ್ ಶಿವರಾಮ್ ಬೆಳ್ತಂಗಡಿ: ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸದೃಢತೆಗೆ ಗ್ರಾಮೀಣ ಕ್ರೀಡೆ ಸಹಕಾರಿ. ಆದರೆ ಆಧುನಿಕ ಭರಾಟೆಯಲ್ಲಿ ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಹೀಗಾಗಿ ಹಿಂದಿನ ಜೀವನ ಮತ್ತೆ ಮರುಕಳಿಸುವ ಉದ್ದೇಶವೇ ಎನೇಲ್ ಗೊಬ್ಬು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ಹೇಳಿದರು. […]
ಕುಂದಾಪುರ: ವ್ಯಕ್ತಿ ನಾಪತ್ತೆ.
ಕುಂದಾಪುರ, ಆಗಸ್ಟ್ 02: ಕುಂದಾಪುರ ತಾಲೂಕು ಯಡಮೊಗೆ ಗ್ರಾಮದ ಹೊಸಬಾಳು ನಿವಾಸಿ ಅಣ್ಣಪ್ಪ (40) ಎಂಬ ವ್ಯಕ್ತಿಯು ಮಾರ್ಚ್ 12 ರಂದು ಮನೆಯಿಂದ ಬೆಂಗಳೂರಿಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.5 ಅಡಿ 5 ಇಂಚು ಎತ್ತರ, ಎಣ್ಣೆಕಪ್ಪು ಮೈ ಬಣ್ಣ ಹೊಂದಿರುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08259-280299, ಮೊ.ನಂ:8277988963, ಮೊ.ನಂ:9480805456, ಕುಂದಾಪುರ ವೃತ್ತ ನಿರೀಕ್ಷಕರ ದೂ.ಸಂಖ್ಯೆ: 08254-230880 ಅಥವಾ ಉಡುಪಿ ಕಂಟ್ರೋಲ್ ರೂಮ್ ದೂ.ಸಂಖ್ಯೆ: 0820-2526444 ಅನ್ನು […]
ಕೋಟ: ಸಾವಿನಲ್ಲೂ ಒಂದಾದ ಹಿರಿಯ ದಂಪತಿ
ಕುಂದಾಪುರ: ಸಪ್ತಪದಿ ತುಳಿದು ಬಳಿಕ ಸಂಸಾರದಲ್ಲಿ ಒಂದಾಗಿ ಬದುಕು ಕಟ್ಟಿಕೊಂಡ ದಂಪತಿಗಳು ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟು ಎಂಬಲ್ಲಿ ನಡೆದಿದೆ.ಇಲ್ಲಿನ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ (58) ಮತ್ತು ಅವರ ಧರ್ಮಪತ್ನಿ ಮುತ್ತು ಪೂಜಾರ್ತಿ(53) ಸಾವಿನಲ್ಲಿ ಒಂದಾದ ಹಿರಿ ಜೋಡಿಗಳು. ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಬ್ರಹ್ಮಬೈದರ್ಕಳ ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂಸೇವಕರಾಗಿ ನಿರಂತರ ಸೇವೆ, ಕೃಷಿರಾಗಿ ಗುರುತಿಸಿಕೊಂಡಿದ್ದರು. ಅವರ ಪತ್ನಿ ಮುತ್ತು ಪೂಜಾರ್ತಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ […]