ಮಲ್ಪೆ: ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ; ನಿವೃತ್ತ ಮುಖ್ಯೋಪಾಧ್ಯಾಯ ಸ್ಥಳದಲ್ಲೇ ಮೃತ್ಯು

ಉಡುಪಿ: ಖಾಸಗಿ ಬಸ್ ವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಮುಖ್ಯೋಪಾಧ್ಯಾಯರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಪೆ ಕಲ್ಮಾಡಿಯಲ್ಲಿ ಇಂದು ನಡೆದಿದೆ. ಮೃತರನ್ನು ಮಲ್ಪೆ ಕೊಪ್ಪಲತೋಟ ನಿವಾಸಿ ಭಾಸ್ಕರ್ ಎಂದು ಗುರುತಿಸಲಾಗಿದೆ. ಅವರು ಇಂದು ಮಧ್ಯಾಹ್ನ ತನ್ನ ದ್ವಿಚಕ್ರ ವಾಹನದಲ್ಲಿ ಆದಿಆಡುಪಿಯಿಂದ ಮಲ್ಪೆ ಕಡೆ ಹೋಗುತ್ತಿದ್ದರು. ಕಲ್ಮಾಡಿಗೆ ತಲುಪುತ್ತಿದ್ದಂತೆ ಬ್ರೇಕ್ ಫೈಲ್ ಆದ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಹಿಂಬದಿಯ ಚಕ್ರಕ್ಕೆ ಸಿಲುಕಿದ ಭಾಸ್ಕರ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಲ್ಪೆ […]

ವಾಲ್ಮೀಕಿ- ಮುಡಾ ಹಗರಣ ಖಂಡಿಸಿ ಆ. 3ರಿಂದ ಪಾದಯಾತ್ರೆೆ; ಜಿಲ್ಲೆಯಿಂದ 500 ಮಂದಿ ಭಾಗಿ

ಉಡುಪಿ: ವಾಲ್ಮೀಕಿ ಹಾಗೂ ಮುಡಾ ಹಗರಣ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಆ. 3ರಿಂದ 7 ದಿನಗಳ ಪಾದಯಾತ್ರೆೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಯುವ ಪಾದಯಾತ್ರೆಯಲ್ಲಿ ಜಿಲ್ಲೆಯ 500 ಮಂದಿ ಭಾಗವಹಿಸಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ವಿಠಲ ಪೂಜಾರಿ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ಹಗರಣಗಳಲ್ಲಿ ಸರಕಾರದ ಕೈವಾಡವಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಪರಿಶಿಷ್ಟ […]

ಮಣಿಪಾಲ MSDC ಯಲ್ಲಿ “ವರ್ಚುವಲ್ ರಿಯಾಲಿಟಿ” ಕೋರ್ಸ್.

ಉಡುಪಿ: ಮಣಿಪಾಲ MSDC (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಯಲ್ಲಿ ವಿದ್ಯಾರ್ಥಿಗಳಿಗೆ ಆರ್ಕಿಟೆಕ್ಚರಲ್ ಮತ್ತು ಇಂಟೀರಿಯರ್ ದೃಶ್ಯೀಕರಣ/ ಉದ್ಯಮ ನಿರ್ಮಾಣಕ್ಕಾಗಿ ವರ್ಚುವಲ್ ರಿಯಾಲಿಟಿ ಕುರಿತು ಸಮಗ್ರ ಕೋರ್ಸ್ ನ್ನು ಪ್ರಾರಂಭಿಸಲಿದೆ. ಕೋರ್ಸಿನ ಅವಧಿ: 50 ಗಂಟೆಗಳು, ಒಂದರಿಂದ ಮೂರು ತಿಂಗಳವರೆಗೆ ಹೊಂದಿಕೊಳ್ಳುವ ಸಮಯಗಳು ಇರುವುದು. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448159810ಸ್ಥಳ: 2ನೇ ಮಹಡಿ, MSDC, ಡಾ. TMA ಪೈ ಪಾಲಿಟೆಕ್ನಿಕ್ ಕ್ಯಾಂಪಸ್, MIT ಹಿಂದೆ, ಮಣಿಪಾಲ

ಅಮೇರಿಕಾದಲ್ಲಿ ಪ್ರತಿವರ್ಷ ಜುಲೈ 27ರಂದು ‘ಯಕ್ಷಗಾನ ಡೇ’ ಘೋಷಣೆ

ಉಡುಪಿ: ಪುತ್ತಿಗೆ ಶ್ರೀಪಾದರ ಆಶೀರ್ವಾದದೊಂದಿಗೆ ಪಟ್ಲ ಸತೀಶ್ ಶೆಟ್ಟಿ ಅವರ ನಾಯಕತ್ವದಲ್ಲಿ ಯಕ್ಷಧ್ರುವ ಫೌಂಡೇಶನ್ ಕಲಾತಂಡದ ಕಲಾವಿದರು ಪುತ್ತಿಗೆ ಮಠದ ಪ್ರಥಮ ದೇವಾಲಯ ಅಮೆರಿಕಾದ ಫೀನಿಕ್ಸ್ ನಲ್ಲಿರುವ ಶ್ರೀವೆಂಕಟ ಕೃಷ್ಣ ಕ್ಷೇತ್ರದಲ್ಲಿ ‘ದೇವೀ ಮಾಹಾತ್ಮೆ’ ಯಕ್ಷಗಾನ ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿರುವ ಸಿಟಿ ಮೇಯರ್ ಅವರು, ಅದ್ಭುತ ಚೆಂಡೆ ವಾದನ ಮತ್ತು ವಿಶಿಷ್ಟ ರೀತಿಯ ಕುಣಿತ ಮತ್ತು ಅಪೂರ್ವ ಗಾಯನದಿಂದ ಕೂಡಿದ ಯಕ್ಷಗಾನ ಕಲೆಯನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು‌. ಅಲ್ಲದೆ, ಜುಲೈ 27 ಅನ್ನು ಪ್ರತಿವರ್ಷ […]

ಮಂಗಳೂರು: ಯುವತಿ ನಾಪತ್ತೆ.

ಮಂಗಳೂರು: ಮೊಬೈಲ್‌ನಲ್ಲಿ ಪಬ್‌ಜಿ ಆಟವಾಡುವ ಹವ್ಯಾಸವಿದ್ದ ಬಿಜೈಯ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ನಾಪತ್ತೆಯಾದ ಯುವತಿ ಕೆಲಿಸ್ತಾ ಫೆರಾವೊ (18). ಇವರು ಎಸೆಸೆಲ್ಸಿ ಬಳಿಕ ಆಟೊಮೊಬೈಲ್‌ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು. ಈಕೆ ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದರು‌.‌ ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕೆಮರಾವೊಂದನ್ನು ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು. ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್‌, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ […]