ಮಣಿಪಾಲದ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ “ಮಣಿಪಾಲ ಪ್ರೀಮಿಯಂ ಸಂಜೆ ದಂತ ಚಿಕಿತ್ಸಾಲಯ” ಉದ್ಘಾಟನೆ
ಮಣಿಪಾಲ, ಆಗಸ್ಟ್ 1: ಮಣಿಪಾಲದ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ(MCODS), ಮಣಿಪಾಲ ಪ್ರೀಮಿಯಂ ಸಂಜೆ ಕ್ಲಿನಿಕ್‌ನ ಉದ್ಘಾಟನೆಯನ್ನು ಘೋಷಿಸಲು ಸಂತೋಷವಾಗಿದೆ. ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ವಿ ಎಸ್ ಎಂ (ನಿವೃತ್ತ) ಅವರು ಈ ಕ್ಲಿನಿಕ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು, ಇದು ಸ್ಥಳೀಯ ಸಮುದಾಯಕ್ಕೆ ಪ್ರವೇಶಿಸಬಹುದಾದ ದಂತ ಆರೈಕೆಯಲ್ಲಿ ಗಮನಾರ್ಹವಾದ ವರ್ಧನೆಯಾಗಿದೆ. ಈ ಪ್ರೀಮಿಯಂ ಸಂಜೆ ಕ್ಲಿನಿಕ್ ಅನ್ನು ಉದ್ಘಾಟಿಸಿದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಈ […]
ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ, ನಾಳೆ (ಆಗಸ್ಟ್ 2) ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.
ಮಂಗಳೂರು: ನಿರಂತರ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ (ಆಗಸ್ಟ್ 2) ರಂದು ರಜೆ ಘೋಷಿಸಲಾಗಿದೆ. ದ.ಕ. ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.
ಮಂಗಳೂರಿನಲ್ಲಿ ಜೀ ಕನ್ನಡದಲ್ಲಿ ಬರ್ತಿರೋ ಹೊಸ ಧಾರವಾಹಿಗೆ ಆಡಿಷನ್
ಮಂಗಳೂರು: ಮಂಗಳೂರಿನಲ್ಲಿ ಜೀ ಕನ್ನಡ ವಾಹಿನಿಯ, ಸುಖಧರೆ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಭಕ್ತಿಪ್ರದಾನ ಪೌರಾಣಿಕ ಧಾರವಾಹಿಗೆ “ಉಘೇ ಉಘೇ ಮಾದೇಶ್ವರ” ಧಾರವಾಹಿ ಖ್ಯಾತಿಯ ನಿರ್ದೇಶಕರಾದ ಕೆ. ಮಹೇಶ್ ಸುಖಧರೆ ನೇತೃತ್ವದಲ್ಲಿ ಪ್ರಧಾನ ಪಾತ್ರಗಳ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಲಾವಿದರ ವಯಸ್ಸಿನ ಮಿತಿ: ಗಂಡು ಹಾಗೂ ಹೆಣ್ಣು- 6 ರಿಂದ 50 ವಯಸ್ಸಿನವರು, ಪ್ರಮುಖವಾಗಿ- ನಾಯಕ, ನಾಯಕಿಯ ಪ್ರಧಾನ ಪಾತ್ರಕ್ಕೆ 15 ರಿಂದ 20 ವಯಸ್ಸಿನ ಸ್ಪುರಧ್ರೂಪಿ ಯುವಕ, ಯುವತಿ ಕಲಾವಿದರಿಗೆ ವಿಶೇಷ ಆದ್ಯತೆ ನೀಡಲಾಗುವುದು. ನೇರ ಸಂದರ್ಶನದ ದಿನಾಂಕ: […]
ಉಡುಪಿ: ಆದೇಶ ಉಲ್ಲಂಘಿಸಿ ತರಗತಿ ನಡೆಸಿದರೆ ಶಿಸ್ತು ಕ್ರಮ: ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ.
ಉಡುಪಿ: ಜಿಲ್ಲಾಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಯವರು ಪ್ರಕೃತಿವಿಕೋಪದಡಿ ವಿಪರೀತ ಮಳೆ ಬರುವ ಮುನ್ಸೂಚನೆ ದಿನಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತಾದೃಷ್ಟಿಯಿಂದ ರಜೆ ಘೋಷಣೆ ಮಾಡಿದ ಸಂದರ್ಭಗಳಲ್ಲಿ ಕೆಲವು ಶಾಲೆಯವರು ಶಾಲೆ ಹಾಗೂ ವಿಶೇಷ ತರಗತಿಗಳನ್ನು ನಡೆಸುವುದು ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಶಾಲೆಗಳಲ್ಲಿ ನಿಯಮಬಾಹಿರವಾಗಿ ತರಗತಿಗಳನ್ನು ನಡೆಸಿ, ಮಕ್ಕಳಿಗೆ ಅನಾಹುತಗಳು ಸಂಭವಿಸಿದಲ್ಲಿ ಅಂತಹ ಶಾಲೆಗಳ ಮುಖ್ಯೋಪಾಧ್ಯಾಯರ/ಶಿಕ್ಷಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾದೃಷ್ಟಿಯಿಂದ ರಜೆ ಘೋಷಿಸಿದ್ದು, ಯಾವುದೇ ಕಾರಣಕ್ಕೂ ತರಗತಿಗಳನ್ನು ನಡೆಸದಂತೆ ಎಲ್ಲಾ ಶಾಲಾ ಮುಖ್ಯಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿರುವ ಕುರಿತು […]
ಮುಂದುವರಿದ ವರುಣನ ಆರ್ಭಟ: ನಾಳೆ (ಆಗಸ್ಟ್ 2) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.
ಉಡುಪಿ: ಕಳೆದ ನಾಲ್ಕು ದಿನಗಳಿಂದ ಉಡುಪಿ ಜಿಲ್ಲಾಧ್ಯಂತ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಆಗಸ್ಟ್ 2 (ಶುಕ್ರವಾರ)ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.