ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.
ಉಡುಪಿ: ಉಡುಪಿಯ ಜಾಹೀರಾತು ಕಂಪೆನಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.
ಹಿರಿಯಡಕ :ಫಿಸಿಯೋಥೆರಪಿ ಘಟಕ ಉದ್ಘಾಟನೆ
ಹಿರಿಯಡಕ: ಫಿಸಿಯೋಥೆರಪಿ ಘಟಕದ ಉದ್ಘಾಟನಾಕಾರ್ಯಕ್ರಮ ಹಾಗೂ ದಿವ್ಯಾಂಗರಿಗೆ ಫಿಸಿಯೋಥೆರಪಿ ಶಿಬಿರವು ಇಂದು ಹಿರಿಯಡ್ಕದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.ಮಣಿಪಾಲ ಮಾಹೆಯ ಎಮ್.ಸಿ.ಹೆಚ್.ಪಿ ಡಾ. ಅರುಣ್ ಮಯ್ಯಕಾರ್ಯಕ್ರಮ ಉದ್ಘಾಟಿಸಿ, ಎಂಡೋಸಲ್ಫಾನ್ ಸೇರಿದಂತೆ ದೈಹಿಕ ಅಂಗವಿಕಲತೆ ಇರುವ ಎಲ್ಲಾ ದಿವ್ಯಾಂಗರು ಈ ಘಟಕದಲ್ಲಿ ದೊರಕುವ ಫಿಸಿಯೋಥೆರಪಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್ ಮಾತನಾಡಿ, ಈ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಫಿಸಿಯೋಥೆರಪಿ ಘಟಕವನ್ನು ಪ್ರಾರಂಭಿಸಲಾಗಿದ್ದು, ಸ್ಥಳೀಯದಿವ್ಯಾಂಗರು ಸದ್ರಿ ಘಟಕದಲ್ಲಿ ಲಭ್ಯವಿರುವ […]
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ: ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರನಿರ್ದೇಶನಾಲಯದ ವತಿಯಿಂದ ಬೆಂಗಳೂರಿನ ಕರ್ನಾಟಕ ಹಜ್ಭವನದಲ್ಲಿ ಐ.ಎ.ಎಸ್ ಹಾಗೂ ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುತ್ತಿದ್ದು, ಸದರಿ ತರಬೇತಿಗೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯಕ್ಕೆ ಸೇರಿದ ಪದವಿ ಪಡೆದಿರುವ ೨೧ ರಿಂದ ೩೫ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಸೇವಾ-ಸಿಂಧು ತಂತ್ರಾಂಶ https://sevasindhu.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ […]
ಶಿಷ್ಯವೇತನ : ಅರ್ಜಿ ಆಹ್ವಾನ
ಉಡುಪಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ ೨೦೨೩-೨೪ ಮತ್ತು ಪ್ರಸಕ್ತ ಸಾಲಿನಶಿಷ್ಯವೇತನಕ್ಕಾಗಿ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಹಾಗೂ ಗಮಕ ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ೧೬ ರಿಂದ ೨೪ ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ ೧೨ ಕೊನೆಯ ದಿನ. ಅರ್ಜಿಯನ್ನು ಅಕಾಡೆಮಿಯ ಪೇಸ್ ಬುಕ್ (facebook.com/karnatakasangeeta1978) ಮೂಲಕ ಪಡೆದು ವೆಬ್‌ಸೈಟ್ Sangeetanrityaacademy.karnataka.gov.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು […]
ವಿದೇಶಿ ಸಾಲ ಯೋಜನೆ :ಅರ್ಜಿ ಆಹ್ವಾನ
ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮ (ನಿ) ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎನ್.ಎಂ.ಡಿ.ಎಫ್.ಸಿ ಮಾದರಿಯಲ್ಲಿ ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಾಲ ಪಡೆಯಲು ನಿಗಮದವೆಬ್‌ಸೈಟ್ kmdconline.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ದೂ.ಸಂ: ೦೮೨೦-೨೫೭೪೯೯೦ ಅಥವಾ ಉಡುಪಿದೂ.ಸಂಖ್ಯೆ: ೦೮೨೦-೨೫೭೪೫೯೬, ಕಾರ್ಕಳ ದೂ.ಸಂಖ್ಯೆ: ೦೮೨೫೮-೨೩೧೧೦೧ […]