ರೈತರಿಂದ ಮುಂಗಾರು ಬೆಳೆ ಸಮೀಕ್ಷೆಗೆ ಅವಕಾಶ
ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಈಗಾಗಲೇ ಚಾಲನೆನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ದಿ ಪಡಿಸಲಾಗಿದೆ. ಇಲಾಖೆಯ ಫ್ರೂಟ್ಸ್ ತಂತ್ರಾಂಶದ ಎಫ್.ಐ.ಡಿ ಸಂಖ್ಯೆಯನ್ನು ಹೊಂದಿರುವ ರೈತರುಗೂಗಲ್ ಪ್ಲೇ ಸ್ಟೋರ್‌ನಿಂದ “ಮುಂಗಾರು ರೈತರ ಬೆಳೆಸಮೀಕ್ಷೆ ೨೦೨೪” ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ನಂತರ “ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಿ” ಆಯ್ಕೆಯನ್ನು ಮಾಡಿ ಆಧಾರ್ ಸಂಖ್ಯೆಯನ್ನು ದಾಖಲಿಸಿ ಜನರೇಟ್ ಓ.ಟಿ.ಪಿಆಯ್ಕೆಯನ್ನು ಮಾಡಬೇಕು. ನಂತರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಓ.ಟಿ.ಪಿಯನ್ನು ದಾಖಲಿಸಬೇಕು. […]
ಕೇರಳ ವಯನಾಡಿನಲ್ಲಿ ಭಾರೀ ಭೂಕುಸಿತ: 19ಕ್ಕೂ ಹೆಚ್ಚು ಸಾವು, 50 ಮಂದಿಗೆ ಗಾಯ, ರಕ್ಷಣಾ ಕಾರ್ಯ ಮುಂದುವರಿಕೆ.
ಕೇರಳ: ಕೇರಳದ ವಯನಾಡ್ ಭಾರೀ ಭೂಕುಸಿತಗಳು ಸಂಭವಿಸಿದ ಪರಿಣಾಮ 19 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಹಾಗೂ 50 ಮಂದಿಗೆ ಗಾಯಗಳಾಗಿವೆ. ಇನ್ನೂ ಹಲವಾರು ಮಂದಿ ಜನರು ಸಿಲುಕಿರುವ ಶಂಕೆಯಿದೆ. ಇನ್ನುಳಿದವರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿಯುತ್ತಿದ್ದು, ಇದೀಗ ಏರ್’ಫೋರ್ಸ್ ಕೂಡ ಸಹಾಯ ಮಾಡಲಿದೆ. ಮೆಪ್ಪಾಡಿ ಸಮೀಪದ ಗುಡ್ಡಗಾಡು ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಸೇರಿದಂತೆ ಹಲವು ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಎಲ್‌ಡಿಎಫ್ […]
ಪಾದರಕ್ಷೆ ವಿನ್ಯಾಸ ಮತ್ತು ಉತ್ಪಾದನಾ ತರಬೇತಿ: ಅರ್ಜಿ ಆಹ್ವಾನ
ಉಡುಪಿ: ಡಾ. ಬಾಬು ಜಗಜೀವನರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಉತ್ತರ ಪ್ರದೇಶದ ಆಗ್ರಾ ಹಾಗೂ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ central footwear training institute ಕೇಂದ್ರದಲ್ಲಿ ೬೦ ದಿನಗಳ ವಸತಿ ಸಹಿತ footwear designing and production ಗೆ ಆಸಕ್ತಿ ಇರುವ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜು.೩೧ ಕೊನೆಯ ದಿನವಾಗಿದೆ.ತರಬೇತಿ ಅವಧಿಯಲ್ಲಿ ಮಾಸಿಕ ಭತ್ಯೆ ನೀಡಲಾಗುವುದರೊಂದಿಗೆ ಎಲ್ಲ ವೆಚ್ಚಗಳನ್ನು ನಿಗಮವೆ ಬರಿಸಲಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು ಲಿಡ್‌ಕರ್, […]
ಜೆಸಿಐ ಇಂಡಿಯಾ ಪಂಚ ರಾಜ್ಯ ವಲಯಗಳ ತರಬೇತಿ ವರ್ಕ್ ಶಾಪ್ ನಲ್ಲಿ ಉಡುಪಿಯ ಉದಯ ನಾಯ್ಕ್ ಅವರಿಗೆ ZTWS ಮೋಸ್ಟ ಟ್ರಾನ್ಸ್ಫರ್ಮೆಡ್ ಲರ್ನ್ಡ್ ಅವಾರ್ಡ್-2024 ಪ್ರಶಸ್ತಿ.
ಉಡುಪಿ: ಜೂನಿಯರ್ ಛೇಂಬರ್ ಇಂಟರ್ನ್ಯಾಷನಲ್ ಜೆಸಿಐ ಇಂಡಿಯಾ 2024 ರ ವಲಯಗಳ ಟ್ರೈನರ್ ಗಳ ತರಬೇತಿಯಲ್ಲಿ ಜೆಸಿಐ ಇಂಡಿಯಾ ಪಂಚ ರಾಜ್ಯ ವಲಯಗಳ ತರಬೇತಿ ವರ್ಕ್ ಶಾಪ್ ನಲ್ಲಿ ಕರ್ನಾಟಕ ದ ವಲಯ 15 ರ ಜೆಸಿಐ ಉಡುಪಿ ಸಿಟಿ ಯ ಪೂರ್ವ ಅಧ್ಯಕ್ಷ, ಪೂರ್ವ ವಲಯಾಧಿಕಾರಿ ಉದಯ ನಾಯ್ಕ್ ರವರಿಗೆ ZTWS ಮೋಸ್ಟ ಟ್ರಾನ್ಸ್ಫರ್ಮೆಡ್ ಲರ್ನ್ಡ್ ಅವಾರ್ಡ್ -2024. ಉಡುಪಿ ಕಾಪು ಪ್ಯಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಾಲ್ಕು ದಿನಗಳ ತರಬೇತಿಯಲ್ಲಿ ಈ ಪ್ರಶಸ್ತಿ ಗೌರವಕ್ಕೆ […]
ಕಟಪಾಡಿ:ತ್ರಿಶಾ ವಿದ್ಯಾ ಪಿಯು ಕಾಲೇಜಿನಲ್ಲಿ ಗುರುಪೂರ್ಣಿಮೆ ಮತ್ತು ಕಾರ್ಗಿಲ್ ವಿಜಯ್ ದಿನ ಆಚರಣೆ
ಕಟಪಾಡಿ: ದೇಶ ಸೇವೆ ಮಾಡುವುದು ಪುಣ್ಯದ ಕರ್ತವ್ಯ. ಹಗಲಿರುಳೆನ್ನದೇ ದೇಶದ ಗಡಿಯಲ್ಲಿ ಕಾಯುತ್ತಿರುವ ಸೈನಿಕರ ಪರಿಶ್ರಮದಿಂದ ನಾವೆಲ್ಲರೂ ಇಲ್ಲಿ ನೆಮ್ಮದಿಯಾಗಿದ್ದೇವೆ. ಅಂದು ಕೆಚ್ಚೆದೆಯಿಂದ ಹೋರಾಡಿದ ಸೈನಿಕರ ಫಲವಾಗಿ ಕಾರ್ಗಿಲ್ ನಲ್ಲಿ ವಿಜಯ ಸಿಕ್ಕಿದೆ. ನಾವಿಂದು ದೇಶದೊಳಗೆ ಈ ದೇಶಕ್ಕೆ ಪೂರಕವಾಗಿ ನಡೆದುಕೊಳ್ಳುವ ಅಗತ್ಯವಿದೆ ಎಂದು ಹವಾಲ್ದಾರ್ ಶುಭಕರ್ ಕಾಂಚನ್ ಹೇಳಿದರು. ಅವರು ಇತ್ತೀಚಿಗೆ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಮತ್ತು ಕಾರ್ಗಿಲ್ ವಿಜಯ್ ದಿವಸದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ […]