ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜಾ ಟ್ರೋಫಿಗೆ ಉಡುಪಿ ಯುವ ಕ್ರಿಕೆಟ್ ಆಟಗಾರ ನಿಶ್ಚಿತ್ ಎನ್ ಪೈ ಅಯ್ಕೆ.
ಉಡುಪಿ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತಾ ಟ್ರೋಫಿ ಗಳಲ್ಲಿ ಒಂದಾದ ಮಹಾರಾಜಾ ಟ್ರೋಫಿ 2024 ನೇ ಸೀಸನ್ ನ ಕ್ರಿಕೆಟ್ ಆಟಗಾರರ ಹರಾಜಿನಲ್ಲಿ ಉಡುಪಿ ಶಿರಿಬೀಡುವಿನ ಯುವ ಕ್ರಿಕೆಟ್ ಆಟಗಾರ ನಿಶ್ಚಿತ್ ನಾಗರಾಜ್ ಪೈ ಯವರು ಪಂದ್ಯಾವಳಿಯ ಬಲಿಷ್ಠ ತಂಡಗಳಲ್ಲಿ ಒಂದಾದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಉಡುಪಿ ಶಿರಿಬೀಡು ವಾರ್ಡಿನ ಶ್ರೀ ನಾಗರಾಜ ಪೈ ಮತ್ತು ಶ್ರೀಮತಿ ಉಜ್ವಲ ಕಿರಣ್ ಪೈ ದಂಪತಿಗಳ ದ್ವಿತೀಯ ಸುಪುತ್ರ. ಮುಂದೆ ಇವರು I. P. L […]
ಮಂಗಳೂರು:ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನಾಚರಣೆ
ಮಂಗಳೂರು: ಬ್ಯಾಂಕ್ ಆಫ್ ಬರೋಡಾದ 117ನೇ ಸಂಸ್ಥಾಪನಾ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರದಂತಹ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕಸ್ಮರಿಸಲಾಯಿತು. ಬ್ಯಾಂಕ್ ಆಫ್ ಬರೋಡಾ, ವಲಯ ಕಚೇರಿ, ಡಾ ಅಂಬೇಡ್ಕರ್ ವೃತ್ತ, ಮಂಗಳೂರಿನಿಂದ ಬಂಟ್ಸ್ ಹಾಸ್ಟೆಲ್, ಹಂಪನಕಟ್ಟೆ ಮತ್ತು ಕಚೇರಿಗೆ ವಾಕಥಾನ್ ನಡೆಸಲಾಯಿತು. ಶ್ರೀ ವೀರೇಂದ್ರ ಮೋಹನ ಜೋಶಿ, ಶ್ರೀ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್‌ನ ಕಮಾಂಡೆಂಟ್ ಮತ್ತು ಪ್ರಧಾನ ವ್ಯವಸ್ಥಾಪಕ ಮತ್ತು ವಲಯ ಮುಖ್ಯಸ್ಥರಾದ ಶ್ರೀ ರಾಜೇಶ್ ಖನ್ನಾ ಅವರು ಧ್ವಜಾರೋಹಣ […]
ಶಿಕ್ಷಕ, ಉದ್ಯಮಿ, ಸಾಮಾಜಿಕ ಧುರೀಣ ಬೆಂಜಮಿನ್ ಡಿ ಸೊಜಾ ನಿಧನ.
ಶಿಕ್ಷಣ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕೆಲರಾಯ್‌ನ ಬೆಂಜಮಿನ್ ಡಿ ಸೊಜಾ(ವಯಸ್ಸು 75 ) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ದಿ। ಜೊನ್ ಮತ್ತು ದಿ।ಪಿಯಾದ್ ಡಿಸೊಜಾ ದಂಪತಿಯ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಬೆಂಜಮಿನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆಲರಾಯ್ ಸಂತ ಜೋಕಿಮ್ ಶಾಲೆಯಲ್ಲಿ ಪೂರೈಸಿ, ಫ್ರೌಡಶಾಲೆಯಿಂದ ಪದವಿಯ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಕಲಿತು, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪದವಿ ಹಾಗೂ ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ […]
ಜುಲೈ 30ರಂದು ಎಮ್ 11 ಇಂಡಸ್ಟ್ರಿ ಬಯೋ ಡೀಸೆಲ್ ಹಾಗೂ ಫಾಮ್ ಆಯಿಲ್ ಘಟಕದ ವಿರುದ್ಧ ಪ್ರತಿಭಟನೆ
ಉಡುಪಿ: ಕಾಪು ತಾಲೂಕಿನ ಫಲಿಮಾರು ಗ್ರಾಪಂ ವ್ಯಾಪ್ತಿಯ ನಂದಿಕೂರು ಗ್ರಾಮದ ದೇವರ ಕಾಡು ಪ್ರದೇಶದಲ್ಲಿ ಮೂರು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ‘ಎಮ್ 11 ಇಂಡಸ್ಟ್ರಿ ಬಯೋ ಡೀಸೆಲ್ ಹಾಗೂ ಫಾಮ್ ಆಯಿಲ್ ಘಟಕ’ ದಿಂದ ವಿಷ ಅನಿಲ ಹಾಗೂ ಕೆಮಿಕಲ್ ಮಿಶ್ರಿತ ಆಯಿಲ್ ಹೊರ ಬಿಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಭಾಗದ ಜನರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಆದ್ದರಿಂದ ಎಮ್ 11 ಕಂಪೆನಿಯ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜುಲೈ […]
ಕಾರ್ಕಳ: ವಿಷ ಸೇವಿಸಿ ಯುವಕ ಆತ್ಮಹತ್ಯೆ.
ಕಾರ್ಕಳ: ರೆಂಜಾಳ ಗ್ರಾಮದ ಸರಕಾರಿ ಶಾಲೆಯ ಬಳಿಯ ಕಲ್ಕದಬೆಟ್ಟು ಹಾಡಿಯಲ್ಲಿ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಮನನೊಂದ ರೆಂಜಾಳ ಗ್ರಾಮದ ಗಣೇಶ್ (26) ಎಂಬವರು ಜು.27ರಂದು ಸಂಜೆ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.