ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಕೊರಗ ಸಮುದಾಯದ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳ ಭೇಟಿ
ಉಡುಪಿ: ಕಳೆದ 8 ದಿನಗಳಿಂದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಕೊರಗ ಸಮುದಾಯದ ಮುಖಂಡರು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಕೊರಗ ಸಮುದಾಯದ ನ್ಯಾಯ ಸಮ್ಮತ ಬೇಡಿಕೆಗಳಾದ ಭೂಮಿ ಹಕ್ಕು ಹಾಗೂ ವಿದ್ಯಾವಂತ […]
ಉಡುಪಿ: ಪ್ರಾಕೃತಿಕ ವಿಕೋಪ ಹಾನಿ ಕಾಮಗಾರಿಗಳ ಬಗ್ಗೆ ತಕ್ಷಣ ಕ್ರಮ ವಹಿಸಿ; ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ
ಉಡುಪಿ: ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ನಗರಸಭಾ ವ್ಯಾಪ್ತಿಯ ಹಲವೆಡೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ರಸ್ತೆಗಳಲ್ಲಿ ಗುಂಡಿ, ಅಸಮರ್ಪಕ ಚರಂಡಿ ವ್ಯವಸ್ಥೆ ಸಹಿತ ವಿವಿಧ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿಗಳನ್ನು ನಡೆಸುವಂತೆ ನಗರಸಭೆ ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು. ಉಡುಪಿ ನಗರ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ನಗರದ ಪ್ರಮುಖ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ವಹಿಸಿ,ಮುಂಬರುವ ಹಬ್ಬಗಳ […]
ಉಡುಪಿ: ಆ.3ರಿಂದ ಟೀಮ್ ನೇಷನ್ ಫಸ್ಟ್ ನಿಂದ ಉಚಿತ ತರಬೇತಿ ಶಿಬಿರ “ಯೋಧ 2024”
ಉಡುಪಿ: ಟೀಮ್ ನೇಷನ್ ಫಸ್ಟ್ ವತಿಯಿಂದ ಭಾರತೀಯ ರಕ್ಷಣಾ ಪಡೆಗೆ ಸೇರಲು ಇಚ್ಚಿಸುತ್ತಿರುವ ಯುವಕ ಹಾಗೂ ಯುವತಿಯರಿಗೆ ಉಚಿತ ತರಬೇತಿ ಶಿಬಿರ “ಯೋಧ 2024” ಆ.3 ರಿಂದ 18 ರವರೆಗೆ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ಸೂರಜ್ ಕಿದಿಯೂರು ಅವರು, ಆ.3 ರಂದು ಬೆಳಿಗ್ಗೆ 9.30ಕ್ಕೆ ಶಾಸಕ ಯಶ್ಪಾಲ್ ಸುವರ್ಣ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯ ಸಹಕಾರದಲ್ಲಿ ರಕ್ತದಾನ ಶಿಬಿರ […]
ಆ. 2ರಿಂದ ಮಣಿಪಾಲದಲ್ಲಿ ಮೂರು ದಿನಗಳ ಹಲಸು ಮೇಳ
ಉಡುಪಿ: ಅಂಜನ್ ಕನ್‌ಸ್ಟ್ರಕ್ಷನ್ ಆಶ್ರಯದಲ್ಲಿ ಆ.2ರಿಂದ 4 ರವರೆಗೆ ಬೆಳಿಗ್ಗೆೆ 9ರಿಂದ ರಾತ್ರಿ 7ರ ವರೆಗೆ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ಮೂರು ದಿನಗಳ ಹಲಸು ಕೃಷಿ ಮತ್ತು ಆಹಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಆಯೋಜಕರಾದ ಅಕ್ಷತ್ ಪೈ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 2ರಂದು ಬೆಳಿಗ್ಗೆೆ 10.30ಕ್ಕೆೆ ಕಾಂಗ್ರೆೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಉದ್ಯಮಿ ಯತೀಶ್ ಕರ್ಕೇರ ಭಾಗವಹಿಸಲಿದ್ದಾರೆ ಎಂದರು. ಹಲಸು ಮತ್ತು ಹಲಸಿನಿಂದ ತಯಾರಿಸಿದ ವಿವಿಧ ಬಗೆಯ ಐಸ್‌ಕ್ರೀಂ, ಗಟ್ಟಿ, […]
ಉಡುಪಿ:ಕಾಪು ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ
ಉಡುಪಿ: ಕಾಪು ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕೆ ಉತ್ತೇಜನ ನೀಡುವ ಕೆಲಸ ಆಗುತ್ತಿದೆ. ತನ್ನದೇ ಆದ ಗುತ್ತಿಗೆದಾರರಿಗೆ ಹಣ ಮಂಜೂರು ಮಾಡಿಸುವುದು. ಬಂದರು, ಕೈಗಾರಿಕೆಗಳು ಬರುವ ಜಾಗದಲ್ಲಿ ಆಸ್ತಿ ವೃದ್ಧಿಸುವ ಕೆಲಸವನ್ನು ಕಾಪು ಶಾಸಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರ ಹೇಳಿಕೆಗೆ ಉಡುಪಿಯಲ್ಲಿ ಇಂದು ತಿರುಗೇಟು ನೀಡಿದ ಅವರು, ಬರೇ ವಚನದಾನದಿಂದ ಅಥವಾ ಸಂವಿಧಾನದ ಎದುರು ಕುಣಿತ ಭಜನೆ ಮಾಡುವುದರಿಂದ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ ಎಂದು ವಾಗ್ದಾಳಿ […]