ನರ್ಸಿಂಗ್ ಅಭ್ಯರ್ಥಿಗಳನ್ನು ಜರ್ಮನಿಯಲ್ಲಿ ನರ್ಸಿಂಗ್ ಕೆಲಸಕ್ಕೆ ನಿಯೋಜನೆ

ಉಡುಪಿ: ಜರ್ಮನಿ ಸರ್ಕಾರದಿಂದ ಮಾನ್ಯತೆಪಡೆದಿರುವ M/S Talent Orange ಸಂಸ್ಥೆಯ ವತಿಯಿಂದ ಭಾರತ ದೇಶದಿಂದ ಜರ್ಮನಿಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿ.ಎಸ್ಸಿ ಹಾಗೂಜಿ.ಎನ್.ಎಮ್ ವಿದ್ಯಾರ್ಹತೆ ಹೊಂದಿರುವ ೩೮ ವರ್ಷದೊಳಗಿನ ಹೊಸಬರು, ಅನುಭವಿಯುಳ್ಳ ಮಹಿಳೆಯರು ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಈ ಸಂಸ್ಥೆಯು ಸದರಿ ವಿದ್ಯಾರ್ಹತೆ ಹೊಂದಿರುವ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ ೦೮ ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಲಿದೆ. ಸಂಸ್ಥೆಯ ವತಿಯಿಂದಊಟದ ವ್ಯವಸ್ಥೆ ಹಾಗೂ […]

ಕೆ.ಓ.ಎಸ್ ಪರೀಕ್ಷೆ: ನಿಷೇಧಾಜ್ಞೆ

ಉಡುಪಿ: ಕೆ.ಓ.ಎಸ್ ಪರೀಕ್ಷೆಯು ಜುಲೈ ೨೯ ರಿಂದಆಗಸ್ಟ್ ೭ ರ ವರೆಗೆ ನಗರದ ಡಯಟ್ ಸಂಸ್ಥೆಯಲ್ಲಿನಡೆಯಲಿದ್ದು, ಪರೀಕ್ಷೆಗಳು ಸುಸೂತ್ರವಾಗಿ ಮತ್ತುದೋಷರಹಿತವಾಗಿ ನಡೆಸಲು ಹಾಗೂ ನಡೆಯಬಹುದಾದದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿಪಡಿಸಿದ ಪರೀಕ್ಷಾ ಕೇಂದ್ರದ ಸುತ್ತಲೂ ೨೦೦ ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ೧೯೭೩ ರ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ ೧೪೪(೧) ರಂತೆ ನಿಷೇಧಾಜ್ಞೆಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿಆದೇಶಿಸಿರುತ್ತಾರೆ.

ಪಿ.ಜಿ.ಪನ್ನಗಾ. ರಾವ್ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ.

ಉಡುಪಿ: ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಪಿ.ಜಿ.ಪನ್ನಗಾ. ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಯಾಗಿರುತ್ತಾರೆ. ಈಕೆ ಉಡುಪಿಯ ಗಣೇಶ್ ರಾವ್ ಹಾಗೂ ಸುಮನಾ ದಂಪತಿಗಳ ಪುತ್ರಿ. ಸೃಷ್ಟಿ ನೃತ್ಯ ಕಲಾ ಕುಟೀರ ಉಡುಪಿಯಆಚಾರ್ಯ ಮಂಜರಿ ಚಂದ್ರ ಪುಷ್ಪರಾಜ್ ರವರ ಶಿಷ್ಯೆಯಾಗಿರುತ್ತಾರೆ.

ಇಂದು (ಜು.26) ಹೆಬ್ರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.

ಹೆಬ್ರಿ: ಇಂದು (ಜು.26) ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಗಾಳಿ ಮಳೆಯಾಗುತ್ತಿರುವ ಹಿನ್ನೆಲೆ, ಅಂಗನವಾಡಿ, ಪ್ರಾಥಮಿಕ ಪಾಠಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ದಿನಾಂಕ 26.07.2024 ರಂದು ಶುಕ್ರವಾರ ರಜೆಯನ್ನು ತಾಲ್ಲೂಕಿನ ತಹಸಿಲ್ದಾರ್ ಗಳು ಘೋಷಣೆ ಮಾಡಿದ್ದಾರೆ.