ಹಿರಿಯಡಕ: ತೆಂಗಿನ ಮರ ಬಿದ್ದು ಮನೆ ಮತ್ತು ಎರಡು ರಿಕ್ಷಾಕ್ಕೆ ಹಾನಿ
ಹಿರಿಯಡಕ: ಉಡುಪಿ ಜಿಲ್ಲೆಯಲ್ಲಿ ಬಾರಿ ಗಾಳಿಮಳೆಯಿಂದ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆ ಹಾಗೂ ಎರಡು ಆಟೋ ರಿಕ್ಷಾ ಜಖಂಗೊಂಡ ಘಟನೆ ಜು. 26 ರಂದು ಶುಕ್ರವಾರ ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಸಂಭವಿಸಿದೆ. ಶುಕ್ರವಾರ ನಸುಕಿನ ವೇಳೆ 2 ಗಂಟೆ ಸುಮಾರಿಗೆ ಬೀಸಿದ ಗಾಳಿ ಮಳೆಗೆ ಬಜೆಯ ಅಮ್ಮಣ್ಣಿ ಶೇರಿಗಾರ್ತಿಎಂಬವರ ಮನೆ ಸಮೀಪದ ತೆಂಗಿನಮರ ಬಿದ್ದು ಮನೆ ಹಾನಿಯಾಗಿದ್ದು, ಮನೆ ಬಳಿ ನಿಲ್ಲಿಸಿದ್ದ ಅಮ್ಮಣಿಯವರ ಮಕ್ಕಳಾದ ಗಣಪತಿ ಶೇರಿಗಾರ ಹಾಗೂ ರವಿ ಶೇರಿಗಾರಎಂಬವರ ಆಟೋ […]
ಬಂಟ್ವಾಳ : ಆ.11ರಂದು ಮಡಿವಾಳರ ಜಿಲ್ಲಾ ಮಟ್ಟದ ‘ಕೆಸರ್ ಡೊಂಜಿ ದಿನ -2024’ ಕಾರ್ಯಕ್ರಮ
ಬಂಟ್ವಾಳ: ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಘಟಕ ಇದರ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಸಹಕಾರದೊಂದಿಗೆ ಬಿ.ಸಿ. ರೋಡ್ ಸ್ಪರ್ಶಾ ಕಲಾ ಮಂದಿರ ಇದರ ಕೆಸರು ಗದ್ದೆಯಲ್ಲಿ ಆ.11 ನಡೆಯುವ ಕೆಸರ್ ಡೊಂಜಿ ದಿನ -2024 ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ತಾಲೂಕು ಸಂಘ ಅಧ್ಯಕ್ಷ ಹರೀಶ್ ಮಂಕುಡೆ, ಗೌರವಧ್ಯಕ್ಷರಾದ ಎನ್.ಕೆ ಶಿವ ಖಂಡಿಗ,ಕಾರ್ಯದರ್ಶಿ ಜಗದೀಶ್ ಖಂಡಿಗ ದ.ಕ ಜಿಲ್ಲಾ […]
ಪುಸ್ತಕ ಬಹುಮಾನ : ಕೃತಿಗಳ ಆಹ್ವಾನ
ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯವತಿಯಿಂದ ೨೦೨೩ ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ.ಲೇಖಕರು, ಪ್ರಕಾಶಕರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್ , ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು ಈ ವಿಳಾಸಕ್ಕೆ ರಿಜಿಸ್ರ‍್ಡ್ ಅಂಚೆ/ ಕೊರಿಯರ್ ಮೂಲಕಅಥವಾ ಖುದ್ದಾಗಿ ಆಗಸ್ಟ್ ೩೧ ರ ಒಳಗಾಗಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್ www.sahithyaacademy.karnataka.govt.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟಾರ್ […]
ನಗರಸಭೆ ವತಿಯಿಂದ ನಿಷೇಧಿತ ಪ್ಲಾಸ್ಟಿಕ್ ವಶ
ಉಡುಪಿ: ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯ ವತಿಯಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದು, ಮಂಗಳವಾರ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಮಾರ್ಕೆಟಿಂಗ್ ಉದ್ದಿಮೆಯೊಂದರಲ್ಲಿ ೪೧೫ ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಕ್ಕೆ ಪಡೆದು ರೂ. ೫೦೦೦ದಂಡ ವಿಧಿಸಲಾಯಿತು.ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್, ಪ್ರಭಾರ ಆರೋಗ್ಯ ನಿರೀಕ್ಷಕ ಸುರೇಂದ್ರ ಹೋಬಳಿದಾರ್, ಸೂಪರ್ ವೈಸರ್‌ಗಳಾದ ಭೋಜನಾಯ್ಕ್, ಸುರೇಶ್ ಶೆಟ್ಟಿ, ನಾಗರ್ಜುನ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ವಿವಿಧ ಹುದ್ದೆ: ಅರ್ಜಿ ಆಹ್ವಾನ
ಉಡುಪಿ: ಸ್ಟಾಫ್ ಸೆಲೆಕ್ಷನ್ ಕಮೀಷನ್ಕೇಂದ್ರ ನೇಮಕಾತಿ ಪ್ರಾಧಿಕಾರವು ಬಹು ಕಾರ್ಯಕ ಸಿಬ್ಬಂದಿ ತಾಂತ್ರಿಕೇತರ) ಎಂ.ಟಿ.ಎಸ್ ಮತ್ತು ಹವಾಲ್ದಾರ್ (ಸಿ.ಬಿ.ಐ.ಸಿ & amp; ಸಿ.ಬಿ.ಎನ್.)ಹುದ್ದೆಗಳ ನೇಮಕಾತಿಗೆ ಆನ್‌ಲೈನ್ www.ssckkr.kar.nic.in ಮತ್ತುhttps://ssc.gov.in ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ೨೦೨೪ ರ ಆಗಸ್ಟ್ ೦೧ ರಂತೆ ಎಂ.ಟಿ.ಎಸ್ ಹುದ್ದೆಗಳಿಗೆ ೧೮ ರಿಂದ ೨೫ ಹಾಗೂ ಹವಾಲ್ದಾರ್ ಹುದ್ದೆಗಳಿಗೆ ೧೮ ರಿಂದ ೨೭ ವರ್ಷಗಳ ನಿರ್ದಿಷ್ಠ ವಯೋಮಿತಿ ಹೊಂದಿರುವುದರೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. […]