ಭಾರೀ ಸುಂಟರಗಾಳಿ; ಕೃಷ್ಣಮಠದ ಬೃಂದಾವನ ಕಟ್ಟಡಕ್ಕೆ ಹಾನಿ
ಉಡುಪಿ: ಭಾರೀ ಸುಂಟರಗಾಳಿಗೆ ಉಡುಪಿ ಶ್ರೀ ಕೃಷ್ಣಮಠ ಅಶ್ವತ್ಥಕಟ್ಟೆಯ ಬೃಂದಾವನ ಕಟ್ಟಡದ ಮಾಡಿನ ಶೀಟುಗಳು ಹಾರಿ ಹೋಗಿವೆ. ಅಲ್ಲದೆ, ರಾಜಾಂಗಣದ ಬಳಿಯ ಹೋಟೆಲ್ ವೊಂದರ ಮೇಲ್ಚಾವಣಿ ಕೂಡ ಸುಂಟರಗಾಳಿಯ ಹೊಡೆತಕ್ಕೆ ಮುರಿದುಬಿದ್ದಿದೆ. ಇದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಗುರುವಾರ ತಡರಾತ್ರಿ ಗಾಳಿ ಅಬ್ಬರಕ್ಕೆೆ ಜನತೆ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹಾನಿ ಪ್ರಮಾಣ ಮುಂದುವರಿದಿದ್ದು, ಕುಂದಾಪುರ, ಬೈಂದೂರು ಭಾಗದಲ್ಲಿ ಗರಿಷ್ಠ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 70ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.
ರಾಜ್ಯ ಸರಕಾರದ ದಿವಾಳಿತನ, ಹಗರಣಗಳನ್ನು ಮರೆಮಾಚಲು ಯತ್ನಿಸುತ್ತಿರುವ ಸೊರಕೆ ನಡೆ ಖಂಡನೀಯ; ಕಿಶೋರ್ ಕುಮಾರ್ ಕುಂದಾಪುರ
ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜನತೆಯಿಂದ ತಿರಸ್ಕರಿಸಲ್ಪಟ್ಟ ವಿನಯ್ ಕುಮಾರ್ ಸೊರಕೆ, ಗೌರವಯುತವಾಗಿ ರಾಜಕೀಯ ನಿವೃತ್ತಿ ಪಡೆಯುವ ಬದಲು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ದಿವಾಳಿತನ ಮತ್ತು ಹಗರಣಗಳನ್ನು ಮರೆಮಾಚುವ ದುರುದ್ದೇಶದಿಂದ ಕ್ಷುಲ್ಲಕ ರಾಜಕಾರಣ ನಡೆಸುತ್ತಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವಿರುದ್ಧ ಕೀಳುಮಟ್ಟದ ಅಪಪ್ರಚಾರ ನಡೆಸುತ್ತಿರುವ ಸೊರಕೆ ನಡೆ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.ಉಡುಪಿ ಪತ್ರಿಕಾ ಭವನದಲ್ಲಿ ಇಂದು ನಡೆದ […]
ದರ್ಶನ್ ಬಂಧನ ಮುಕ್ತಿಗಾಗಿ ಪತ್ನಿಯಿಂದ ಕೊಲ್ಲೂರಿನಲ್ಲಿ ಪ್ರಾರ್ಥನೆ
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಶಕ್ತಿ ಕೇಂದ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಚಿತ್ರನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ. ತಮ್ಮ ಆಪ್ತರ ಜೊತೆ ಗುರುವಾರ ಸಂಜೆ ಇಲ್ಲಿಗೆ ಆಗಮಿಸಿದ ವಿಜಯಲಕ್ಷ್ಮಿ ಅವರು ಇಂದು ಬೆಳಿಗ್ಗೆ ನವ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ- ಸಂಕಲ್ಪ ಮಾಡಿರುವ ವಿಜಯಲಕ್ಷ್ಮಿರಾತ್ರಿ ಕೊಲ್ಲೂರಿನಲ್ಲಿಯೇ ವಾಸ್ತವ್ಯ ಹೂಡಿ ಮುಂಜಾನೆ ನವಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿನ ಅರ್ಚಕರಾದ ನರಸಿಂಹ ಅಡಿಗ ನೇತೃತ್ವದಲ್ಲಿ ಚಂಡಿಕಾಯಾಗ ನಡೆಯಿತು.ಅರ್ಚಕ ಸುಬ್ರಹ್ಮಣ್ಯ ಅಡಿಗ ಚಂಡಿಕಾಯಾಗಕ್ಕೆ ಸಂಕಲ್ಪ […]
ಆವರ್ಸೆ: ಬಸ್ ಡಿಕ್ಕಿಯಾಗಿ ಗಾಯಗೊಂಡ ಕಾಡುಕೋಣ
ಉಡುಪಿ: ಕಾಡುಕೋಣವೊಂದು ಬಸ್ ಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬ್ರಹ್ಮಾವರ ತಾಲೂಕಿನ ಆವರ್ಸೆ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.ರಸ್ತೆ ದಾಟುವ ಧಾವಂತದಲ್ಲಿ ಕಾಡುಕೋಣ ಬಸ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾಡುಕೋಣ ಗಂಭೀರವಾಗಿ ಗಾಯಗೊಂಡಿದ್ದು, ಕೆಲಹೊತ್ತು ಅಡ್ಡಾದಿಡ್ಡಿಯಾಗಿ ಓಡಾಡಿದೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ಅರವಳಿಕೆ ತಜ್ಞರು ಕಾಡುಕೋಣಕ್ಕೆ ಅರವಳಿಕೆ ಮದ್ದು ನೀಡಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಪಶು ಆರೈಕೆ ಕೇಂದ್ರಕ್ಕೆ ಸಾಗಿಸಲಾಯಿತು.
ಉಡುಪಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರಕಾರದ ಅವಗಣನೆ ವಿರುದ್ಧ ಕಾಂಗ್ರೆಸ್ ನಿಂದ ಚೊಂಬು ಹಿಡಿದುಕೊಂಡು ಪ್ರತಿಭಟನೆ
ಉಡುಪಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯ ಸರಕಾರದ ಅವಗಣನೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೈಯಲ್ಲಿ ಚೊಂಬು ಹಿಡಿದುಕೊಂಡು ಉಡುಪಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಪಾಲ್ಗೊಂಡಿದ್ದ ನೂರಾರು ಕೈ ಕಾರ್ಯಕರ್ತರು ಚೊಂಬು ಪ್ರದರ್ಶಿಸಿ ಕೇಂದ್ರ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಅವರು, ಭಾರತ ಇಂದು ಬಡತನದಲ್ಲಿ ಜಗತ್ತಿನಲ್ಲಿಯೇ 111ಸ್ಥಾನದಲ್ಲಿದೆ. ಶೇ.35ರಷ್ಟು […]